ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ನಂಗೊಬ್ಬ ಲಾಯರ್ ಬೇಕು: ಕಸಬ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಂಗೊಬ್ಬ ಲಾಯರ್ ಬೇಕು: ಕಸಬ್
ಮುಂಬೈ ದಾಳಿಕೋರರಲ್ಲಿ ಜೀವಂತ ಸೆರೆ ಸಿಕ್ಕಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ಸೋಮವಾರ ಮುಂಬೈನ ವಿಶೇಷ ನ್ಯಾಯಾಲಯದ ಮುಂದೆ ತಾನು ಪಾಕಿಸ್ತಾನದ ಫರೀದ್‌ಕೋಟೆಯ ನಿವಾಸಿ ಎಂದು ಒಪ್ಪಿಕೊಂಡಿದ್ದಾನೆ.

ಮುಂಬೈದಾಳಿಯ ಕುರಿತು ಸೋಮವಾರ ವಿಚಾರಣೆ ಆರಂಭವಾಗಿದೆ. ಮುಂಜಾನೆ ಪ್ರಥಮ ವಿಚಾರಣೆಯ ವೇಳೆ ಆತ ತನಗೆ ವಕೀಲರ ಸೇವೆಯನ್ನು ಬಯಸಿದ್ದಾನೆ. ಎರಡು ತಿಂಗಳ ಹಿಂದೆ ಮುಂಬೈನ ವಕೀಲರ ಸಂಘವು ಕಸಬ್ ಪರ ವಾದಿಸುವುದಿಲ್ಲ ಎಂಬ ಅವಿರೋಧ ನಿರ್ಧಾರ ಕೈಗೊಂಡಿದೆ. ಹಾಗಾಗಿ ಆತನನ್ನು ಇದುವರೆಗೆ ಯಾರೂ ಪ್ರತಿನಿಧಿಸದೇ ರಿಮಾಂಡ್ ವಿಚಾರಣೆ ನಡೆಸಲಾಗಿತ್ತು.

ಅರ್ಥರ್ ರಸ್ತೆ ಜೈಲಿನ ಆವರಣದಲ್ಲಿನ ವಿಶೇಷ ನ್ಯಾಯಾಲಯ ನಿರ್ಮಾಣ ಕಾರ್ಯ ಇನ್ನಷ್ಟೆ ಸಂಪೂರ್ಣಗೊಳ್ಳಬೇಕಿರುವ ಕಾರಣ ಕಸಬ್ ಹಾಗೂ ಪ್ರಕರಣದ ಇನ್ನಿಬ್ಬರು ಆರೋಪಿಗಳ ವಿಚಾರಣೆಯನ್ನು ಮುಂಬೈ ಸೆಷನ್ಸ್ ನ್ಯಾಯಾಲಯದಲ್ಲಿ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆಸಲಾಯಿತು.

ಕಸಬ್‌ ಅಲ್ಲದೆ, ಫಾಹಿಮ್ ಅನ್ಸಾರಿ ಹಾಗೂ ಶಹಾಬುದ್ದೀನ್ ಮೊಹಮ್ಮದ್ ಅವರ ವಿಚಾರಣೆಯನ್ನೂ ನಡೆಸಲಾಯಿತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವರುಣ್ ಭಗವದ್ಗೀತೆ ಓದಿ ಅರ್ಥಮಾಡಿಕೊಳ್ಳಲಿ: ಪ್ರಿಯಾಂಕಾ
ದತ್ ಸ್ಪರ್ಧಿಸಬಹುದಾದ್ರೆ,ವರುಣ್ ಸ್ಪರ್ಧೆ ಯಾಕೆ ಸಾಧ್ಯವಿಲ್ಲ: ಬಿಜೆಪಿ
ಲಾಲೂ, ಪಾಸ್ವಾನ್ ವಿರುದ್ಧ ಅಭ್ಯರ್ಥಿ ಕಣಕ್ಕಿಳಿಸುವುದಿಲ್ಲ- ಕಾಂಗ್ರೆಸ್
ಕಾಂಗ್ರೆಸ್ ಶವಪೆಟ್ಟಿಗೆಗೆ ಲಾಲೂ ಕೊನೆಯ ಮೊಳೆ?
ರಾಷ್ಟ್ರಪತಿಗಳಿಂದ ಚುನಾವಣಾ ಅಧಿಸೂಚನೆ
ನ್ಯಾನೋ ಕನಸು ನನಸಾಗಲು ಕ್ಷಣಗಣನೆ