ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕಾಂಗ್ರೆಸ್ ಶವಪೆಟ್ಟಿಗೆಗೆ ಲಾಲೂ ಕೊನೆಯ ಮೊಳೆ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಂಗ್ರೆಸ್ ಶವಪೆಟ್ಟಿಗೆಗೆ ಲಾಲೂ ಕೊನೆಯ ಮೊಳೆ?
ನವದೆಹಲಿ: ಅತ್ತ ವರುಣ್ ಗಾಂಧಿ ವಿವಾದ, ಅರುಣ್ ಜೇಟ್ಲಿ ಮುನಿಸು ಮುಂತಾದ ವಿಚಾರಗಳು ಬಿಜೆಪಿ ತಲೆ ತಿನ್ನುತ್ತಿದ್ದರೆ, ಇತ್ತ ಕಾಂಗ್ರೆಸ್ ಪಕ್ಷವೂ ಆರಾಮವಾಗಿಲ್ಲ. ಐಪಿಲ್ ವಿಚಾರ ಮತ್ತು ಪ್ರಧಾನಿ ಹುದ್ದೆಯ ಆಕಾಂಕ್ಷೆ ಈ ಎಲ್ಲ ವಿಚಾರಗಳ ಹಿನ್ನೆಲೆಯಲ್ಲಿ ಎನ್‌ಸಿಪಿ ಮತ್ತು ಕಾಂಗ್ರೆಸ್ ನಡುವೆ ಬಿರುಕು ಬಿಟ್ಟಿದೆ. ಈ ಮಧ್ಯೆ ಲಾಲೂ ಪ್ರಸಾದ್ ಯಾದವ್ ಮತ್ತು ರಾಮ್ ವಿಲಾಸ್ ಪಾಸ್ವಾನ್ ಅವರುಗಳು ಒಟ್ಟು ಸೇರಿ ಕಾಂಗ್ರಸ್‌ಗೆ ತಲೆ ನೋವು ತಂದಿಟ್ಟಿದ್ದಾರೆ.

ಕಾಂಗ್ರೆಸ್ ನೇತೃತ್ವದ ಯುಪಿಎಯ ಭಾಗವಾಗಿದ್ದ ಲಾಲು ಅವರ ಆರ್‌ಜೆಡಿ ಮತ್ತು ಪಾಸ್ವಾನ್ ಅವರು ಎಲ್‌ಜೆಪಿ ಬಿಹಾರದಲ್ಲಿ ಕಾಂಗ್ರೆಸ್‌ಗೆ ಬಿಟ್ಟಿದ್ದ ಮ‌ೂರು ಸ್ಥಾನಗಳಲ್ಲಿ ಸಹ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಳಿಸುವುದಾಗಿ ಭಾನುವಾರ ಘೋಷಿಸಿತ್ತು. ಈ ಮ‌ೂಲಕ ಕಾಂಗ್ರೆಸ್ 37 ಸ್ಥಾನಗಳಲ್ಲಿ ಸ್ಫರ್ಧಿಸಲು ನಿರ್ಧರಿಸಿರುವುದಕ್ಕೆ ಸಡ್ಡು ಹೊಡೆದಿದೆ.

ಲಾಲೂ ಪ್ರಸಾದ್ ಯಾದವ್ ಅವರು ತಾನಿನ್ನೂ ಯುಪಿಎಯ ಅವಿಭಾಜ್ಯ ಅಂಗವೆಂದು ಹೇಳುತ್ತಿದ್ದರೂ, ಯುಪಿಎಯಲ್ಲಿನ ಚುನಾವಣಾ ಪೂರ್ವ ಮೈತ್ರಿ ಮುರಿದು ಬಿದ್ದಿದೆ. ಅಲ್ಲದೆ, ಲಾಲೂ ಸಂಬಂಧಿ ಸಾಧು ಯಾದವ್‌ಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿರುವುದನ್ನು ಟೀಕಿಸಿರುವ ಲಾಲೂ, ಕಾಂಗ್ರೆಸ್ ಆರ್‌ಜೆಡಿಯಿಂದ ಅಭ್ಯರ್ಥಿಗಳನ್ನು ಆಮದು ಮಾಡುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.

ಈ ಮಧ್ಯೆ ಕಾಂಗ್ರೆಸ್ ತಾನು ಸ್ವತಂತ್ರವಾಗಿ ಚುನಾವಣೆಗೆ ಹೋಗುವುದಾಗಿ ಹೇಳುತ್ತಿದೆ. ಅಲ್ಲದೆ, ರಾಹುಲ್ ಗಾಂಧಿ ನೇತೃತ್ವದ ಪಂಗಡ ಒಂದು ಹೇಳುವ ಪ್ರಕಾರ ಕಾಂಗ್ರೆಸ್ ಕಳೆದುಕೊಳ್ಳುವುದು ಏನೂ ಇಲ್ಲ. ಈ ಬಿರುಕಿನಿಂದಾಗಿ ಕಾಂಗ್ರೆಸನ್ನು ಇನ್ನಷ್ಟು ಸುದೃಢಗೊಳಿಸಬಹುದಾಗಿ ಎಂಬುದು ಇದರ ಅಭಿಪ್ರಾಯ.

"ರಾಹುಲ್‌ ಇದನ್ನೇ ಬಯಸಿದ್ದರು. ನಾವು ದೀರ್ಘಕಾಲೀನ ಮತ್ತು ಅಲ್ಪಕಾಲೀನ ಗುರಿಗಳನ್ನು ಹೊಂದಿದ್ದೇವೆ" ಎಂದು ಕಾಂಗ್ರೆಸ್ ವಕ್ತಾರ ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರಾಷ್ಟ್ರಪತಿಗಳಿಂದ ಚುನಾವಣಾ ಅಧಿಸೂಚನೆ
ನ್ಯಾನೋ ಕನಸು ನನಸಾಗಲು ಕ್ಷಣಗಣನೆ
ವರುಣ್ ತಪ್ಪಿತಸ್ಥ, ಕಣಕ್ಕಿಳಿಸಬೇಡಿ: ಚುನಾವಣಾ ಆಯೋಗ
ರಸ್ತೆ ಅಪಘಾತ: ನಾಲ್ವರು ಬಲಿ
ಒರಿಸ್ಸಾ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಇಂದು ಪ್ರಕಟ
ಗುಂಡಿನ ಚಕಮಕಿಯಲ್ಲಿ ಮೇಜರ್ ಸಾವು