ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಗಾಂಧಿ ವಸ್ತುಗಳ ಹರಾಜಿಗೆ ಒಟಿಸ್ ಕ್ಷಮೆಯಾಚನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗಾಂಧಿ ವಸ್ತುಗಳ ಹರಾಜಿಗೆ ಒಟಿಸ್ ಕ್ಷಮೆಯಾಚನೆ
ಅಪರೂಪದ ವಸ್ತುಗಳ ಸಂಗ್ರಾಹಕಾರ ಜೇಮ್ಸ ಒಟಿಸ್ ಭಾರತಕ್ಕೆ ಆಗಮಿಸಿದ್ದು, ಗಾಂಧೀಜಿಯವರ ವಸ್ತುಗಳನ್ನು ಹರಾಜು ಹಾಕಿ ಭಾರತೀಯರ ಭಾವನೆಗಳಿಗೆ ನೋವುಂಟು ಮಾಡಿರುವುದಕ್ಕೆ ಕ್ಷಮೆಯಾಚಿಸಿದ್ದಾರೆ. ಅಲ್ಲದೆ, ಹರಾಜಿನಿಂದ ಸಂಗ್ರಹವಾಗಿರುವ ಹಣವು ಗಾಂಧೀಜಿ ಮೌಲ್ಯಗಳ ಪ್ರವರ್ತನಕ್ಕಾಗಿ ಬಳಸಲಾಗವುದು ಎಂದು ನುಡಿದರು.

"ಅವರು(ಗಾಂಧೀಜಿ) ವಿಶ್ವದ ಮಹಾನ್ ನಾಯಕ. ನಾನು ಅವರ ಬಗ್ಗೆ ಕಳೆದ 20 ವರ್ಷಗಳಿಂದ ಅಧ್ಯಯನ ಮಾಡುತ್ತಿದ್ದೇನೆ. ಈ ಹರಾಜಿನಿಂದ ಬಂದಿರುವ ಹಣವು ಅಹಿಂಸಾ ಸಂಘಟನೆಗಳಿಗೆ ಹೋಗುತ್ತದೆ" ಎಂಬುದಾಗಿ ಒಟಿಸ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

"ನಾನು ಭಾರತದಲ್ಲಿ ಯಾರಿಗಾದರೂ ಕೋಪತರಿಸಿದ್ದರೆ ಕ್ಷಮೆ ಯಾಚಿಸುತ್ತೇನೆ. ಲಾಭಗಳಿಸುವುದು ಎಂದಿಗೂ ನನ್ನ ಉದ್ದೇಶವಾಗಿರಲಿಲ್ಲ. ಅವರ ತತ್ವಗಳನ್ನು ಉತ್ತೇಜಿಸುವುದಷ್ಟೆ ನನ್ನ ಉದ್ದೇಶವಾಗಿತ್ತು" ಎಂಬುದಾಗಿ ಅವರು ಕೈಮುಗಿದು ಕೇಳಿಕೊಂಡರು.

ಗಾಂಧೀಜಿಯವರು ಬಳಸುತ್ತಿದ್ದ ಕನ್ನಡಕ, ಚಪ್ಪಲಿಗಳು, ಊಟದ ತಟ್ಟೆ, ಬೊಗುಣಿ ಹಾಗೂ ಅವರ ಜೆನಿತ್ ಪಾಕೀಟು ವಾಚನ್ನು ಮಾರ್ಚ್ 5ರಂದು ಆಂಟಿಕೋರಂ ಆಕ್ಷನೀರ್ಸ್ ಸಂಸ್ಥೆಯ ಮೂಲಕ ಹರಾಜು ಹಾಕಿದ್ದು, ಇದನ್ನು ಉದ್ಯಮಿ ವಿಜಯ್ ಮಲ್ಯ 18 ಕೋಟಿ ರೂಪಾಯಿ ಬಿಡ್‌ನಲ್ಲಿ ಪಡೆದುಕೊಂಡಿದ್ದರು. ಗಾಂಧೀಜಿ ವಸ್ತುಗಳನ್ನು ಹರಾಜು ಹಾಕದಂತೆ ಭಾರತವು ತೀವ್ರ ಒತ್ತಡ ಹೇರಿದ್ದನ್ನು ಇಲ್ಲಿ ಸ್ಮರಿಸಬಹುದು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
3 ಪಕ್ಷಕ್ಕೂ ಸಾಮಾನ್ಯ ಚಿಹ್ನೆ ನೀಡಲು ಸು.ಕೋ ಆದೇಶ
ಇಸ್ಲಾಮಿಕ್ ಆಡಳಿತಕ್ಕಾಗಿ ಕಾಂಗ್ರೆಸ್ ಯತ್ನ: ಠಾಕ್ರೆ ಶಂಕೆ
28 ವರ್ಷ ಸಹೋದರನ ಹುದ್ದೆ ಹೊಂದಿದ್ದ ಅವಳಿ ಸಹೋದರ!
ಗುಜರಾತ್: ಮಾಯಾಬೆನ್‌ ಜಾಮೀನು ಅರ್ಜಿ ವಜಾ
ಸಿಂಗ್ ಮುಕ್ತ ಚರ್ಚೆಗೆ ಬರಲಿ: ಆಡ್ವಾಣಿ ಸವಾಲು
ಜೆಡಿಯು ಎನ್‌ಡಿಎ ಜತೆಗೆ ಇರುತ್ತದೆ: ನಿತೀಶ್ ಕುಮಾರ್