ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > 28 ವರ್ಷ ಸಹೋದರನ ಹುದ್ದೆ ಹೊಂದಿದ್ದ ಅವಳಿ ಸಹೋದರ!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
28 ವರ್ಷ ಸಹೋದರನ ಹುದ್ದೆ ಹೊಂದಿದ್ದ ಅವಳಿ ಸಹೋದರ!
ಪಂಜಾಬ್ ಸರ್ಕಾರದ ಕಣ್ಣಿಗೆ 28 ವರ್ಷಗಳ ಕಾಲ ಮಣ್ಣೆರಚಿದ ಅವಳಿ ಸಹೋದರನೊಬ್ಬ ತನ್ನ ಸಹೋದರನ ಹೆಸರಿನಲ್ಲಿ ಹುದ್ದೆ, ಸಂಬಳ, ಭತ್ಯೆಗಳನ್ನು ಪಡೆದಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ.

ಈ ಕಥೆ 1974ರಲ್ಲಿ ಆರಂಭವಾಗುತ್ತದೆ. ಯುಪಿಎಸ್‌ಸಿ ಪರೀಕ್ಷೆ ಬರೆದ ಪ್ರೇಮ್ ಸಿಂಗ್ ಕೇಂದ್ರ ಅಬಕಾರಿ ಇಲಾಖೆಯಲ್ಲಿ ಅಧಿಕಾರಿ ಹುದ್ದೆ ಪಡೆದರು. ಅತ್ಯಂತ ಬುದ್ಧಿವಂತ ವಿದ್ಯಾರ್ಥಿಯಾಗಿದ್ದ ಪ್ರೇಮ್ ಪಂಜಾಬ್ ಸರ್ಕಾರ ನಡೆಸಿದ ಪರೀಕ್ಷೆಯಲ್ಲೂ ಪಾಸಾಗಿ ತೂಕ ಮತ್ತು ಅಳತೆ ವಿಭಾಗದಲ್ಲೂ ಹುದ್ದೆ ಗಿಟ್ಟಿಸಿದರು. ಪ್ರೇಮ್ ಆಯ್ದುಕೊಂಡದ್ದು ಅಬಕಾರಿ ಇಲಾಖೆಯ ಹುದ್ದೆ. ಇತ್ತ ಅವರ ಸಹೋದರ ರತನ್ ಸಿಂಗ್ ಸದ್ದಿಲ್ಲದೆ, ತೂಕ ಮತ್ತು ಅಳತೆ ವಿಭಾಗದ ಹುದ್ದೆಗೆ ಸೇರಿಕೊಂಡರು. ಅದೇ ಮುಖ, ಅದೇ ಧ್ವನಿ, ಅದೇ ಎತ್ತರ. ಎಲ್ಲಾ ಒಂದೇ ತರಹ. ಯಾರಿಗೂ ಅನುಮಾನ ಬರಲಿಲ್ಲ.

ಇದು 28 ವರ್ಷಗಳ ಕಾಲ ಯಾರಿಗೂ ಗೊತ್ತಾಗಲೇ ಇಲ್ಲ. ಆದರೆ ರತನ್ ಗ್ರಹಚಾರ ಕೆಟ್ಟಿತ್ತು. ಅನಗತ್ಯ ಪ್ರಕರಣ ಒಂದರಲ್ಲಿ ಸಿಲುಕಿಕೊಂಡ ರತನ್ ಒಬ್ಬ ಮೋಸಗಾರ ಎಂದು ನ್ಯಾಯಾಲಯ ತೀರ್ಪು ನೀಡುವಲ್ಲಿಗೆ ಇದು ಮುಕ್ತಾಯಗೊಂಡಿದೆ. 2002ರಲ್ಲಿ ರತನ್ ತಾನು ಸ್ವಯಂ ನಿವೃತ್ತಿ ಯಾಚಿಸಿದ್ದು, ತನ್ನ ನಿವೃತ್ತಿ ವೇತನಗಳಿಗೆ ಒತ್ತಾಯಿಸಿದ್ದರು. ಆದರೆ ಇವರ ಬಗ್ಗೆ ಸಂಶಯಗೊಂಡಿದ್ದವರು ಇದು ವಿಪರೀತ ಎಂದು ಭಾವಿಸಿದ್ದು, ಈ ಕುರಿತು ದೂರೊಂದನ್ನು ಸಲ್ಲಿಸಿದ್ದರು.

