ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಪ್ರಾಣಿ ಪ್ರೀತಿ: ಮಂಗಗಳಿಗೆ ಪಾಣಿಗ್ರಹಣ!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರಾಣಿ ಪ್ರೀತಿ: ಮಂಗಗಳಿಗೆ ಪಾಣಿಗ್ರಹಣ!
PTI
ಸಾಮಾನ್ಯವಾಗಿ ಕ್ಷಿಪಣಿ ಉಡಾವಣೆಗೆ ಸುದ್ದಿಯಾಗುವ ಒರಿಸ್ಸಾದ ಬಾಲ್ಸೂರ್ ಇದೀಗ ಅಪರೂಪದ ಮದುವೆಯಿಂದಾಗಿ ಸುದ್ದಿಯಾಗಿದೆ. ವಧೂವರರ್ಯಾರು ಅಂತ ಗೊತ್ತಾ? ಇಲ್ಲವಲ್ಲ, ಇತ್ತ ಕೇಳಿ.

ಅವೆರಡು ಮಂಗಗಳು. ಇದೀಗ ಮಾನವರಂತೆ ಮದುವೆಯ ಬಂಧನಕ್ಕೆ ಒಳಗಾಗಿವೆ. ಗ್ರಾಮದ ಸಾವಿರಾರು ಮಂದಿ ಈ ವಿಶೇಷ ಮದುವೆ ಕಾರ್ಯಕ್ರಮದ ಸಡಗರದಲ್ಲಿ ಭಾಗವಹಿಸಿ, ಸಂಭ್ರಮವನ್ನು ಕಂಡುಂಡು ಸಂತಸ ಪಟ್ಟರಂತೆ.

ಈ ಕಪಿವರ್ಯರೀರ್ವರಿಗೆ ಹಿಂದೂ ವಿಧಿವಿಧಾನದ ಮೂಲಕ ವಿವಾಹಕಾರ್ಯ ನೆರವೇರಿಸಿ ಮಾಡಿ ಅವರುಗಳ ದಾಂಪತ್ಯಕ್ಕೆ ನಾಂದಿಹಾಡಲಾಯಿತು.

ಪಶುಪ್ರಾಣಿಗಳ ಮೇಲೆ ಪ್ರೀತಿ ಮಮತೆ ತೋರಿದರೆ ದೇವರಿಂದ ತಾವೂ ಪ್ರೀತಿ ಮಮಕಾರವನ್ನು ಪಡೆಯಬಹುದು ಎಂಬುದು ಹಳ್ಳಿಗರ ನಂಬುಗೆಯಾಗಿದ್ದು, ಈ ಪ್ರಾಣಿಗಳ ಪಾಣೀಗ್ರಹಣಕ್ಕೆ ಮುಂದಾದರು.

ಲಿಲ್ಲಿ ಮತ್ತು ಗೋರಾ ಸಿಂಗ್ ಎಂಬ ದಂಪತಿಗಳು ವಧು ಚಂಪಾತಿಯನ್ನು ತಮ್ಮ ಪುತ್ರಿಯನ್ನಾಗಿ ದತ್ತು ಪಡೆದಿದ್ದರು. ಚಂಪಾತಿಯ ತಾಯಿ ವಿದ್ಯುತ್ ಶಾಕ್‌ನಿಂದ ಸತ್ತು ಹೋಗಿತ್ತು. ವರ ಕೋತಿಯೂ ತನ್ನೆಲ್ಲ ಬಂಧುಬಳಗವನ್ನು ಕಳಕೊಂಡು ಅನಾಥವಾಗಿದ್ದ. ಭದ್ರಾಕ್ ಜಿಲ್ಲೆಯ ಬ್ರಂದಾನಂ ಎಂಬವರು ಈ ಕೋತಿಗೆ ಆಶ್ರಯ ನೀಡಿದ್ದರು. ಇವರ ನಡುವೆ ಸಂಧಾನ ಏರ್ಪಟಿದ್ದು, ಮದುವೆ ನಿಕ್ಕಿಯಾಗಿತ್ತು.

ಪುತ್ರಿಯ ವಿವಾಹಮಾಡುವುದು ತನ್ನ ಕರ್ತವ್ಯ ಎಂಬುದಾಗಿ ತಾನು ಈ ಸಮಾರಂಭವನ್ನು ನೆರವೇರಿಸುವುದಾಗಿ ವಧುವಿನ ತಾಯಿ ಲಿಲ್ಲಿ ಹೇಳಿದ್ದಾರೆ. "ಚಂಪಾವತಿಯ ತಾಯಿ ವಿದ್ಯುತ್ ಶಾಕ್‌ನಲ್ಲಿ ಸತ್ತು ಹೋಗಿ ಆಕೆ ಅನಾಥೆಯಾದಳು. ನಾವು ಆಕೆಯನ್ನು ಮನೆಯಲ್ಲಿ ತಂದು ಮಗಳಂತೆ ಸಾಕಿಸಲಹಿದೆವು. ಒಬ್ಬ ತಾಯಿ ತನ್ನ ಮಗಳಿಗೆ ಏನೇನು ಮಾಡಬೇಕೋ ಅವನ್ನೆಲ್ಲ ನಾನು ಮಾಡುತ್ತಿದ್ದೇನೆ" ಎಂಬುದಾಗಿ ಲಿಲ್ಲಿ ಹೇಳುತ್ತಾರೆ.

ಈ ವಾನರ ವಿವಾಹ ಸಂಭ್ರಮದಲ್ಲಿ ಅತಿಥಿಗಳಿಗೆ ಹಬ್ಬದೂಟವನ್ನು ನೀಡಲಾಗಿದೆ. ಎಲ್ಲರೂ ಉಂಡು ವಧೂವರರಿಗೆ ಹರಸಿ ತೆರಳಿದರು.

ಪ್ರಥಮ ರಾತ್ರಿ ಎಲ್ಲಾಯಿತು? ಈ ನವದಂಪತಿಗಳು ಮಧುಚಂದ್ರಕ್ಕೆ ಎಲ್ಲಿಗೆ ತೆರಳುತ್ತಾರೆ ಎಂದು ಕೇಳಬೇಡಿ. ಅದು ವರದಿಯಲ್ಲಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮಂಗಗಳು, ಮದುವೆ, ಲಿಲ್ಲಿ, ಚಂಪಾತಿ
ಮತ್ತಷ್ಟು
ಎಸ್ಪಿ, ಆರ್‌ಜೆಡಿ, ಎಲ್‌ಜೆಪಿಗಳ ಹೊಸ ದೋಸ್ತಿ
ಮಾಜಿ ಪ್ರಧಾನಿಗಳ ಕುಟುಂಬಿಕರ ಸ್ಫರ್ಧಾ ಕಲರವ
ಭಾರತದಲ್ಲಿ 26/11 ಮಾದರಿ ಮತ್ತೊಂದು ದಾಳಿ ಎಚ್ಚರಿಕೆ
ಯುಪಿಎಯಿಂದ ಪಿಎಂಕೆ 'ಬ್ರೇಕಿಂಗ್' ನ್ಯೂಸ್!
ಸೀಟಿಗಾಗಿ ಆತ್ಮಹತ್ಯೆ ಯತ್ನ, ಕಚೇರಿಗೆ ಬೆಂಕಿ!
ಕುಪ್ವಾರ ಕಾಳಗಕ್ಕೆ ಲಷ್ಕರೆ ಕಮಾಂಡರ್ ಬಲಿ