ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಭಾರತದಲ್ಲಿ 26/11 ಮಾದರಿ ಮತ್ತೊಂದು ದಾಳಿ ಎಚ್ಚರಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತದಲ್ಲಿ 26/11 ಮಾದರಿ ಮತ್ತೊಂದು ದಾಳಿ ಎಚ್ಚರಿಕೆ
ಕರ್ನಾಟಕ ಮತ್ತು ಆಂಧ್ರಪ್ರದೇಶ ಸರಕಾರಗಳು ಇತ್ತೀಚೆಗಷ್ಟೇ ಉಗ್ರರ ದಾಳಿ ಸಾಧ್ಯತೆ ಬಗ್ಗೆ ಎಚ್ಚರಿಕೆ ನೀಡಿರುವಂತೆಯೇ, ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯನ್ನು ವಿದೇಶಕ್ಕೆ ಸ್ಥಳಾಂತರಿಸಿದ ಹೊರತಾಗಿಯೂ, ಭಾರತದ ಮೇಲೆ ಇಸ್ಲಾಮಿಕ್ ಉಗ್ರಗಾಮಿಗಳು ದಾಳಿ ನಡೆಸಲು ಭಾರೀ ಸಂಚು ರೂಪಿಸಿದ್ದಾರೆ ಎಂದು ಅಮೆರಿಕದ ತಜ್ಞರು ಎಚ್ಚರಿಸಿದ್ದಾರೆ.

ಈಗಾಗಲೇ ರಾಜಕೀಯದಲ್ಲಿ ಸಿಲುಕಿರುವ ಐಪಿಎಲ್ ಟೂರ್ನಿ, ಚುನಾವಣಾ ಸಮಯದಲ್ಲೇ ನಡೆಯುತ್ತಿರುವುದರಿಂದಾಗಿ ಭದ್ರತೆ ಒದಗಿಸುವುದು ಕ್ಲಿಷ್ಟಕರ ಎಂಬ ಕಾರಣಕ್ಕೆ ದಕ್ಷಿಣ ಆಫ್ರಿಕಾದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಆದರೆ, ಈ ನಿರ್ಧಾರದ ಹೊರತಾಗಿಯೂ ಇಸ್ಲಾಮಿಕ್ ಉಗ್ರಗಾಮಿಗಳಿಂದ 26/11 ಮಾದರಿಯಲ್ಲಿ ಮತ್ತೊಂದು ದಾಳಿಯ ಆತಂಕ ಇದ್ದೇ ಇದೆ ಎಂದು ಅಮೆರಿಕದ ಭದ್ರತಾ ವಿಶ್ಲೇಷಣೆ ಕುರಿತ ಸಂಸ್ಥೆ "ಸ್ಟ್ರಾಟ್‌ಫರ್" ಎಚ್ಚರಿಸಿದೆ.

ನವೆಂಬರ್‌ನಲ್ಲಿ ಮುಂಬಯಿ ಮೇಲೆ ದಾಳಿ ನಡೆಸಿದ ನಂತರದಲ್ಲಿ ಐಪಿಎಲ್ ಕ್ರಿಕೆಟ್ ಟೂರ್ನಿಯೇ ಉಗ್ರಗಾಮಿಗಳ ಪ್ರಧಾನ ಗುರಿಯಾಗಿತ್ತೆಂಬ ಬಗ್ಗೆ ಭಾರತೀಯ ಭದ್ರತಾ ಏಜೆನ್ಸಿಗಳಿಂದ ಹಿಂದೆಯೇ ಮಾಹಿತಿ ಲಭಿಸಿತ್ತು ಎಂದು ತಿಳಿಸಿರುವ "ಸ್ಟ್ರಾಟ್‌ಫರ್", ಭಾರತೀಯ ಮತ್ತು ವಿದೇಶೀ ಕ್ರಿಕೆಟಿಗರು ಕೂಡ ಉಗ್ರಗಾಮಿಗಳ ಗುರಿಯಲ್ಲಿದ್ದರು ಎಂಬ ಕುರಿತು ಭಾರತೀಯ ಗುಪ್ತಚರ ಏಜೆನ್ಸಿಗಳು ಕೇಂದ್ರ ಸರಕಾರವನ್ನು ಎಚ್ಚರಿಸಿವೆ ಎಂದು ಹೇಳಿದೆ.