"ಈ ದೂರಿನಾಧಾರದಲ್ಲಿ ವಿಜಿಲೆನ್ಸ್ ಬ್ಯೂರೋ ತನಿಖೆ ಆರಂಭಿಸಿದ್ದು, 2003ರ ಜನವರಿ 27ರಂದು ರತನ್ ಹಾಗೂ ಅವರ ಸಹೋದರ ಪ್ರೇಮ್ ವಿರುದ್ಧ ಅಪರಾಧ ಪ್ರಕರಣ ಒಂದನ್ನು ದಾಖಲಿಸಿತ್ತು. ಮೊಹಾಲಿ ಪೊಲೀಸ್ ಠಾಣೆಯಲ್ಲಿ ಸಲ್ಲಿಸಲಾಗಿದ್ದ ದೂರಿನಲ್ಲಿ ಈ ಇಬ್ಬರು ಜಂಟಿಯಾಗಿ ಮೋಸ ಎಸಗಿದ್ದಾರೆಂದು ದೂರಲಾಗಿತ್ತು. 2005ರಲ್ಲಿ ರತನ್ ಸಿಂಗ್ ತನ್ನ ಉದ್ಯೋಗ ಕಳೆದುಕೊಂಡಿದ್ದರೂ, ಈ ಇಬ್ಬರು ಪಂಜಾಬ್ ಮತ್ತು ಹರ್ಯಾಣ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆಯುವಲ್ಲಿ ಸಫಲವಾಗಿದ್ದರು.

ಅಲ್ಲದೆ, ರತನ್ ಪಡೆದಿರುವ 8.11 ಲಕ್ಷ ರೂಪಾಯಿ ಭತ್ಯೆಯನ್ನು ಮರಳಿಸಬೇಕು ಎಂಬ ವಿಜಿಲೆನ್ಸ್ ವಿಭಾಗದ ಶಿಫಾರಸ್ಸಿಗೆ ತಡೆಯಾಜ್ಞೆ ನೀಡಬೇಕು ಎಂಬುದಾಗಿ ಹೈಕೋರ್ಟ್ ಮೊರೆ ಹೋಗಿದ್ದರು.

ಇದೀಗ ಹೈಕೋರ್ಟ್ ನ್ಯಾಯಮೂರ್ತಿ ಪ್ರಮೋದ್ ಕೋಹ್ಲಿ ನೇತೃತ್ವದ ನ್ಯಾಯಪೀಠವು, ರತನ್ ಸಿಂಗ್ ಅರ್ಜಿಯನ್ನು ವಜಾ ಮಾಡಿದ್ದಾರೆ ಮತ್ತು ವಿಜಿಲೆನ್ಸ್ ತನಿಖೆಯನ್ನು ಅನೂರ್ಜಿತಗೊಳಿಸಿದ್ದಾರೆ. "ಅರ್ಜಿದಾರ ತನ್ನ ಸಹೋದರನಿಗೆ ಲಭಿಸಿದ ಹುದ್ದೆಗೆ ನೇಮಕವಾಗಿದ್ದು, ಮೊದಲ ಹಂತಕ್ಕೇ ಆತನನ್ನು ತೂಕ ಮತ್ತು ಅಳತೆ ವಿಭಾಗದ ನೌಕನೆಂದು ಪರಿಗಣಿಸುವಂತಿಲ್ಲ" ಎಂದು ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಗುಜರಾತ್: ಮಾಯಾಬೆನ್‌ ಜಾಮೀನು ಅರ್ಜಿ ವಜಾ
ಸಿಂಗ್ ಮುಕ್ತ ಚರ್ಚೆಗೆ ಬರಲಿ: ಆಡ್ವಾಣಿ ಸವಾಲು
ಜೆಡಿಯು ಎನ್‌ಡಿಎ ಜತೆಗೆ ಇರುತ್ತದೆ: ನಿತೀಶ್ ಕುಮಾರ್
ಜೈಲಿನಲ್ಲಿರುವ ಮಾವೋವಾದಿಗಳು ಸ್ಪರ್ಧೆಗೆ
ನೀತಿ ಸಂಹಿತೆ ಉಲ್ಲಂಘನೆಯಲ್ಲಿ ಬಿಹಾರವೇ ಮುಂದು
ಪುತ್ರರತ್ನನನ್ನು ಸಮರ್ಥಿಸಿಕೊಂಡ ಮನೇಕಾ