ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಇಸ್ಲಾಮಿಕ್ ಆಡಳಿತಕ್ಕಾಗಿ ಕಾಂಗ್ರೆಸ್ ಯತ್ನ: ಠಾಕ್ರೆ ಶಂಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇಸ್ಲಾಮಿಕ್ ಆಡಳಿತಕ್ಕಾಗಿ ಕಾಂಗ್ರೆಸ್ ಯತ್ನ: ಠಾಕ್ರೆ ಶಂಕೆ
PTI
ಹಿಂದೂಗಳನ್ನು ಮೂಲೆಗುಂಪು ಮಾಡಲು ಒಳಸಂಚು ನಡೆಯುತ್ತಿದೆ ಎಂದು ಕೆಂಡ ಕಾರಿರುವ ಶಿವಸೇನಾ ಮುಖ್ಯಸ್ಥ ಬಾಳ ಠಾಕ್ರೆ, ಲೋಕಸಭೆ ಚುನಾವಣೆಗಳಲ್ಲಿ ದೆಹಲಿಯ ಕೆಂಪು ಕೋಟೆಯ ಮೇಲೆ ಕೇಸರಿ ಬಾವುಟ ಹಾರಿಸಲು ಒಗ್ಗಟ್ಟಿನಿಂದ ಶ್ರಮಿಸುವಂತೆ ಕರೆ ನೀಡಿದ್ದಾರೆ.

'ಹಿಂದೂಗಳನ್ನು ಮೂಲೆಗುಂಪು ಮಾಡಲು ಮತ್ತು ಅವರನ್ನು ನಿರ್ನಾಮ ಮಾಡಲು ಒಳಸಂಚು ನಡೆಯುತ್ತಿದೆ. ಚುನಾವಣೆಗಳಲ್ಲಿ ಹಿಂದೂಗಳು ಒಗ್ಗಟ್ಟಿನಿಂದ ತಮ್ಮ ವಜ್ರ ಮುಷ್ಟಿಯನ್ನು ಪ್ರದರ್ಶಿಸಬೇಕು' ಎಂದು ಶಿವಸೇನೆಯ ಮುಖವಾಣಿ 'ಸಾಮ್ನಾ' ಪತ್ರಿಕೆಯಲ್ಲಿ ಬರೆದಿರುವ ಠಾಕ್ರೆ, ಹಿಂದೂಗಳ ಹಿತಾಸಕ್ತಿಗಾಗಿ ವರುಣ್ ಗಾಂಧಿ ಆಕ್ರೋಶದಿಂದ ಏನಾದರೂ ನುಡಿದಿದ್ದರೆ, ತಥಾಕಥಿತ 'ಜಾತ್ಯತೀತ' ಶಕ್ತಿಗಳು, ಆತ ಚುನಾವಣೆಗೇ ಸ್ಪರ್ಧಿಸಬಾರದು ಎಂದು ಒತ್ತಾಯಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಿವಸೇನೆಯು ಮಹಾರಾಷ್ಟ್ರದ 48ರಲ್ಲಿ 22 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ.

ಕಾಂಗ್ರೆಸ್ ಮೇಲೆ ವಾಗ್ದಾಳಿ ನಡೆಸಿದ ಠಾಕ್ರೆ, 'ಹಿಂದೂಗಳನ್ನು ಹಿಂದಕ್ಕೆ ತಳ್ಳಿ ಕಾಂಗ್ರೆಸ್ ಪಕ್ಷವು ದೇಶದಲ್ಲಿ ಇಸ್ಲಾಮಿಕ್ ಆಡಳಿತವನ್ನು ಜಾರಿಗೊಳಿಸಲು ಪ್ರಯತ್ನಿಸುತ್ತಿದೆಯೇ' ಎಂದು ಪ್ರಶ್ನಿಸಿದರು.

ಮುಸ್ಲಿಮರು, ಕ್ರಿಶ್ಚಿಯನ್ನರು ಮತ್ತು ಇತರ ಧರ್ಮೀಯರು ಚುನಾವಣೆಗಳಲ್ಲಿ ತಮ್ಮ ತಮ್ಮ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಬಹುದಾದರೆ, ಹಿಂದೂಗಳೇಕೆ ಈ ರೀತಿ ಮಾಡಬಾರದು ಎಂದವರು ಕೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
28 ವರ್ಷ ಸಹೋದರನ ಹುದ್ದೆ ಹೊಂದಿದ್ದ ಅವಳಿ ಸಹೋದರ!
ಗುಜರಾತ್: ಮಾಯಾಬೆನ್‌ ಜಾಮೀನು ಅರ್ಜಿ ವಜಾ
ಸಿಂಗ್ ಮುಕ್ತ ಚರ್ಚೆಗೆ ಬರಲಿ: ಆಡ್ವಾಣಿ ಸವಾಲು
ಜೆಡಿಯು ಎನ್‌ಡಿಎ ಜತೆಗೆ ಇರುತ್ತದೆ: ನಿತೀಶ್ ಕುಮಾರ್
ಜೈಲಿನಲ್ಲಿರುವ ಮಾವೋವಾದಿಗಳು ಸ್ಪರ್ಧೆಗೆ
ನೀತಿ ಸಂಹಿತೆ ಉಲ್ಲಂಘನೆಯಲ್ಲಿ ಬಿಹಾರವೇ ಮುಂದು