ಕ್ರೀಡಾಳುಗಳಿಗೆ ಬೆದರಿಕೆಯಿರುವ ಬಗ್ಗೆ ಐಪಿಎಲ್ ಟೂರ್ನಿ ಆಯೋಜಿಸುವ ತಾಣಗಳಿರುವ ರಾಜ್ಯಗಳಾದ ಕರ್ನಾಟಕ ಮತ್ತು ಆಂಧ್ರ ಸರಕಾರಗಳಿಂದ ನಿರ್ದಿಷ್ಟ ಎಚ್ಚರಿಕೆ ಇತ್ತೀಚೆಗೆ ಬಂದಿತ್ತು. ಈ ಎರಡೂ ರಾಜ್ಯಗಳು ಸಾಫ್ಟ್‌ವೇರ್ ಉದ್ಯಮಗದ ಪ್ರಮುಖ ಕೇಂದ್ರ ಬಿಂದುಗಳಾಗಿದ್ದು, ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ವಿದೇಶೀಯರಿದ್ದಾರೆ. ಬಹುರಾಷ್ಟ್ರೀಯ ಕಂಪನಿಗಳು ಹೆಚ್ಚಾಗಿರುವುದರಿಂದ ದಾಳಿಯ ಸಾಧ್ಯತೆಗಳೂ ಅತ್ಯಂತ ಹೆಚ್ಚು ಎಂದು ಸ್ಟ್ರಾಟ್‌ಫರ್ ತಿಳಿಸಿದೆ.

ಐಪಿಎಲ್ ಟೂರ್ನಿ ಭಾರತದಿಂದ ಹೊರಗೆ ಹೋಗುವುದನ್ನು ರಾಜಕೀಯಗೊಳಿಸಲಾಗುತ್ತಿದೆ. ಆದರೆ, ಈ ಬೆದರಿಕೆ ಮಾತ್ರ ಇನ್ನೂ ಇದೆ ಎಂದು ಹೇಳಿರುವ ಅದು, ಮಾರ್ಚ್ 3ರಂದು ಲಾಹೋರಿನಲ್ಲಿ ಶ್ರೀಲಂಕಾ ಕ್ರಿಕೆಟಿಗರ ಮೇಲೆ ನಡೆದ ದಾಳಿಯು, ಇಸ್ಲಾಮಿಕ್ ಉಗ್ರರು ತಮ್ಮ ಬೇಡಿಕೆಗಳನ್ನು ಅಂತಾರಾಷ್ಟ್ರೀಕರಣಗೊಳಿಸುವ ಉದ್ದೇಶ ಹೊಂದಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿತ್ತು. ರಕ್ತಪಾತದ ಮೂಲಕ ವಿಶ್ವದ ಗಮನ ಸೆಳೆಯುವುದು ಈ ಉಗ್ರಗಾಮಿಗಳ ಉದ್ದೇಶವಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಯುಪಿಎಯಿಂದ ಪಿಎಂಕೆ 'ಬ್ರೇಕಿಂಗ್' ನ್ಯೂಸ್!
ಸೀಟಿಗಾಗಿ ಆತ್ಮಹತ್ಯೆ ಯತ್ನ, ಕಚೇರಿಗೆ ಬೆಂಕಿ!
ಕುಪ್ವಾರ ಕಾಳಗಕ್ಕೆ ಲಷ್ಕರೆ ಕಮಾಂಡರ್ ಬಲಿ
ಜಮ್ಮುವಿನಲ್ಲಿ ಪ್ರಮುಖ ಹಿಜ್ಬುಲ್ ಉಗ್ರರ ಬಂಧನ
ವರುಣ್ ಭಾಷಣಕ್ಕೀಗ ಬಿಜೆಪಿಯೊಳಗೆ ಕ್ಯೂ!!
ಬಿಎಸ್‌ಪಿ ಚುನಾವಣಾ ಅಭ್ಯರ್ಥಿಯ ಸೆರೆ