ವರಣ್ ಗಾಂಧಿಯ ಹೇಳಿಕೆ ತನಗೆ ಅಚ್ಚರಿ ಉಂಟುಮಾಡಿದೆ ಎಂದು ಹೇಳಿರುವ ರಾಹುಲ್ ಗಾಂಧಿ, ಸಿಟ್ಟು ಮತ್ತು ದ್ವೇಷವನ್ನು ತಾನು ವಿರೋಧಿಸುವುದಾಗಿ ನುಡಿದರು. ಪುದುಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತಾ. "ನಾನು ನನ್ನ ಅಭಿಪ್ರಾಯ ಹೊಂದಿದ್ದೇನೆ. ಅವರು ಅವರ ಅಭಿಪ್ರಾಯ ಹೊಂದಿದ್ದಾರೆ. ಸಿಟ್ಟು ಮತ್ತು ದ್ವೇಷ ಸೂಕ್ತವಲ್ಲ ಎಂಬುದು ನನ್ನ ಅಭಿಪ್ರಾಯ. ಕೋಪ ಹಾಗೂ ದ್ವೇಷವು ನಿಮ್ಮನ್ನು ಕುರುಡಾಗಿಸುತ್ತದೆ. ನನ್ನ ಸಹೋದರಿ ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿರುವುದರಿಂದ ನಾನು ಇನ್ನೇನು ಬಯುಸುವುದಿಲ್ಲ" ಎಂದು ಅವರು ವರುಣ್ ಹೇಳಿಕೆ ಕುರಿತು ಹೆಚ್ಚೇನು ಹೇಳಲು ಬಯಸಲಿಲ್ಲ.ಬಿಹಾರದಲ್ಲಿ ಕಾಂಗ್ರೆಸ್ ಈ ಬಾರಿಯ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಫರ್ಧಿಸುವ ಕಾರಣ ಪಕ್ಷಕ್ಕೆ ಲಾಭವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಒಬ್ಬ ಗೌರವಾನ್ವಿತ ಸಂಭಾವಿತ ವ್ಯಕ್ತಿ ಎಂದು ನುಡಿದ ರಾಹುಲ್, ಅವರ ಸರ್ಕಾರದ ಸಾಧನೆಗಳೇ ಅವರು ಏನು ಎಂಬುದನ್ನು ತೋರಿಸುತ್ತದೆ ಎಂದು ಹೇಳಿದರು. ಅಲ್ಲದೆ ಅವರ ನಾಯಕತ್ವಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ನುಡಿದರು.ಪ್ರಧಾನಿ ಮನಮೋಹನ್ ಸಿಂಗ್ ಒಬ್ಬ ಅತಿದುರ್ಬಲ ವ್ಯಕ್ತಿ ಎಂಬ ಆಡ್ವಾಣಿ ಟೀಕೆಗೆ ಉತ್ತರಿಸಲು ನಿರಾಕರಿಸಿದ ಎಐಸಿಸಿ ಕಾರ್ಯದರ್ಶಿ, "ಆಡ್ವಾಣಿ ಒಬ್ಬ ಹಿರಿಯ ರಾಜಕಾರಣಿ. ಅವರೊಂದು ಪಕ್ಷದ ನಾಯಕ. ಅವರ ಕುರಿತು ಅಭಿಪ್ರಾಯ ವ್ಯಕ್ತಪಡಿಸಲು ನಾನು ಚಿಕ್ಕವನು" ಎಂದಷ್ಟೆ ನುಡಿದರು.ನೀವು ಪ್ರಧಾನ ಪಟ್ಟವನ್ನು ಏರಲಿರುವಿರೇ ಎಂದು ಕೇಳಿದ ಪ್ರಶ್ನೆಗೆ ನಗುನಗುತ್ತಲೇ ಉತ್ತರಿಸಿದ ರಾಹುಲ್, ಮಾಧ್ಯಮಗಳು ಪದೇಪದೇ ಇದೇ ಪ್ರಶ್ನೆ ಕೇಳುವುದಕ್ಕೆ ಹಾಸ್ಯಚಟಾಕಿ ಹಾರಿಸಿದರು. ತಾನು ಪಕ್ಷದಲ್ಲಿ ಯುವ ಸಂಘಟನೆಯತ್ತ ಹೆಚ್ಚು ಗಮನ ಹರಿಸುತ್ತಿರುವುದಾಗಿ ನುಡಿದ ರಾಹುಲ್ ಈ ಕಾರ್ಯವನ್ನು ಇಷ್ಟಪಡುವುದಾಗಿ ನುಡಿದರು. |