ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಆಯೋಗದ 'ಅವಸರ'ದ ಕ್ರಮ: ವರುಣ್‌ಗೆ ಶಂಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆಯೋಗದ 'ಅವಸರ'ದ ಕ್ರಮ: ವರುಣ್‌ಗೆ ಶಂಕೆ
PTI
ಚುನಾವಣಾ ಆಯೋಗದ ವಿರುದ್ಧ ತೀವ್ರವಾಗಿ ಕಿಡಿ ಕಾರಿರುವ ಫಿಲಿಬಿಟ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಗಾಂಧಿ ಕುಟುಂಬದ ಕುಡಿ ವರುಣ್ ಗಾಂಧಿ, ಆರೋಪಿತ ಹಗೆನುಡಿ ಬಗ್ಗೆ ಚುನಾವಣಾ ಆಯೋಗವು ಅಸಹಜವಾಗಿ ಅವಸರದ ನಿರ್ಧಾರ ಕ್ರಮ ಕೈಗೊಂಡಿದ್ದು, ರಾಜಕೀಯ ಒತ್ತಡದಿಂದ ಈ ರೀತಿ ಮಾಡುವಂತೆ ತೋರುತ್ತಿದೆ ಎಂದು ಆರೋಪಿಸಿದ್ದಾರೆ.

ಹಗೆ ನುಡಿ ಆರೋಪದ ಕುರಿತು ತನ್ನ ವಾದ ಮಂಡಿಸಲು ತನಗೆ ಅಥವಾ ತನ್ನ ಪ್ರತಿನಿಧಿಗೆ 'ನ್ಯಾಯಯುತ ಅವಕಾಶ'ವನ್ನೂ ನೀಡಲಿಲ್ಲ ಎಂದು ಚುನಾವಣಾ ಆಯೋಗಕ್ಕೆ ಬರೆದಿರುವ ಪತ್ರದಲ್ಲಿ ತಿಳಿಸಿರುವ ವರುಣ್ ಗಾಂಧಿ, 'ಸತ್ಯಾಂಶ ಖಚಿತಪಡಿಸಿಕೊಳ್ಳುವ ಯಾವುದೇ ರೀತಿಯ ಪ್ರಯತ್ನ ಮಾಡದೆ ಈ ರೀತಿಯ ಕಟುವಾದ ಕ್ರಮಕ್ಕೆ ಮುಂದಾಗಿರುವುದು ತೀರಾ ಆಘಾತಕಾರಿ' ಎಂದರು.

ಚುನಾವಣಾ ಪ್ರಚಾರ ಸಭೆಯಲ್ಲಿ ಕೋಮು ಪ್ರಚೋದನಾ ಭಾಷಣ ಮಾಡಿದ್ದಾರೆ ಎಂಬ ಆರೋಪ ಬಂದಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು, ವರುಣ್ ಗಾಂಧಿಯನ್ನು ಚುನಾವಣಾ ಅಭ್ಯರ್ಥಿಯಾಗಿಸದಂತೆ ಬಿಜೆಪಿಗೆ ಸೂಚಿಸಿತ್ತು.

ಚುನಾವಣಾ ಆಯೋಗದ ನೋಟಿಸ್ ಭಾನುವಾರ ಮಾಧ್ಯಮದ ಕೆಲವು ವರ್ಗಗಳಿಗೆ ಬಿಡುಗಡೆ ಮಾಡಿದ ನಂತರ ರಾತ್ರಿ 11 ಗಂಟೆಗೆ ನನ್ನ ಕೈಸೇರಿತ್ತು. ನನಗೆ ನನ್ನ ನಿಲುವು ಮಂಡಿಸಲು ಒಂದು ತುಣುಕು ಅವಕಾಶವನ್ನೂ ನೀಡದೆ ಆಯೋಗವು ಈ ಕ್ರಮ ಕೈಗೊಂಡಿರುವ ಬಗ್ಗೆ ನಿರಾಶೆ ವ್ಯಕ್ತಪಡಿಸಲು ಮಾತ್ರ ನನ್ನ ಬಳಿ ಸಮಯವಿತ್ತು ಎಂದ ಅವರು, ಇಷ್ಟೊಂದು ಅವಸರದಲ್ಲಿ ಈ ಕ್ರಮ ಕೈಗೊಂಡಿರುವ ಬಗ್ಗೆ 'ರಾಜಕೀಯ ಒತ್ತಡ' ಕಾರಣವಿರಬಹುದು ಎಂಬ ಬಗ್ಗೆ ಸಂದೇಹ ವ್ಯಕ್ತಪಡಿಸಿದರು.

