ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ವರುಣ್ ಗಾಂಧಿಗೆ 2 ದಿನ ನ್ಯಾಯಾಂಗ ಬಂಧನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವರುಣ್ ಗಾಂಧಿಗೆ 2 ದಿನ ನ್ಯಾಯಾಂಗ ಬಂಧನ
ಮಾ.30ಕ್ಕೆ ವರುಣ್ ಜಾಮೀನು ಅರ್ಜಿ ವಿಚಾರಣೆ...
ಪ್ರಚೋದನಕಾರಿ ಭಾಷಣಕ್ಕೆ ಸಂಬಂಧಿಸಿದಂತೆ ದೆಹಲಿ ಉಚ್ಛ ನ್ಯಾಯಾಲಯದಿಂದ ಜಾಮೀನು ಅರ್ಜಿಯನ್ನು ವಾಪಸು ಪಡೆದಿರುವ ಬಿಜೆಪಿ ನಾಯಕ ವರುಣ್ ಗಾಂಧಿ ಕೊನೆಗೂ ಶನಿವಾರ ಮಧ್ನಾಹ್ನ ಪಿಲಿಭಿಟ್ ನ್ಯಾಯಾಲಯಕ್ಕೆ ಶರಣಾಗುವ ಮೂಲಕ 'ಬಂಧನದ ಪ್ರಹಸನ'ಕ್ಕೆ ಅಂತ್ಯ ಹಾಡಿದ್ದಾರೆ. ನ್ಯಾಯಾಲಯ ಸೋಮವಾರದವರೆಗೆ (ಮಾ.30)ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಬಂಧನ ಸಾಧ್ಯವಾಗದಂತೆ ದೆಹಲಿ ಹೈಕೋರ್ಟ್‌ಗೆ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದ ವರುಣ್ ಅಂತಿಮವಾಗಿ 'ಬಂಧನದ ನಾಟಕ'ಕ್ಕೆ ಮುಂದಾಗ ಭಾಜಪದ ನಿರ್ದೇಶನದಂತೆ ವರುಣ್ ಜಾಮೀನು ಅರ್ಜಿಯನ್ನು ಹೈಕೋರ್ಟ್‌ನಿಂದ ಜಾಮೀನು ಅರ್ಜಿ ವಾಪಸು ಪಡೆದಿದ್ದರು.

ವರುಣ್ ಜಾಮೀನು ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ತಿಳಿಸಿದೆ. ಕೋರ್ಟ್ ಆವರಣದಿಂದ ಹೊರಬಂದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವರುಣ್, ಜೈಲಿಗೆ ಹೋಗಲು ನಾನು ಸಿದ್ದ, ಆದರೆ ನನಗೆ ಈ ದೇಶದ ಕಾನೂನು ವ್ಯವಸ್ಥೆಯ ಮೇಲೆ ನಂಬಿಕೆ ಇದೆ. ಹಿಂದೂ ತತ್ವ ಸಿದ್ದಾಂತಕ್ಕೆ ನಾನು ಈಗಲೂ ಬದ್ದ ಎಂದು ಹೇಳಿದರು.

ತಾನು ಜೈಲಿಗೆ ಹೋಗಲು ಸಿದ್ದ ಎಂಬ ಹೇಳಿಕೆ ಬಿಜೆಪಿಯಲ್ಲಿ ಸಂಚಲನ ಮೂಡಿಸಿತ್ತು. ಇಂದು ಬೆಳಿಗ್ಗೆ ನ್ಯಾಯಾಲಯಕ್ಕೆ ಶರಣಾಗಲು ಆಗಮಿಸಿದ ವರುಣ್ ಗಾಂಧಿ ಪಿಲಿಭಿಟ್ ಕ್ಷೇತ್ರದುದ್ದಕ್ಕೂ ವರುಣ್ ಹಾಗೂ ಬಿಜೆಪಿ ಬೆಂಬಲಿಗರಿಂದ ಅದ್ದೂರಿ ಸ್ವಾಗತದೊಂದಿಗೆ ಘೋಷಣೆ ಕೂಗಿದರು. ಏತನ್ಮಧ್ಯೆ ಬಿಜೆಪಿ ಬೆಂಬಲಿಗರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದು ಲಘು ಲಾಠಿ ಪ್ರಹಾರ ಕೂಡ ನಡೆಯಿತು.

ಉತ್ತರ ಪ್ರದೇಶದ ಫಿಲಿಭಿತ್ ಲೋಕಸಭಾ ಕ್ಷೇತ್ರದಲ್ಲಿ ಮುಸ್ಲಿಮರ ವಿರುದ್ಧ ವರುಣ್ ಗಾಂಧಿ ಮಾಡಿದ್ದ ಭಾಷಣದ ಸೀಡಿ ವಿಡಿಯೋ ಪ್ರತಿಯನ್ನು ತರಿಸಿಕೊಂಡಿದ್ದ ಚುನಾವಣಾ ಆಯೋಗ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಆದೇಶಿಸಿತ್ತು.

29ರ ಹರೆಯದ ಈ ಬಿಜೆಪಿ ನಾಯಕನಿಗೆ ಅಲಹಾಬಾದ್ ಹೈಕೋರ್ಟ್ ಜಾಮೀನು ನಿರಾಕರಿಸಿತ್ತು. ಈ ಹಿನ್ನಲೆಯಲ್ಲಿ ದೆಹಲಿ ಹೈಕೋರ್ಟ್‌ನಲ್ಲಿ ಸಲ್ಲಿಸಲಾಗಿದ್ದ ಜಾಮೀನು ಅರ್ಜಿಯನ್ನು ವಾಪಸು ಪಡೆಯಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಉತ್ತರ ಪ್ರದೇಶ: ಪಾಂಡೆ ವಿರುದ್ಧ ವಾರಂಟ್‌
ಕೇರಳ: ಸಿಪಿಎಂ ಕಾರ್ಯಕರ್ತನ ಹತ್ಯೆ
ಗುಜರಾತ್ ಸಚಿವೆ ಮಾಯಾ ಸಿಟ್ ಎದುರು ಶರಣು
ಗಾಂಧಿ ವಸ್ತುಗಳ ಹರಾಜಿಗೆ ಒಟಿಸ್ ಕ್ಷಮೆಯಾಚನೆ
3 ಪಕ್ಷಕ್ಕೂ ಸಾಮಾನ್ಯ ಚಿಹ್ನೆ ನೀಡಲು ಸು.ಕೋ ಆದೇಶ
ಇಸ್ಲಾಮಿಕ್ ಆಡಳಿತಕ್ಕಾಗಿ ಕಾಂಗ್ರೆಸ್ ಯತ್ನ: ಠಾಕ್ರೆ ಶಂಕೆ