ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ವರುಣ್ ಭಾಷಣಕ್ಕೀಗ ಬಿಜೆಪಿಯೊಳಗೆ ಕ್ಯೂ!!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವರುಣ್ ಭಾಷಣಕ್ಕೀಗ ಬಿಜೆಪಿಯೊಳಗೆ ಕ್ಯೂ!!
PTI
ವರುಣ್ ಗಾಂಧಿ ಓತಪ್ರೋತವಾಗಿ ಮಾಡಿದ ಭಾಷಣಕ್ಕಾಗಿ ಚುನಾವಣಾ ಆಯೋಗ ಅವರನ್ನು ವಿಲನ್ ಎಂಬುದಾಗಿ ಪರಿಗಣಿಸಿರಬಹುದು. ಆದರೆ ಬಿಜೆಪಿಯೊಳಗಿನ ಹಲವು ನಾಯಕರ ಕಣ್ಣುಗಳಿಗೀಗ ಅವರು ಹೀರೋ ಆಗಿ ರಾರಾಜಿಸುತ್ತಿದ್ದಾರೆ. ಅವರನ್ನು ತಾರಾ ಪ್ರಚಾರಕರನ್ನಾಗಿ ಕಳುಹಿಸಿ ಕೊಡಿ ಎಂಬುದಾಗಿ ನಾಯಕರು ಪಕ್ಷಕ್ಕೆ ದುಂಬಾಲು ಬಿದ್ದಿದ್ದಾರೆ.

ತನ್ನ ಪಿಲಿಭಿತ್ ಕ್ಷೇತ್ರದಲ್ಲಿ ವರುಣ್ ಮಾಡಿರುವ ದ್ವೇಷ ಭಾಷಣದ ಮೂಲಕ ಅವರೀಗ ಬಿಜೆಪಿಯ ಭೂಪಟದಲ್ಲಿ ಪ್ರಧಾನವಾಗಿ ಎದ್ದುತೋರುತ್ತಿದ್ದಾರೆ. ಹತ್ತು ರಾಜ್ಯಗಳ ಸುಮಾರು ಎಪ್ಪತ್ತೂ ಚಿಲ್ಲರೆ ಸಂಸದರು ಬಿಜೆಪಿಯ ಚುನಾವಣಾ ಕಚೇರಿಯ ಎದರು ಕ್ಯೂ ನಿಂತಿದ್ದು, ವರುಣ್‌ರನ್ನು ಪ್ರಚಾರಕ್ಕೆ ಕಳುಹಿಸಿ ಕೊಡಿರೆಂದು ಒತ್ತಾಯಿಸುತ್ತಿವೆ. ಉತ್ತರ ಪ್ರದೇಶದಲ್ಲಂತೂ ಹೆಚ್ಚೂಕಮ್ಮಿ ಎಲ್ಲಾ ಅಭ್ಯರ್ಥಿಗಳು ವರುಣ್ ಪ್ರಚಾರಕ್ಕೆ ಬರಲಿ ಎಂಬ ಆಸೆ ಕಂಗಳಿಂದ ಕುಳಿತಿದ್ದಾರಂತೆ!

ಈ ದಿನಗಳಲ್ಲಿ ಎಲ್ಲೆಡೆ ವರುಣ್ ಅಲೆ ಎದ್ದಿದೆ. ಅವರು ವಾರಣಾಸಿಗೆ ಪ್ರಚಾರಕ್ಕೆ ಬರಬೇಕು ಎಂಬುದಾಗಿ ವಾರಣಾಸಿ ಬಿಜೆಪಿ ಅಧ್ಯಕ್ಷ ಸುಧೀರ್ ಮಿಶ್ರಾ ಹೇಳುತ್ತಾರೆ. ವರುಣ್ ಅವರನ್ನು ಕಳುಹಿಸಿದ್ದೇ ಆದರೆ ಅವರಿಗೆ ಭಾರೀ ಸ್ವಾಗತ ಕೋರಲಾಗುವುದು ಎಂಬುದಾಗಿ ಅಲಹಾಬಾದ್ ಬಿಜೆಪಿ ಅಧ್ಯಕ್ಷ ಮನೋಜ್ ದುಬೆ ಹೇಳಿದ್ದಾರೆ.

ಹತ್ತು ದಿನಗಳ ಹಿಂದೆ ವರುಣ್ 'ಬೆಲೆ' ಏನೆಂದು ಯಾರಿಗೂ ತಿಳಿದಿರಲಿಲ್ಲ. ಅವರಿಗೆ ಅಖಿಲ ಭಾರತೀಯ ಇಮೇಜ್ ಇದೆ ಎಂದು ಯಾರಿಗೂ ಗೊತ್ತಿರಲಿಲ್ಲ. ಆದರೆ ನರೇಂದ್ರ ಮೋದಿಯ ಅವತಾರವೆತ್ತಿದಂತೆ ಕಂಡು ಬಂದಿರುವ ವರುಣ್ ಅಭಿವೃದ್ಧಿ ಹಾಗೂ ಭದ್ರತೆಯ ಕುರಿತು ಮಾತನಾಡುತ್ತಾ ಕೇಸರಿ ಪಡೆಗೆ ಆಪ್ಯಾಯಮಾನವಾಗಿದ್ದಾರೆ. ಕೇಸರಿ ಪಡೆಯ ಹಳೆಯ ಪೋಸ್ಟರ್ ಬಾಯ್ ಆಗಿದ್ದ ಮುರಳಿ ಮನೋಹರ್ ಜೋಷಿ ಅವರ ವಾರಣಾಸಿ ಕ್ಷೇತ್ರಕ್ಕೂ ವರುಣ್ ಪಾದಬೆಳೆಸಬೇಕಂತೆ!

