ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ರಾಷ್ಟ್ರಕ್ಕೆ ನಿಮ್ಮ ಕೊಡುಗೆ ಏನ್ ಹೇಳ್ರಿ: ಆಡ್ವಾಣಿಗೆ ಸಿಂಗ್ ಪ್ರಶ್ನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಷ್ಟ್ರಕ್ಕೆ ನಿಮ್ಮ ಕೊಡುಗೆ ಏನ್ ಹೇಳ್ರಿ: ಆಡ್ವಾಣಿಗೆ ಸಿಂಗ್ ಪ್ರಶ್ನೆ
PTI
ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ, ಪ್ರಧಾನಿ ಅಭ್ಯರ್ಥಿ ಎಲ್.ಕೆ. ಆಡ್ವಾಣಿ ಅವರ ವಿರುದ್ಧ ವಾಗ್ಯದ್ಧ ನಡೆಸಿದ ಪ್ರಧಾನಿ ಮನಮೋಹನ್ ಸಿಂಗ್ ಅವರು, ಬಾಬ್ರಿ ಮಸೀದಿ ಧ್ವಂಸದಲ್ಲಿ ಆಡ್ವಾಣಿ 'ಪ್ರಧಾನ ಪಾತ್ರ' ವಹಿಸಿದ್ದಾರೆ ಎಂದು ದೂರಿದರು. ಅಲ್ಲದೆ, ಗುಜರಾತ್ ಗಲಭೆಗಳ ಅಧ್ಯಕ್ಷತೆ ವಹಿಸಿದ್ದರು ಮತ್ತು ಸಂಸತ್ತಿನ ಮೇಲೆ ಮತ್ತು ಕೆಂಪು ಕೋಟೆಯ ಮೇಲೆ ದಾಳಿಯನ್ನು ತಡೆಯಲು ವಿಫಲಾಗಿರುವುದೇ ಅವರು ರಾಷ್ಟ್ರಕ್ಕೆ ನೀಡಿರುವ ಕೊಡುಗೆ ಎಂದು ವ್ಯಂಗ್ಯವಾಡಿದ್ದಾರೆ.

ಅವರೊಬ್ಬ ದುರ್ಬಲ ಪ್ರಧಾನಿ ಎಂಬ ಆಡ್ವಾಣಿ ಅವರ ಆರೋಪದಿಂದ ಕ್ಷೋಬೆಗೊಂಡಿರುವ ಸಿಂಗ್, ತಿರುಗೇಟು ನೀಡಿದ್ದು, ಗೃಹ ಸಚಿವರಾಗಿ ರಾಷ್ಟ್ರದ ಕಲ್ಯಾಣಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂದು ಪ್ರಶ್ನಿಸಿದ ಸಿಂಗ್, ಆಡ್ವಾಣಿ ಪ್ರಧಾನಿಯಾಗಬೇಕೆ ಎಂಬುದನ್ನು ಮತದಾರರು ನಿರ್ಧರಿಸಬೇಕು ಎಂದು ಹೇಳಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ಪಾಕಿಸ್ತಾನಕ್ಕೆ ಭೇಟಿ ನೀಡಿದ ವೇಳೆ ಪಾಕ್ ಸಂಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ ಅವರನ್ನು ಹೊಗಳಿರುವ ಆಡ್ವಾಣಿ ಒಬ್ಬ 'ಅವಕಾಶವಾದಿ' ಎಂದೂ ಪ್ರಧಾನಿ ಸಿಂಗ್ ಲೇವಡಿ ಮಾಡಿದ್ದಾರೆ.

"ನಾನೊಬ್ಬ ದುರ್ಬಲ ಪ್ರಧಾನಿಯೇ ಇಲ್ಲ ಸುದೃಢ ಪ್ರಧಾನಿಯೇ ಎಂಬುದಕ್ಕೆ ಸರ್ಕಾರದ ಕಾರ್ಯಗಳೇ ಉತ್ತರಿಸುತ್ತವೆ" ಎಂದು ಹೇಳಿದರು. ಅವರು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಬಾಬ್ರಿ ಮಸೀದಿ ವಿಧ್ವಂಸ, ಎನ್‌ಡಿಎ ಸರ್ಕಾರದ ವೇಳೆ ನಡೆದ ಭಯೋತ್ಪಾದನಾ ದಾಳಿಗಳು, ಭಾರತೀಯ ವಿಮಾನ ಅಪಹರಣ ಇವುಗಳು ಪ್ರಧಾನಿ ಅಭ್ಯರ್ಥಿಯೊಬ್ಬರ ಸಾಧನೆಗಳು ಎಂದು ಸಿಂಗ್ ವ್ಯಂಗ್ಯವಾಡಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವರುಣ್‌ರನ್ನು ಬಿಜೆಪಿ ಯುವ ಮೋದಿಯಾಗಿಸುತ್ತಿದೆ: ಮುಸ್ಲಿಂ ನಾಯಕರು
ಪಿಎಂಕೆ-ಎಐಎಡಿಎಂಕೆ ಹನಿಮ‌ೂನ್, ಅನ್ಬುಮಣಿ ರಾಜೀನಾಮೆ?
ನನಗೆ ಪ್ರಧಾನಿಯಾಗುವ ಇಚ್ಛೆ ಇಲ್ಲ: ಸೋನಿಯಾ
ಆಯೋಗದಿಂದ ದ್ವಂದ್ವ ನೀತಿ: ಬಿಜೆಪಿ ಆಕ್ರೋಶ
ಸ್ವರ್ಣಮಂದಿರಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ
ಸೌಮ್ಯಕೊಲೆ ಪ್ರಕರಣದ ರೂವಾರಿಗಳ ಪತ್ತೆ