ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಎಸ್ಪಿ, ಆರ್‌ಜೆಡಿ, ಎಲ್‌ಜೆಪಿಗಳ ಹೊಸ ದೋಸ್ತಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಸ್ಪಿ, ಆರ್‌ಜೆಡಿ, ಎಲ್‌ಜೆಪಿಗಳ ಹೊಸ ದೋಸ್ತಿ
ಎಸ್ಪಿ, ಆರ್‌ಜೆಡಿ, ಎಲ್‌ಜೆಪಿಗಳು ಇದೀಗ ಒಟ್ಟು ಸೇರಿ ಕಾಂಗ್ರೆಸ್‌ಗೆ ಇನ್ನೊಂದು ಟಾಂಗು ಕೊಟ್ಟಿವೆ! ಈ ಮೂರು ಪಕ್ಷಗಳು ಸೇರಿ 'ಜಾತ್ಯತೀತ ಮೈತ್ರಿಕೂಟ'ವನ್ನು ರೂಪಿಸಿರುವುದಾಗಿ ಗುರುವಾರ ಘೋಷಿಸಿವೆ. ಅಲ್ಲದೆ ಉತ್ತರಪ್ರದೇಶ ಮತ್ತು ಬಿಹಾರದಲ್ಲಿ ಜಂಟಿಯಾಗಿ 120 ಸ್ಥಾನಗಳಲ್ಲಿ ಸ್ಫರ್ಧಿಸುವುದಾಗಿ ಹೇಳಿವೆ.

"ನಮ್ಮ ಮ‌ೂರು ಪಕ್ಷಗಳು ಒಂದಾಗಿವೆ. ನಾವು ಉತ್ತರ ಭಾರತದಲ್ಲಿ ಒಂದಾಗಿ ಹೋರಾಡುತ್ತೇವೆ. ಬಿಹಾರ ಮತ್ತು ಉತ್ತರ ಪ್ರದೇಶಗಳಲ್ಲಿ ನಾವು ಪರಸ್ಪರ ಘರ್ಷಣೆ ಉಂಟಾಗದಂತೆ ಸ್ಫರ್ಧಾ ಕಣಕ್ಕಿಳಿಯಲಿದ್ದೇವೆ" ಎಂದು ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ಅಮರ್ ಸಿಂಗ್ ನವದೆಹಲಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಎಸ್ಪಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್, ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರೊಡನೆ ಪಾಟ್ನದಲ್ಲಿ ಮಾತಾಡಿರುವುದಾಗಿ ಎಲ್‌ಜೆಪಿ ಮುಖ್ಯಸ್ಥ ರಾಮ್ ವಿಲಾಸ್ ಪಾಸ್ವಾನ್ ಹೇಳಿದ್ದಾರೆ. ಮತ್ತು ಈ ಮ‌ೂರು ಪಕ್ಷಗಳು ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಡಲು ಪರ್ಯಾಯ ಶಕ್ತಿಯೊಂದನ್ನು ಒದಗಿಸಲಿವೆ ಎಂದೂ ಅವರು ತಿಳಿಸಿದ್ದಾರೆ.

ಈ ಮೈತ್ರಿಯ ಔಪಚಾರಿಕ ಘೋಷಣೆಯನ್ನು ಮಾರ್ಚ್ 30ರಂದು ನಡೆಸಲಾಗುವ ಸಮಾರಂಭದಲ್ಲಿ ಮಾಡಲಾಗುವುದು ಎಂದು ಸಿಂಗ್ ತಿಳಿಸಿದ್ದಾರೆ. ಮಾಜಿ ಪ್ರಧಾನಿ ವಿಪಿ ಸಿಂಗ್ ಅವರ ಪುತ್ರನನ್ನು ಫತೇಪುರ ಕ್ಷೇತ್ರದಿಂದ ಕಣಕ್ಕಿಳಿಸುವ ವಿಚಾರವನ್ನು ಹಿಂತೆಗೆಯಲು ಪಾಸ್ವಾನ್ ಒಪ್ಪಿದ್ದಾರೆಂದು ಸಿಂಗ್ ನುಡಿದರು.

ಬಿಹಾರದ ಎಲ್ಲಾ 40 ಸ್ಥಾನಗಳಲ್ಲಿ ಸ್ಫರ್ಧಿಸುವುದಾಗಿ ಮತ್ತು ಉತ್ತರಪ್ರದೇಶದಲ್ಲಿ 80 ಸ್ಥಾನಗಳಲ್ಲಿ ಸ್ಫರ್ಧಿಸುವುದಾಗಿ ಕಾಂಗ್ರೆಸ್ ಹೇಳಿರುವ ಬೆನ್ನಿಗೆ ಸಮಾಜವಾದಿ ಪಕ್ಷದ ನಾಯಕರ ಈ ನಿರ್ಧಾರ ಹೊರಬಿದ್ದಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಾಜಿ ಪ್ರಧಾನಿಗಳ ಕುಟುಂಬಿಕರ ಸ್ಫರ್ಧಾ ಕಲರವ
ಭಾರತದಲ್ಲಿ 26/11 ಮಾದರಿ ಮತ್ತೊಂದು ದಾಳಿ ಎಚ್ಚರಿಕೆ
ಯುಪಿಎಯಿಂದ ಪಿಎಂಕೆ 'ಬ್ರೇಕಿಂಗ್' ನ್ಯೂಸ್!
ಸೀಟಿಗಾಗಿ ಆತ್ಮಹತ್ಯೆ ಯತ್ನ, ಕಚೇರಿಗೆ ಬೆಂಕಿ!
ಕುಪ್ವಾರ ಕಾಳಗಕ್ಕೆ ಲಷ್ಕರೆ ಕಮಾಂಡರ್ ಬಲಿ
ಜಮ್ಮುವಿನಲ್ಲಿ ಪ್ರಮುಖ ಹಿಜ್ಬುಲ್ ಉಗ್ರರ ಬಂಧನ