ಆದರೆ, ಬಿಜೆಪಿ ಈ ಕುರಿತು ಇನ್ನಷ್ಟೆ ನಿರ್ಧಾರ ಕೈಗೊಳ್ಳಬೇಕಿದೆ. ವರುಣ್ ಮುಸ್ಲಿಮರ ವಿರುದ್ಧ ಬಾಯಿಗೆ ಬಂದಂತೆ ಹರಿಹಾಯ್ದಿರುವುದು ಬಿಜೆಪಿಯ ಮಿತ್ರ ಪಕ್ಷಗಳಿಗೆ ಇರಿಸುಮುರಿಸುಂಟು ಮಾಡಿದೆ. ಅವರಿನ್ನೂ ಎಚ್ಚರಿಕೆಯಿಂದಿದ್ದಾರೆ. ಬಿಹಾರದ ಮುಖ್ಯಮಂತ್ರಿ ಜೆಡಿಯು ನಾಯಕ ನಿತೀಶ್ ಕುಮಾರ್ ಅವರು ಸಾರ್ವಜನಿಕ ಜೀವನದಲ್ಲಿರುವವರು ಸಂಯಮ ವಹಿಸಬೇಕು ಎಂದು ಹೇಳಿದ್ದಾರೆ.

ಪ್ರಥಮ ಬಾರಿಗೆ ಚುನಾವಣಾ ಕಣಕ್ಕೆ ಇಳಿಯುತ್ತಿರುವ ವರುಣ್ ಅವರ 'ದ್ವೇಷ ಭಾಷಣ'ವು ಪಕ್ಷದೊಳಗೆ ವರುಣ್ ಕ್ರೇಜ್ ಹುಟ್ಟಿಸಿದೆ. ಕೆಲವು ದಿನಗಳಿಂದ ಬಿಜೆಪಿಯೊಳಗೆ ಹಿಂದುತ್ವ ಮಸುಕಾಗಿತ್ತು. ಕಟ್ಟರ್ ಹಿಂದೂವಾದಿಗಳು ಈ ಕುರಿತು ಚಿಂತಿಸುತ್ತಿರುವಾಗಲೇ ವರುಣ್ ಉದ್ಭವವಾಗಿದೆ.

ವರುಣ್ ಈಗ ಮಾಧ್ಯಮಗಳಿಗೆ ಥ್ಯಾಂಕ್ಸ್ ಅಂತಿರಬಹುದು. ಪಿಲಿಭಿತ್ ಕ್ಷೇತ್ರದ ಚಿಕ್ಕದೊಂದು ಸಭೆಯಲ್ಲಿ ಮಾತನಾಡುತ್ತಿದ್ದ ವರುಣ್, ಮುಸ್ಲಿಮರ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ ಎಂಬುದಾಗಿ ಒಂದು ವಾರದ ನಂತರ ಸುದ್ದಿವಾಹಿನಿಯೊಂದರಲ್ಲಿ ವರದಿಯಾಗಿತ್ತು. ಬಳಿಕ ಅದುದೊಡ್ಡ ವಿವಾದವಾಯುತು. "ಅದು ತನ್ನ ಭಾಷಣವಲ್ಲ. ತನ್ನ ಭಾಷಣವನ್ನು ತಿರುಚಲಾಗಿದೆ" ಎಂದು ವರುಣ್ ಅಲವತ್ತುಕೊಂಡರೂ ಚುನಾವಣಾ ಆಯೋಗ ಅವರಿಗೆ ಛೀಮಾರಿ ಹಾಕಿತು. ಅದೇನೇ ಇರಲಿ ಬಿಜೆಪಿಯ ಕೆಲವು ನಾಯಕರಂತೂ ಥ್ಯಾಂಕ್ಸ್ ಟು ಮೀಡೀಯಾ ಅಂತಿದ್ದಾರಂತೆ!
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಿಎಸ್‌ಪಿ ಚುನಾವಣಾ ಅಭ್ಯರ್ಥಿಯ ಸೆರೆ
ಬಾಂಬ್ ದಾಳಿಗೆ 12 ಮಂದಿ ಗಾಯ
ಕುಪ್ವಾರ ಗುಂಡಿನ ಕಾಳಗಕ್ಕೆ ತಾನು ಕಾರಣ: ಲಷ್ಕರೆ
ಸಿಟ್ಟು, ಕೋಪ ನಿಮ್ಮನ್ನು ಕುರುಡಾಗಿಸುತ್ತದೆ: ರಾಹುಲ್
ಅಜಂಗಢದಲ್ಲಿ ಆಡ್ವಾಣಿ ರ‌್ಯಾಲಿಗೆ ಅನುಮತಿ ಇಲ್ಲ
ನ್ಯಾನೋ 'ಬಿಡುಗಡೆ' ನೀತಿ ಸಂಹಿತೆ ಉಲ್ಲಂಘನೆ!