ದ್ವೇಷಭಾಷಣ ಮಾಡಿರುವ ವರುಣ್ ಗಾಂಧಿಗೆ ಸಂಪೂರ್ಣ ಬೆಂಬಲ ನೀಡಿರುವ ಬಿಜೆಪಿಯ ಕ್ರಮವನ್ನು ಖಂಡಿಸಿರುವ ಮುಸ್ಲಿಂ ನಾಯಕರು, ವರುಣ್ ಅಭ್ಯರ್ಥಿತನವನ್ನು ನಿಷೇಧಿಸಲು ಒತ್ತಾಯಿಸಿದ್ದು, ಇದಕ್ಕೆ ವಿಫಲವಾದಲ್ಲಿ ಇನ್ನಷ್ಟು ಕೋಮುವಾದ ಅಭಿಮಾನಿಗಳು ಹುಟ್ಟಿಕೊಳ್ಳಲು ಇದು ಉತ್ತೇಜನ ನೀಡಿದಂತಾಗುತ್ತದೆ ಎಂದು ಎಚ್ಚರಿಸಿದೆ.
"ಬಿಜೆಪಿಯು ಪಿಲಿಭಿತ್‌ನಲ್ಲಿ ವರುಣ್ ಗಾಂಧಿ ಅವರ ಅಭ್ಯರ್ಥಿತನವನ್ನು ಒತ್ತಾಯಿಸುವುದನ್ನು ಕಂಡರೆ, ಮುಂದಿನ ಚುನಾವಣೆಯಲ್ಲಿ ತನ್ನಕೋಮುವಾದವನ್ನು ಸಂಪೂರ್ಣವಾಗಿ ಮೆರೆಯಲು ಬಯಸುತ್ತಿರುವಂತೆ ಕಾಣುತ್ತಿದೆ" ಎಂದು ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ(ಎಐಎಂಪಿಬಿ)ಯ ಹಿರಿಯ ಸದಸ್ಯರಾಗಿರುವ ಮೌಲಾನಾ ಖಾಲಿದ್ ರಶೀದ್ ಫಿರಂಗಿಮಹ್ಲಿ ಹೇಳಿದ್ದಾರೆ.
"ವರುಣ್‌ಗೆ ಬೆಂಬಲ ನೀಡಿದಲ್ಲಿ ತಿಳುವಳಿಕೆ ಕೊರತೆ ಇರುವ ಇಂತಹ ನೊರೆಂಟು ವರುಣ್ ಗಾಂಧಿಗಳು ಮುಸ್ಲಿಂ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಬಹುದು. ಅದು ದೇಶದಲ್ಲಿ ಅಶಾಂತಿ ಹುಟ್ಟು ಹಾಕಲು ಕಾರಣವಾಗಲಿದೆ. ಹಾಗಾಗಿ ಕೇಂದ್ರ ಚುನಾವಣೆ ಆಯೋಗ ವರುಣ್ ಅವರ ಸ್ಪರ್ಧೆಯನ್ನು ರದ್ದುಗೊಳಿಸಬೇಕು ಎಂದು ರಶೀದ್ ಆಗ್ರಹಿಸಿದರು. |