ವರುಣ್ ಗಾಂಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಹೇಳಿಕೆಗಳಿಗೆ ಬಿಜೆಪಿಯು ಮಾಡಿರುವ ಟೀಕೆಗಳಿಗೆ ಮರುಟೀಕೆ ಮಾಡಿರುವ ಪ್ರಿಯಾಂಕಾ ಗಾಂಧಿ, "ಧರ್ಮವು ಯಾರದ್ದೇ ಆದ ಸ್ವಂತ ಆಸ್ತಿ ಅಲ್ಲ" ಎಂದಿದ್ದಾರೆ. ವರುಣ್ ಗಾಂಧಿ ಭಗವದ್ಗೀತೆ ಓದಿ ಅರಿತುಕೊಳ್ಳಲಿ ಎಂಬುದಾಗಿ ಪ್ರಿಯಾಂಕ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಬಿಜೆಪಿ, ಪ್ರಿಯಾಂಕರಿಂದ ಹಿಂದುತ್ವದ ಕುರಿತು ಹೇಳಿಸಿಕೊಳ್ಳಬೇಕಿಲ್ಲ ಎಂದು ಹೇಳಿತ್ತು." ಯಾರಿಗೇ ಆದರೂ ಬೋಧಿಸಲು ನಾನ್ಯಾರು? ಆದರೆ ಒಂದಂತೂ ನಿಜ, ಧರ್ಮವು ಯಾರದ್ದೇ ಆದ ಸ್ವಂತ ಆಸ್ತಿಯಲ್ಲ" ಎಂದು ಅವರು ನುಡಿದರು." ಬೋಧಿಸಲು ನಾನು ಯಾರೂ ಅಲ್ಲ. ಧರ್ಮವು ಯಾರದೇ ಆಸ್ತಿಯಲ್ಲ. ಆತ ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಇಲ್ಲವೇ ಭೌದ್ಧ ಧರ್ಮದವನಾಗಿದ್ದರೂ ಓರ್ವ ಸತ್ಯವಂತ ಮತ್ತು ಉತ್ತಮ ವ್ಯಕ್ತಿ ಧಾರ್ಮಿಕನಾಗಿರುತ್ತಾನೆ" ಎಂದು ಅವರು ಮಾರ್ಮಿಕವಾಗಿ ಹೇಳಿದ್ದಾರೆ." ನಮ್ಮ ಸಂಸ್ಕೃತಿಯ ಇದರ ಮೇಲೆ ಆಧಾರಿತವಾಗಿರುವ ಹಿನ್ನೆಲೆಯಲ್ಲಿ ಈ ರಾಷ್ಟ್ರದ ಜನತೆಯು ಅದನ್ನು ಅರ್ಥಮಾಡಿಕೊಳ್ಳುತ್ತಾರೆ ಎಂಬ ವಿಶ್ವಾಸ ತನಗಿದೆ" ಎಂದು ಅವರು ನುಡಿದರು.ವರುಣ್ ಭಾಷಣದ ಕುರಿತು ಸುದ್ದಿಗಾರರು ಪ್ರತಿಕ್ರಿಯೆ ಬಯಸಿದ್ದ ವೇಳೆ ಅವರು, ವರುಣ್ ಗಾಂಧಿ ಭಗವದ್ಗೀತೆಯನ್ನು ಓದಿ ಸೂಕ್ತವಾಗಿ ಅರ್ಥಮಾಡಿಕೊಳ್ಳಲಿ ಎಂದು ಹೇಳಿದ್ದರು. |