ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಅತಿದುರ್ಬಲ ಸಿಂಗ್-ಆಡ್ವಾಣಿ: ಆಡ್ವಾಣಿ ಅವಕಾಶವಾದಿ- ಸಿಂಗ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅತಿದುರ್ಬಲ ಸಿಂಗ್-ಆಡ್ವಾಣಿ: ಆಡ್ವಾಣಿ ಅವಕಾಶವಾದಿ- ಸಿಂಗ್
PTI
ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಲಾಲ್ ಕೃಷ್ಣ ಆಡ್ವಾಣಿ ರಾಷ್ಟ್ರಕ್ಕಾಗಿ ಏನು ಮಾಡಿದ್ದಾರೆ, ಅವರೊಬ್ಬ ಅವಕಾಶವಾದಿ ಎಂಬ ಟೀಕೆ ಮಾಡಿರುವ ಪ್ರಧಾನಿ ಮನಮೋಹನ್ ಸಿಂಗ್ ಅವರ ಹೇಳಿಕೆಗೆ ಚಾಟಿಯೇಟು ನೀಡಿರುವ ಆಡ್ವಾಣಿ, "ಯುಪಿಎ ಸರ್ಕಾರದ ಅಧಿಕಾರ ಕೇಂದ್ರವು 10ನೆ ಜನಪತ್ ರಸ್ತೆ, ಅಂದರೆ, ಯುಪಿಎ ಮುಖ್ಯಸ್ಥೆ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನಿವಾಸವಾಗಿದೆ" ಎಂದು ಹೇಳಿದ್ದಾರೆ. ಮಥುರಾದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದ ಅವರು ಮನಮೋಹನ್ ಸಿಂಗ್ ಅವರು ಸೋನಿಯಾ ಗಾಂಧಿಯ ಕೈಗೊಂಬೆ ಎಂದು ಆಪಾದಿಸಿದರು.

"ಮನಮೋಹನ್ ಸಿಂಗ್ ಯಾವುದೇ ನಿರ್ಧಾರಗಳನ್ನು ಸ್ವಯಂ ಕೈಗೊಳ್ಳುವುದಿಲ್ಲ. ಯಾವುದೇ ನಿರ್ಧಾರಕ್ಕೂ ಪ್ರತಿಯೊಬ್ಬ ಸಚಿವನೂ ಮೊದಲು 10, ಜನಪತ್ ರಸ್ತೆಯ ಮನೆಗೆ ತೆರಳಿ ಸೋನಿಯಾ ಅನುಮತಿ ಪಡೆಯುತ್ತಾರೆ" ಎಂದು ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು ನುಡಿದರು.

ಇದಕ್ಕೂ ಮುನ್ನ ಚುನಾವಣಾ ಪ್ರಣಾಳಿಕೆ ಬಿಡುಗಡೆ ವೇಳೆ ಆಡ್ವಾಣಿಯವರನ್ನು ಟೀಕಿಸಿದ್ದ ಪ್ರಧಾನಿ ಸಿಂಗ್ ಅವರು, ಆಡ್ವಾಣಿ ಒಬ್ಬರು ಅವಕಾಶವಾದಿ ರಾಜಕಾರಣಿ, ರಾಷ್ಟ್ರಕ್ಕೆ ಅವರ ಕೊಡುಗೆ ಎಂದರೆ ಬಾಬ್ರಿ ಮಸೀದಿ ಧ್ವಂಸ ಮಾತ್ರ ಎಂದು ಕಟುಕಿದ್ದರು. ಅಲ್ಲದೆ ರಾಷ್ಟ್ರಾದ್ಯಂತ ಹಿಂದೂ ಮುಸ್ಲಿಂ ಗಲಭೆಯನ್ನು ಹುಟ್ಟು ಹಾಕಿದ್ದಾರೆ ಎಂದು ಪ್ರಧಾನಿ ಆಡ್ವಾಣಿಯವರನ್ನು ದೂರಿದ್ದರು. ಸಿಂಗ್ ಅವರು ಒಬ್ಬ ದುರ್ಬಲ ಪ್ರಧಾನಿ ಎಂಬುದಾಗಿ ಆಡ್ವಾಣಿಯವರ ಪುನರಪಿ ಟೀಕೆಗಳಿಗೆ ಸುದ್ದಿಗಾರರು ಪ್ರತಿಕ್ರಿಯೆ ಕೇಳಿದಾಗ ಅವರು ಮೇಲಿನಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಪ್ರಧಾನಿ ಅತ್ಯಂತ ದುರ್ಬಲ ಪ್ರಧಾನಿ ಎಂದು ಮತ್ತೆ ಹೇಳಿದ ಆಡ್ವಾಣಿ, ಹೀಗಿದ್ದಾಗ ಉಳಿದವರು ಶಕ್ತರಾಗುತ್ತಾರೆ. "ರಾಷ್ಟ್ರದ ಭದ್ರತೆಗೆ ಸಂಬಂಧಿಸಿದಂತೆ ಮನಮೋಹನ್ ಒಂದೇ ಒಂದೂ ನಿರ್ಧಾರವನ್ನೂ ಸಹ ತೆಗೆದುಕೊಳ್ಳಲಾರರು" ಎಂದು ಹೇಳಿದರು.

