ಚುನಾವಣೆಗೆ ಸಂಬಂಧಿಸಿದಂತೆ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣ ಬಿಹಾರದಲ್ಲಿಯೇ ಅತೀ ಹೆಚ್ಚು ದಾಖಲಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದುವರೆಗೆ ಬಿಹಾರದಲ್ಲಿ 500ಕ್ಕಿಂತ ಹೆಚ್ಚು ದೂರು ದಾಖಲಾಗಿದ್ದು, ಅದರಲ್ಲಿಯೂ ರೈಲ್ವೆ ಸಚಿವ ಲಾಲೂ ಪ್ರಸಾದ್ ಯಾದವ್ ಹಾಗೂ ಬಿಹಾರ ರಾಜ್ಯ ಗೃಹ ಮಂತ್ರಿ ಶಕೀಲ್ ಅಹಮದ್ ಕ್ಷೇತ್ರದಿಂದ ಅತೀ ಹೆಚ್ಚು ದೂರುಗಳು ಬಂದಿವೆ ಎಂದು ಹೇಳಲಾಗಿದೆ. |