ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಅಲಹಾಬಾದ್ ಹೈಕೋರ್ಟಿನಿಂದ ವರುಣ್ ಅರ್ಜಿ ವಜಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಲಹಾಬಾದ್ ಹೈಕೋರ್ಟಿನಿಂದ ವರುಣ್ ಅರ್ಜಿ ವಜಾ
PTI
ತನ್ನ ವಿರುದ್ಧ ಸಲ್ಲಿಸಲಾಗಿರುವ ಪ್ರಥಮ ಮಾಹಿತಿ ವರದಿ(ಎಫ್ಐಆರ್)ಯನ್ನು ಅನೂರ್ಜಿತಗೊಳಿಸಬೇಕು ಎಂದು ವರುಣ್ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ಬುಧವಾರ ವಜಾಗೊಳಿಸಿದೆ.

ದೆಹಲಿ ಹೈಕೋರ್ಟ್ ಇದೀಗಾಗಲೇ ನಿರೀಕ್ಷಣಾ ಜಾಮೀನು ನೀಡಿರುವ ಕಾರಣ ಅವರ ಬಂಧನದ ವಿರುದ್ಧ ತಡೆಯಾಜ್ಞೆ ನೀಡಬೇಕಾದ ಅವಶ್ಯಕತೆ ಇಲ್ಲ ಎಂಬುದಾಗಿ ನ್ಯಾಯಾಲಯ ಹೇಳಿದೆ.

ಆದರೆ ನಿರೀಕ್ಷಣಾ ಜಾಮೀನು ಅವಧಿ ಇದೇ 27ಕ್ಕೆ ಮುಗಿಯುವ ಕಾರಣ, ಅವರು ಸುಪ್ರೀಂ ಕೋರ್ಟಿಗೆ ತೆರಳಲು ನಿರ್ಧರಿಸಿದ್ದಾರೆ.

ತನ್ನ ಚುನಾವಣಾ ಕ್ಷೇತ್ರ ಪಿಲಿಭಿತ್‌ನಲ್ಲಿ ಚುನಾವಣಾ ಭಾಷಣ ಮಾಡುತ್ತಿದ್ದ ವೇಳೆಗೆ ಮುಸ್ಲಿಮರ ವಿರುದ್ಧ ದ್ವೇಷಭಾವವನ್ನು ಕೆರಳಿಸುವಂತಹ ಮಾತುಗಳನ್ನು ಆಡಿರುವ ಹಿನ್ನೆಲೆಯಲ್ಲಿ ವರುಣ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ವರುಣ್ ನಿರೀಕ್ಷಣಾ ಜಾಮೀನು ಪಡೆದಿದ್ದರು.

ವರುಣ್ ಗಾಂಧಿ ಭಾಷಣವನ್ನು ಪರಿಶೀಲಿಸಿದ ಚುನಾವಣಾ ಆಯೋಗವು ವರುಣ್ ತಪ್ಪಿತಸ್ಥ ಎಂದು ಹೇಳಿದ್ದು, ಎಚ್ಚರಿಕೆ ನೀಡಿತ್ತು. ಅಲ್ಲದೆ ವರುಣ್ ಅವರನ್ನು ಬಿಜೆಪಿ ಅಥವಾ ಇನ್ಯಾವುದೇ ಪಕ್ಷಗಳು ಚುನಾವಣಾ ಕಣಕ್ಕಿಳಿಸದಂತೆ ಸಲಹೆಯನ್ನೂ ನೀಡಿತ್ತು.

ಚುನಾವಣಾ ಆಯೋಗದ ತೀರ್ಮಾನವನ್ನು ಪಕ್ಷಪಾತಿತನದಿಂದ ಕೂಡಿದ್ದು ಎಂಬುದಾಗಿ ಬಿಜೆಪಿ ದೂರಿತ್ತು. ಆಯೋಗಕ್ಕೆ ಪತ್ರವನ್ನು ಬರೆದಿದ್ದ ವರುಣ್ ಇಂತಹ ಅಸಹಜ ಅವಸರದ ತೀರ್ಪಿಗೆ ಕಾರಣವೇನು ಎಂದು ಪ್ರಶ್ನಿಸಿದ್ದರು.

ಈ ಮಧ್ಯೆ, ತನಗೆ ಬೆಂಬಲ ವ್ಯಕ್ತಪಡಿಸಿರುವ ಶಿವಸೇನಾ ಮುಖ್ಯಸ್ಥ ಬಾಳಠಾಕ್ರೆಯವರಿಗೆ ವರುಣ್ ದಾಂಧಿ ತನ್ನ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಸ್ಸಾಮಿ ಪತ್ರಿಕಾ ಸಂಪಾದಕನ ಗುಂಡಿಕ್ಕಿ ಹತ್ಯೆ
ಕುಪ್ವಾರ ಗುಂಡಿನಕಾಳಗ ಅಂತ್ಯ, 17 ಉಗ್ರರ ಸಾವು
ರಾಷ್ಟ್ರದ ಜನತೆಗೆ ಎಲ್ಲವೂ ಅರ್ಥವಾಗುತ್ತೆ: ಪ್ರಿಯಾಂಕ
ವಿನಯ್ ಕಟಿಯಾರ್‌ಗೆ ನೋಟಿಸ್
ಮಹಾರಾಷ್ಟ್ರ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಅತಿದುರ್ಬಲ ಸಿಂಗ್-ಆಡ್ವಾಣಿ: ಆಡ್ವಾಣಿ ಅವಕಾಶವಾದಿ- ಸಿಂಗ್