ಜಮ್ಮು: ಜಮ್ಮು ಕಣಿವೆಯಲ್ಲಿ ಚುನಾವಣೆಗೆ ತಡೆಯೊಡ್ಡಲು ಸಂಚು ಹೂಡಿದ್ದ ಹಿಜ್ಬುಲ್ ಉಗ್ರರಿಬ್ಬರನ್ನು ಬಂಧಿಸಲಾಗಿದೆ. ಬಂಧಿತರಲ್ಲೊಬ್ಬ ಜಾಹಿದ್ ಅಹ್ಮದ್ ದಾರ್ ಎಂಬಾತ ಹಿಜ್ಬುಲ್ ಸಂಘಟನೆಯ ಉನ್ನತ ಕಮಾಂಡರ್ ಹಾಗೂ ಸಂಘಟನೆಯ ವರಿಷ್ಠ ಸಯೀದ್ ಸಲಾಹುದ್ದೀನ್‌ನ ನಿಕಟ ಸಹವರ್ತಿ.
ಚುನಾವಣಾ ವೇಳೆಗೆ ಬುಡಮೇಲು ಕೃತ್ಯಗಳನ್ನು ನಡೆಸಲು ಯತ್ನಿಸಿದ್ದು, ಪ್ರಾಂತ್ಯವನ್ನು ಅರಿತುಕೊಂಡು ದಾಳಿಗೆ ಅಗತ್ಯವಿರುವ ಮೂಲಕಾರ್ಯಗಳನ್ನು ನಡೆಸುವುದು ಇವರ ಹುನ್ನಾರವಾಗಿತ್ತು. ಇನ್ನೋರ್ವ ಉಗ್ರ ಆತೀಕ್ ಉಲ್ಲಾ ದಾರ್ ಜಾಹಿದ್ ಅಹ್ಮದ್‌ನ ಸಹಚರನಾಗಿದ್ದಾನೆ.
"ಜಾಹಿದ್ ಅಹ್ಮದ್ ದಾರ್ ಪಾಕಿಸ್ತಾನದಲ್ಲಿ ಆರು ವರ್ಷಗಳ ಕಾಲವಿದ್ದ. ಆತ ಮೊದಲಿಗೆ ತರಬೇತಿ ಪಡೆಯಲು ತೆರಳಿದ್ದ. ಬಳಿಕ ಉಗ್ರರ ವಿವಿಧ ತರಬೇತಿ ಕೇಂದ್ರಗಳಿಗೆ ತರಬೇತಿ ನೀಡಲು ತೆರಳಿದ್ದು, ಹಿರಿಯ ಕಾರ್ಯಕರ್ತರೊಂದಿಗೆ ಬೆರೆತಿದ್ದ. ಆತ ಇಸ್ಲಾಮಾಬಾದಿನಲ್ಲಿ ಹಿಜ್ಬುಲ್ ಮುಖ್ಯಸ್ಥ ಸಯೀದ್ ಸಲಾಹುದ್ದೀನ್‌ನೊಂದಿಗೂ ತಂಗಿದ್ದ" ಎಂದು ಜಮ್ಮು ಎಸ್ಎಸ್ಪಿ ಮನೋಹರ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಈ ಉಗ್ರರು ಕಾಠ್ಮಂಡುವಿನ ವಿಮಾನ ಮೂಲಕ ಭಾರತವನ್ನು ಪ್ರವೇಶಿಸಿದ್ದು, ಗೋರಖ್ಪುರ ಮೂಲಕ ಜಮ್ಮು ಪ್ರವೇಶಿದ್ದರು. ಹಿಜ್ಬುಲ್ ಸಂಘಟನೆಯ ಈ ಪ್ರಮುಖ ಉಗ್ರರ ಬಂಧನವು, ಚುನಾವಣೆಗೆ ಮುಂಚಿತವಾಗಿ ಅಕ್ರಮ ನುಸುಳುವಿಕೆಯ ಚಿಂತಿತ ಪ್ರವೃತ್ತಿಯು ಹೆಚ್ಚುತ್ತಿದೆ ಎಂಬುದನ್ನು ದೃಢೀಕರಿಸಿದಂತಾಗಿದೆ. |