ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ನ್ಯಾನೋ ಬಿಡುಗಡೆ ನನ್ನ ವಿರುದ್ಧದ ಸಂಚು: ಮಮತಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನ್ಯಾನೋ ಬಿಡುಗಡೆ ನನ್ನ ವಿರುದ್ಧದ ಸಂಚು: ಮಮತಾ
ಮುಂಬೈಯಲ್ಲಿ ನ್ಯಾನೋ ಕಾರು ಬಿಡುಗಡೆಯಾದ ನಾಲ್ಕು ದಿನಗಳ ಬಳಿಕ ಈ ಬಗ್ಗೆ ಬಾಯಿ ತೆರೆದಿರುವ, ಪಶ್ಚಿಮ ಬಂಗಾಳದಿಂದ ಟಾಟಾದ ಈ ಯೋಜನೆ ಓಡಿಹೋಗುವಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಆರೋಪವಿರುವ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ, ಲೋಕಸಭೆ ಚುನಾವಣೆ ಸಂದರ್ಭ ಈ ಕಾರನ್ನು ಬಿಡುಗಡೆ ಮಾಡಿರುವುದು ತನ್ನ ವಿರುದ್ಧ ಹೂಡಿರುವ ಸಂಚು ಎಂದು ಆರೋಪಿಸಿದ್ದಾರೆ.

ಖಾಸಗಿ ಚಾನೆಲ್ ಒಂದರ ಚರ್ಚಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಮಮತಾ, 'ಲೋಕಸಭೆ ಚುನಾವಣೆಗಳು ಬರುತ್ತಿವೆ ಎಂಬುದನ್ನು ಗಮನದಲ್ಲಿಟ್ಟುಕೊಂಡೇ ನ್ಯಾನೋ ಕಾರನ್ನು ಬಿಡುಗಡೆ ಮಾಡಲಾಗಿದೆ. ಇದು ದುರುದ್ದೇಶಪೂರಿತ. ಇದು ನನ್ನ ವಿರುದ್ಧದ ಸಂಚು' ಎಂದು ಹೇಳಿದ್ದಾರೆ.

'ಫ್ಯಾಕ್ಟರಿ ಎಲ್ಲಿದೆ? ಕಾರು ಕೂಡ ಸಿದ್ಧವಾಗಿಲ್ಲ. ಮಾದರಿ ಕಾರುಗಳನ್ನು ತಯಾರಿಸಲು ಕಾರಿನ ಕೆಲವು ಭಾಗಗಳನ್ನು ಬೃಹತ್ ಮಳಿಗೆಗಳಿಂದ ಖರೀದಿಸಿ ತರಲಾಗಿದೆ' ಎಂದು ಮಮತಾ ಆರೋಪಿಸಿದ್ದಾರೆ.

ರೈತರ ಜಮೀನು ಮರಳಿಸುವ ವಿಚಾರದಲ್ಲಿ ಟಾಟಾ ನ್ಯಾನೋ ಘಟಕದ ವಿರುದ್ಧ ತನ್ನ ಪಕ್ಷವು ಪಶ್ಚಿಮ ಬಂಗಾಳದ ಸಿಂಗೂರಿನಲ್ಲಿ ಪ್ರತಿಭಟನೆ ಮಾಡಿದ್ದಕ್ಕಾಗಿ ಟಾಟಾ ಮೋಟಾರ್ಸ್ ಅಲ್ಲಿಂದ ಕಾಲು ಕಿತ್ತಿದ್ದಲ್ಲ, ಬದಲಾಗಿ ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದಾಗಿ ಎಂದು ಹೇಳಿಕೊಂಡ ಮಮತಾ, ಟಾಟಾ ಸಂಸ್ಥೆಯು ಕೋರಸ್ ಖರೀದಿ ಮಾಡಿದಾಗ ಅದರ ಶೇರು ಬೆಲೆಗಳೂ ಕುಸಿದವು. ಜಮ್ಷೆಡ್‌ಪುರದಲ್ಲಿದ್ದ ಅವರ ಘಟಕವೂ ಒಂದೊಂದು ವಾರ ಕಾರ್ಯ ಸ್ಥಗಿತಗೊಳಿಸಿದ್ದವು ಎಂದು ತಿಳಿಸಿದರು.

ಕಳೆದ ಅಕ್ಟೋಬರ್ ತಿಂಗಳಲ್ಲೇ ಟಾಟಾ ನ್ಯಾನೋ ಕಾರು ಪ.ಬಂಗಾಳದ ಸಿಂಗೂರು ಕಾರ್ಖಾನೆಯಿಂದ ಮಾರುಕಟ್ಟೆಗೆ ಬಿಡುಗಡೆಯಾಗಬೇಕಿತ್ತು. ಆದರೆ ಯೋಜನೆಗಾಗಿ ವಶಪಡಿಸಿಕೊಳ್ಳಲಾಗಿದ್ದ 997.11 ಎಕರೆಯಲ್ಲಿ 400 ಎಕರೆ ರೈತರ ಜಮೀನು ಮರಳಿಸಬೇಕೆಂದು ತೃಣಮೂಲ ಕಾಂಗ್ರೆಸ್ ನೇತೃತ್ವದಲ್ಲಿ ರೈತರು ತೀವ್ರ ಪ್ರತಿಭಟನೆ ನಡೆಸಿದ್ದರು. ಸರಕಾರವು ಬಲವಂತವಾಗಿ ರೈತರಿಂದ ಈ ಜಮೀನನ್ನು ಕಸಿದುಕೊಂಡಿತ್ತು ಎಂಬುದು ಅವರ ಪ್ರತಿಭಟನೆಯಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪ್ರಧಾನಿ ಕುರಿತ ಮೋದಿ ಹೇಳಿಕೆ 'ಕಳಪೆ': ಕಾಂಗ್ರೆಸ್
ವರುಣ್ ಗಾಂಧಿ ಬಂಧನಕ್ಕೆ ಕ್ಷಣಗಣನೆ ಆರಂಭ...
ಉತ್ತರ ಪ್ರದೇಶ: ಪಾಂಡೆ ವಿರುದ್ಧ ವಾರಂಟ್‌
ಕೇರಳ: ಸಿಪಿಎಂ ಕಾರ್ಯಕರ್ತನ ಹತ್ಯೆ
ಗುಜರಾತ್ ಸಚಿವೆ ಮಾಯಾ ಸಿಟ್ ಎದುರು ಶರಣು
ಗಾಂಧಿ ವಸ್ತುಗಳ ಹರಾಜಿಗೆ ಒಟಿಸ್ ಕ್ಷಮೆಯಾಚನೆ