ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಜೆಡಿಯು ಎನ್‌ಡಿಎ ಜತೆಗೆ ಇರುತ್ತದೆ: ನಿತೀಶ್ ಕುಮಾರ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜೆಡಿಯು ಎನ್‌ಡಿಎ ಜತೆಗೆ ಇರುತ್ತದೆ: ನಿತೀಶ್ ಕುಮಾರ್
ಕಾಂಗ್ರೆಸ್ ಅಥವಾ ತೃತೀಯ ರಂಗದೊಂದಿಗೆ ಹೊಗುವ ಮಾತೇ ಇಲ್ಲ ಎಂದು ಹೇಳಿರುವ ಎನ್‌ಡಿಎ ಅಂಗಪಕ್ಷವಾಗಿರುವ ಜೆಡಿ(ಯು), ತಾನು ಬಿಜೆಪಿ ನೇತೃತ್ವದ ಎನ್‌ಡಿಎಯೊಂದಿಗೆ ಇರುವುದಾಗಿ ಹೇಳಿದೆ.

"ಕಾಂಗ್ರೆಸ್ ಜೊತೆಗೆ ಕೈ ಜೋಡಿಸುವ ಮಾತೇ ಇಲ್ಲ. ಜೆಡಿ(ಯು) ಮಟ್ಟಿಗೆ ಹೇಳುವುದಾದರೆ, ನಾವು ತೃತೀಯ ರಂಗ ಅಥವಾ ಇತರ ಯಾವುದೇ ಆಯ್ಕೆಗಳು ಇಲ್ಲ. ನಮಗೆ ಇರುವ ಒಂದೇ ಒಂದು ಆಯ್ಕೆ ಎಂದರೆ ಎನ್‌ಡಿಎ" ಎಂದು ಜೆಡಿಯು ನಾಯಕ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.

"ಜನತೆ ಎನ್‌ಡಿಎ ಪರವಾಗಿ ಮತಚಲಾಯಿಸಿದರೆ, ಆಡ್ವಾಣಿ ನೇತೃತ್ವದ ಸರ್ಕಾರ ರೂಪಿಸಲಾಗುವುದು. ಇದು ಸಾಧ್ಯವಾಗದಿದ್ದರೆ ನಾವು ಜನತೆಯ ತೀರ್ಪಿ ತಲೆಬಾಗುತ್ತೇವೆ" ಎಂದೂ ಅವರು ನುಡಿದರು.

ಎಸ್ಪಿ, ಆರ್‌ಜೆಡಿ ಮತ್ತು ಎಲ್‌ಜೆಪಿಗಳ ಹೊಸಮೈತ್ರಿಯ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು "ಅವರು ಜಗಳವಾಡುತ್ತಲೇ ಇರುತ್ತಾರೆ ಮತ್ತು, ಮತ್ತೆ ಒಂದಾಗುತ್ತಾರೆ" ಮುಲಾಯಂ ಸಿಂಗ್ ಅವರು ಲಾಲೂ ಅವರಿಗೆ ಸಾಕಷ್ಟು ಸಹಾಯ ಮಾಡಿದ್ದರು. ಆದರೆ ಲಾಲೂ ತನ್ನ ಕೆಲಸ ಆದ ಮೇಲೆ ಅವರನ್ನು ಸಂಪೂರ್ಣವಾಗಿ ನಿರ್ಲಕ್ಷ್ಯಿಸಿದರು. ಮುಲಾಯಂ ತೊಂದರೆಯಲ್ಲಿದ್ದಾಗ, ಈ ಸ್ನೇಹಿತರು (ಎಲ್‌ಜೆಪಿ ಮತ್ತು ಆರ್‌ಜೆಡಿ) ತಿರುಗಿಯೋ ನೋಡಿಲ್ಲ, ಅವರ ಪರವಾಗಿ ಒಂದೂ ಮಾತನ್ನೂ ಆಡಿರಲಿಲ್ಲ ಎಂದು ಟೀಕಿಸಿದರು.

ಕಾಂಗ್ರೆಸ್ ತನ್ನನ್ನು ಹೇಗೆಬೇಕೋ ಹಾಗೆ ಆಡಿಸಿರುವ ಕಾರಣ ಲಾಲೂ ಪ್ರಸಾದ್‌ ಅವರಿಗೆ ಕಾಂಗ್ರೆಸ್ ಬಗ್ಗೆ ಭ್ರಮನಿರಸನವಾಗಿದೆ ಎಂದು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜೈಲಿನಲ್ಲಿರುವ ಮಾವೋವಾದಿಗಳು ಸ್ಪರ್ಧೆಗೆ
ನೀತಿ ಸಂಹಿತೆ ಉಲ್ಲಂಘನೆಯಲ್ಲಿ ಬಿಹಾರವೇ ಮುಂದು
ಪುತ್ರರತ್ನನನ್ನು ಸಮರ್ಥಿಸಿಕೊಂಡ ಮನೇಕಾ
ಪ್ರಾಣಿ ಪ್ರೀತಿ: ಮಂಗಗಳಿಗೆ ಪಾಣಿಗ್ರಹಣ!
ಎಸ್ಪಿ, ಆರ್‌ಜೆಡಿ, ಎಲ್‌ಜೆಪಿಗಳ ಹೊಸ ದೋಸ್ತಿ
ಮಾಜಿ ಪ್ರಧಾನಿಗಳ ಕುಟುಂಬಿಕರ ಸ್ಫರ್ಧಾ ಕಲರವ