ಗೋದ್ರಾ ಗಲಭೆ ಪ್ರಕರಣದ ಆರೋಪ ಹೊತ್ತಿರುವ ಗುಜರಾತಿನ ಶಿಕ್ಷಣ ಸಚಿವೆ ಮಾಯಾಬೆನ್ ಕೊಡ್ನಾನಿ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಗುಜರಾತ್ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ. ಈ ಹಿನ್ನೆಲೆಯಲ್ಲಿ ಅವರು ತಕ್ಷಣ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ,
ಗುಜರಾತಿನಲ್ಲಿ 2002ರಲ್ಲಿ ನಡೆಸಲಾಗಿರುವ ಗೋಧ್ರಾ ನರಮೇಧದ ಬಳಿಕದ ಗಲಭೆಗಳ ನೇತೃತ್ವನ್ನು ಮಾಯಾ ವಹಿಸಿದ್ದರು ಎಂದು ಆರೋಪಿಸಲಾಗಿದೆ. ಇದಲ್ಲದೆ ಇನ್ನೋರ್ವ ಬಿಜೆಪಿ ಶಾಸಕರೂ ಸಲ್ಲಿಸುರುವ ಜಾಮೀನು ಅರ್ಜಿ ವಜಾಗೊಂಡಿದೆ.
"ಮಾಯ ಕೊಡ್ನಾನಿ ಅವರ ಜಾಮೀನು ಅರ್ಜಿಯನ್ನು ವಜಾಮಾಡಲಾಗಿದೆ ಮತ್ತು ಅವರು ಸಾಯಂಕಾಲದೊಳಗಗಾಗಿ ಬಂಧನಕ್ಕೀಡಾಗಿರುವ ಸಾಧ್ಯತೆ ಇದೆ" ಎಂದು ಹೈಕೋರ್ಟ್ ವಕೀಲ ಮುಕುಲ್ ಸಿನ್ನಾ ತಿಳಿಸಿದ್ದಾರೆ.
ಗುಜರಾತ್ ಸರ್ಕಾರದಲ್ಲಿ ಉನ್ನತ ಶಿಕ್ಷಣ ಸಚಿವೆಯಾಗಿರುವ ಮಾಯಾ, ನರೋಡ ಪಟಿಯಾ ಹಾಗೂ ನರೋಡ ಗಾಮ್‌ನಲ್ಲಿ ನಡೆದ ಗಲಭೆಯ ನೇತೃತ್ವ ವಹಿಸಿದ್ರು ಎಂದು ಆಪಾದಿಸಲಾಗಿದ್ದು, ಈ ಗಲಭೆಯಲ್ಲಿ 106 ಮಂದಿ ಸಾವಿಗೀಡಾಗಿದ್ದು, 47 ಮಂದಿ ಕಾಣೆಯಾಗಿದ್ದರು. ಗೋಧ್ರಾ ರೈಲಿನನಲ್ಲಿ ನಡೆದ ನರಮೇಧದ ಬಳಿಕ ಫೆಬ್ರವರಿ 28ರಂದು ಗಲಭೆ ನಡೆಸಲಾಗಿತ್ತು.
ಫೆಬ್ರವರಿ 5ರಂದು ಇವರಿಬ್ಬರಿಗೂ ಸೆಷನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಇದರ ವಿರುದ್ಧ ಪ್ರಕರಣದ ತನಿಖೆಗೆ ಸುಪ್ರೀಂ ಕೋರ್ಟ್ ನೇಮಕ ಮಾಡಿದ್ದ, ವಿಶೇಷ ತನಿಖಾ ತಂಡವು ಹೈಕೋರ್ಟಿಗೆ ಅರ್ಜಿ ಸಲ್ಲಿಸಿ ಇಬ್ಬರ ಜಾಮೀನು ಅರ್ಜಿ ವಜಾ ಮಾಡಲು ಮನವಿ ಮಾಡಿದ್ದು, ಇದೀಗ ಹೈ ಕೋರ್ಟ್ ಜಾಮೀನು ವಜಾ ಮಾಡಿದೆ.
ಈ ತೀರ್ಪಿನಿಂದ ಪಕ್ಷಕ್ಕೆ ಮುಖಭಂಗವಾಗಿದೆ ಎಂಬ ವಾದವನ್ನು ತಳ್ಳಿಹಾಕಿರುವ ಗುಜರಾತ್ ಬಿಜೆಪಿ ವಕ್ತಾರ ಜೇ ನಾರಾಯಣ್ ವ್ಯಾಸ್ ಅವರು "ನ್ಯಾಯಾಲಯದ ನಿರ್ಧಾರ ಅಂತಿಮವಲ್ಲ. ನಾವು ಆದೇಶವನ್ನು ಅಧ್ಯಯನ ನಡೆಸಿ ಮುಂದಿನ ಕ್ರಮಕೈಗೊಳ್ಳುತ್ತೇವೆ. ಇದರಲ್ಲಿ ಮುಜುಗರದ ಪ್ರಶ್ನೆಯೇ ಇಲ್ಲ" ಎಂದು ಹೇಳಿದ್ದಾರೆ.
ಆದರೆ ಈ ಅವಕಾಶವನ್ನು ಸೂಕ್ತವಾಗಿ ಬಳಸಿಕೊಂಡಿರುವ ಕಾಂಗ್ರೆಸ್ ನರೇಂದ್ರ ಮೋದಿ ಸರ್ಕಾರವನನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ. ಎಲ್ಲಿಯವರೆಗೆ ಮೋದಿ ಪೋಸ್ಚರ್ ಬಾಯ್ ಆಗಿರುತ್ತಾರೋ ಅಲ್ಲಿಯ ತನಕ ಬಿಜೆಪಿಗೆ ನಷ್ಟ ತಪ್ಪಿದ್ದಲ್ಲ ಎಂಬುದಾಗಿ ಕಾಂಗ್ರೆಸ್‌ನ ಹಿರಿಯ ನಾಯಕ ಕಪಿಲ್ ಸಿಬಾಲ್ ಹೇಳಿದ್ದಾರೆ. |