ನನ್ನ ಮೇಲಿರುವ ಆಪಾದನೆಗಿಂತಲೂ ಹೆಚ್ಚು ದೊಡ್ಡ ಅಪರಾಧ ಮಾಡಿರುವವರು ಅಥವಾ ಈ ಬಗ್ಗೆ ವಿಚಾರಣೆ ಎದುರಿಸುತ್ತಿರುವವರು ಚುನಾವಣಾ ಕಣದಲ್ಲಿದ್ದಾರೆ. ವಾಸ್ತವವಾಗಿ 1984ರ ದಂಗೆಗಳಲ್ಲಿ ಶಿಕ್ಷೆಗೆ ಗುರಿಯಾದವರಿಗೆ ಕೂಡ ಕೆಲವು ರಾಜಕೀಯ ಪಕ್ಷಗಳು ಟಿಕೆಟ್ ನೀಡಿವೆ. ಈ ರೀತಿ ಇದ್ದರೂ, ಚುನಾವಣಾ ಆಯೋಗದ ಈ 'ಶಿಫಾರಸು ಅಧಿಕಾರವ್ಯಾಪ್ತಿ'ಯು ನನ್ನವರೆಗೆ ಮಾತ್ರ ಸೀಮಿತವಾಗಿರಿಸಿದ್ದು ಆಶ್ಚರ್ಯ ತಂದಿದೆ. ಇದನ್ನೆಲ್ಲಾ ನೋಡಿದರೆ, ಆಯೋಗದ ಕ್ರಮವು ರಾಜಕೀಯ ಒತ್ತಡದಿಂದ ಬಂದಿದೆ ಎಂದು ಯಾರಾದರೂ ಶಂಕಿಸಬಹುದಾಗಿದೆ ಎಂದು ವರುಣ್ ಗಾಂಧಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಪೂರಕ ಓದು: ದತ್, ಟೈಟ್ಲರ್ ಓಕೆ, ವರುಣ್ ಬೇಡ ಯಾಕೆ?: ಬಿಜೆಪಿ
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ನಂಗೊಬ್ಬ ಲಾಯರ್ ಬೇಕು: ಕಸಬ್
ವರುಣ್ ಭಗವದ್ಗೀತೆ ಓದಿ ಅರ್ಥಮಾಡಿಕೊಳ್ಳಲಿ: ಪ್ರಿಯಾಂಕಾ
ದತ್ ಸ್ಪರ್ಧಿಸಬಹುದಾದ್ರೆ,ವರುಣ್ ಸ್ಪರ್ಧೆ ಯಾಕೆ ಸಾಧ್ಯವಿಲ್ಲ: ಬಿಜೆಪಿ
ಲಾಲೂ, ಪಾಸ್ವಾನ್ ವಿರುದ್ಧ ಅಭ್ಯರ್ಥಿ ಕಣಕ್ಕಿಳಿಸುವುದಿಲ್ಲ- ಕಾಂಗ್ರೆಸ್
ಕಾಂಗ್ರೆಸ್ ಶವಪೆಟ್ಟಿಗೆಗೆ ಲಾಲೂ ಕೊನೆಯ ಮೊಳೆ?
ರಾಷ್ಟ್ರಪತಿಗಳಿಂದ ಚುನಾವಣಾ ಅಧಿಸೂಚನೆ