ಕುಪ್ವಾರ ಜಿಲ್ಲೆಯ ದಟ್ಟಾರಣ್ಯದಲ್ಲಿ ನಡೆದಿರುವ ಸೇನಾಪಡೆ ಮತ್ತು ಉಗ್ರರ ಗುಂಡಿನ ಕಾಳಗದಲ್ಲಿ ಲಷ್ಕರೆ-ಇ-ತೋಯ್ಬಾ ಸಂಘಟನೆಯ ಪ್ರಮುಖ ಉಗ್ರನೊಬ್ಬ ಸಾವನ್ನಪ್ಪಿದ್ದಾನೆ ಎಂದು ರಕ್ಷಣಾ ವಕ್ತಾರರು ಗುರುವಾರ ತಿಳಿಸಿದ್ದಾರೆ.
ಖಚಿತ ಮಾಹಿತಿಯಾಧಾರದಲ್ಲಿ ಭದ್ರತಾ ಪಡೆಗಳು ಬುಧವಾರ ರಾತ್ರಿ ದೌಸಾ ಜಿಲ್ಲೆಯಲ್ಲಿ ಕಾರ್ಯಾಚರಣೆ ನಡೆಸಿದ್ದು, ಲಷ್ಕರೆಯ ಸ್ವಘೋಷಿತ ಜಿಲ್ಲಾ ಕಮಾಂಡರ್ ಅಬ್ದುಲ್ಲಾ ಎಂಬಾತನ್ನು ಕೊಂದು ಹಾಕಿದ್ದಾರೆ.
ಬುಧವಾರ ಅಂತ್ಯಗೊಳಿಸಲಾಗಿದ್ದ ಐದು ದಿನಗಳ ಕಾಲದ ಗುಂಡಿನ ಕಾಳಗದಲ್ಲಿ 17 ಉಗ್ರರು ಮತ್ತು ಓರ್ವ ಮೇಜರ್ ಸೇರಿದಂತೆ ಎಂಟು ಮಂದಿ ಸೈನಿಕರು ಸಾವನ್ನಪ್ಪಿದ್ದರು.
17 ರೈಫಲ್‌ಗಳು, ನಾಲ್ಕು ಯುಬಿಜಿಎಲ್‌ಗಳು, 19 ಯುಬಿಜಿಎಲ್ ಗ್ರೆನೇಡುಗಳು ಮತ್ತು ಎರಡು ಕೈ ಬಾಂಬುಗಳು ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಉಗ್ರರು ಅವಿತಿದ್ದ ಜಾಗದಿಂದ ವಶಪಡಿಸಲಾಗಿದೆ ಎಂದು ವಕ್ತಾರರು ಹೇಳಿದ್ದಾರೆ. |