ಮಾರ್ಚ್ 28ರಂದು ಅಜಂಗಢದಲ್ಲಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಎಲ್.ಕೆ. ಆಡ್ವಾಣಿಯವರ ರ‌್ಯಾಲಿಗೆ ಉತ್ತರಪ್ರದೇಶ ಸರ್ಕಾರವು ಅನುಮತಿ ನಿರಾಕರಿಸಿರುವ ಕ್ರಮವನ್ನು ಬಿಜೆಪಿಯು ಬುಧವಾರ ತೀವ್ರವಾಗಿ ಟೀಕಿಸಿದೆ.
"ಭದ್ರತಾ ಕಾರಣಗಳಿಗಾಗಿ ಆಡ್ವಾಣಿ ರ‌್ಯಾಲಿಗೆ ಅವಕಾಶ ನಿರಾಕರಿಸಲಾಗಿದೆ" ಎಂಬುದಾಗಿ ಬಿಜೆಪಿ ವಕ್ತಾರ ಬಲ್ಬೀರ್ ಪಂಜ್ ಹೇಳಿದ್ದಾರೆ.
ಮಾಯಾವತಿಯವರ ದ್ವೇಷ ರಾಜಕಾರಣವೇ ರ‌್ಯಾಲಿಗೆ ಅನುಮತಿ ನಿರಾಕರಿಸಲು ಕಾರಣ ಎಂದು ಬಿಜೆಪಿ ಆಪಾದಿಸಿದೆ.
ಕ್ರೀಡಾಂಗಣ ಹಾಗೂ ಕಾಲೇಜು ಮೈದಾನ ಸೇರಿದಂತೆ ಬಿಜೆಪಿಯು ಮೂರು ಸ್ಥಳಗಳನ್ನು ಆಯ್ದುಕೊಂಡಿತ್ತು.
ದೆಹಲಿ. ಬಾತ್ಲಾ ಹೌಸ್ ಗುಂಡುಹಾರಾಟ ಪ್ರಕರಣದ ಬಳಿಕ ಅಜಂಗಢ ಸುದ್ದಿಯಲ್ಲಿತ್ತು. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಸಂಭವಿಸಿದ ಈ ಗುಂಡಿನ ಚಕಮಕಿಯಲ್ಲಿ ಇಬ್ಬರು ಇಂಡಿಯನ್ ಮುಜಾಹಿದೀನ್ ಉಗ್ರರು ಹಾಗೂ ಓರ್ವ ಪೊಲೀಸ್ ಅಧಿಕಾರಿ ಸಾವನ್ನಪ್ಪಿದ್ದರು. |