ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಸ್ವರ್ಣಮಂದಿರಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸ್ವರ್ಣಮಂದಿರಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ
ಇತ್ತೀಚೆಗೆ ಬೈಪಾಸ್ ಸರ್ಜರಿಗೊಳಗಾಗಿ ಚೇತರಿಸಿಕೊಂಡಿರುವ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರು ಮಂಗಳವಾರ ಮುಂಜಾನೆ ಸಿಖ್ಖರ ಪವಿತ್ರ ಸ್ಥಳವಾಗಿರುವ ಸ್ವರ್ಣ ಮಂದಿರಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.

ಪತ್ನಿ ಗುರುಶರಣ್ ಕೌರ್ ಅವರು ಪ್ರಧಾನಿಯವರೊಂದಿಗೆ ಇದ್ದರು. ಬಿಗಿ ಭದ್ರತೆಯೊಂದಿಗೆ ಬೆಳಕು ಹರಿಯವ ವೇಳೆಗೆ ಅವರು ಮಂದಿರಕ್ಕೆ ಆಗಮಿಸಿದರು. ಸ್ವರ್ಣಮಂದಿರವೆಂದು ಕರೆಸಿಕೊಳ್ಳುತ್ತಿರುವ ಸಾಹಿಬ್ ಮಂದಿರದ ಪವಿತ್ರಕೊಳಕ್ಕೆ ಪ್ರಧಾನಿಯವರು ಪ್ರದಕ್ಷಿಣೆ ಹಾಕಿದಾಗ ಹರ್ಮಂದರ್ ಸೇವಾದಾರ್‌(ಸ್ವಯಂಸೇವಕರು) ಹಾಗೂ ಭದ್ರತಾ ಸಿಬ್ಬಂದಿಗಳು ಜತೆಯಲ್ಲಿ ಹೆಜ್ಜೆ ಹಾಕಿದರು. ಮಂದಿರದಲ್ಲಿ ಪ್ರಧಾನಿಯವರಿಗೆ ಕೇಸರಿ ಬಣ್ಣ 'ಸಿರೋಪ' (ಶಿರವಸ್ತ್ರ) ನೀಡಲಾಯಿತು. ಅವರು ದೇವಾಲಯದಲ್ಲಿ ಧ್ಯಾನಾಸಕ್ತರಾಗಿ ಕುಳಿತು ಗುರುಬಾನಿಯನ್ನು ಆಲಿಸಿದರು.

ಅವರು ಕಳೆದ ಜನವರಿ 24ರಂದು ದೆಹಲಿಯ ಎಐಐಎಂಎಸ್‌ನಲ್ಲಿ ಬೈಪಾಸ್ ಸರ್ಜರಿಗೊಳಗಾದ ಬಳಿಕ ಮಂದಿರಕ್ಕೆ ನೀಡುತ್ತಿರುವ ಪ್ರಥಮ ಭೇಟಿ ಇದಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸೌಮ್ಯಕೊಲೆ ಪ್ರಕರಣದ ರೂವಾರಿಗಳ ಪತ್ತೆ
ಆಯೋಗ-ಬಿಜೆಪಿ ನಡುವಿನ ಯುದ್ಧ ತಾರಕಕ್ಕೆ
ಇಂಫಾಲ್: ಇಬ್ಬರು ಉಗ್ರರ ಹತ್ಯೆ
ನಕ್ಸಲರಿಂದ ಅಪಹೃತ ನಾಲ್ವರ ಹತ್ಯೆ
ಆಯೋಗದ 'ಅವಸರ'ದ ಕ್ರಮ: ವರುಣ್‌ಗೆ ಶಂಕೆ
ನಂಗೊಬ್ಬ ಲಾಯರ್ ಬೇಕು: ಕಸಬ್