ಸಮಾವೇಶದಲ್ಲಿದ್ದ ಇನ್ನೋರ್ವ ನಾಯಕ, ರಾಜನಾಥ್ ಸಿಂಗ್ ಅವರು, ಪ್ರಧಾನಿ ಒಬ್ಬ ದುರ್ಬಲ ವ್ಯಕ್ತಿಯಾಗಿದ್ದು ಅವರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾರರು ಎಂದು ಆಪಾದಿಸಿದ್ದಾರೆ. ಅಲ್ಲದೆ ಯುಪಿಎ ಸರ್ಕಾರದ ವೈಫಲ್ಯಗಳನ್ನು ಪಟ್ಟಿಮಾಡಿದ ರಾಜ್‌ನಾಥ್ ಅವರು, ಎನ್‌ಡಿಎ ಸರ್ಕಾರದ ಸಾಧನೆಗಳನ್ನು ಕೊಂಡಾಡಿದರು.

ಪಿಎಂ ಪ್ರಿಸೈಡ್ಸ್, ಮೇಡಂ ಡಿಸೈಡ್ಸ್
ಇದೇ ವೇಳೆ ಪ್ರಧಾನಿ ಹೇಳಿಕೆಗೆ ತೀವ್ರವಾಗಿ ಪ್ರತಿಕ್ರಿಯಿಸಿರುವ ಇನ್ನೋರ್ವ ಬಿಜೆಪಿ ನಾಯಕ ವೆಂಕಯ್ಯ ನಾಯ್ಡು ಅವರು, ಮನಮೋಹನ್ ಸಿಂಗ್ ಅವರನ್ನು ಲೇವಡಿ ಮಾಡಿದ್ದು, ಅಧಿಕಾರವಿರುವುದು ಸೋನಿಯಾ ಕೈಯಲ್ಲೇ ವಿನಹ ಸಿಂಗ್ ಅವರ ಕೈಯಲ್ಲಲ್ಲ. ಇತರರತ್ತ ಬೆಟ್ಟು ಮಾಡುವ ಮೊದಲು ಕಾಂಗ್ರೆಸ್ ತನ್ನ ಮನೆಯನ್ನು ಶುಚಿಗೊಳಿಸಲಿ ಎಂಬ ಸಲಹೆ ನೀಡಿದರಲ್ಲದೆ, 'ಪಿಎಂ ಪ್ರಿಸೈಡ್ಸ್, ಮೇಡಂ ಡಿಸೈಡ್ಸ್' ಇದು ಯುಪಿಎ ಸರ್ಕಾರದ ಕಾರ್ಯವಿಧಾನ ಎಂದು ವ್ಯಂಗ್ಯವಾಡಿದರು.

ರಾಷ್ಟ್ರಕ್ಕೆ ನಿಮ್ಮ ಕೊಡುಗೆ ಏನ್ ಹೇಳ್ರಿ: ಆಡ್ವಾಣಿಗೆ ಸಿಂಗ್ ಪ್ರಶ್ನೆ
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರಾಷ್ಟ್ರಕ್ಕೆ ನಿಮ್ಮ ಕೊಡುಗೆ ಏನ್ ಹೇಳ್ರಿ: ಆಡ್ವಾಣಿಗೆ ಸಿಂಗ್ ಪ್ರಶ್ನೆ
ವರುಣ್‌ರನ್ನು ಬಿಜೆಪಿ ಯುವ ಮೋದಿಯಾಗಿಸುತ್ತಿದೆ: ಮುಸ್ಲಿಂ ನಾಯಕರು
ಪಿಎಂಕೆ-ಎಐಎಡಿಎಂಕೆ ಹನಿಮ‌ೂನ್, ಅನ್ಬುಮಣಿ ರಾಜೀನಾಮೆ?
ನನಗೆ ಪ್ರಧಾನಿಯಾಗುವ ಇಚ್ಛೆ ಇಲ್ಲ: ಸೋನಿಯಾ
ಆಯೋಗದಿಂದ ದ್ವಂದ್ವ ನೀತಿ: ಬಿಜೆಪಿ ಆಕ್ರೋಶ
ಸ್ವರ್ಣಮಂದಿರಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