ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಅಪ್ಪನ ಪಕ್ಷದ ವಿರುದ್ಧ ತಿರುಗಿ ಬಿದ್ದ ಮಹಾಜನ್ ಮಕ್ಕಳು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಪ್ಪನ ಪಕ್ಷದ ವಿರುದ್ಧ ತಿರುಗಿ ಬಿದ್ದ ಮಹಾಜನ್ ಮಕ್ಕಳು
ಬಿಜೆಪಿಯ ಧುರೀಣ ದಿ. ಪ್ರಮೋದ್ ಮಹಾಜನ್ ಅವರ ಮಕ್ಕಳಾದ ರಾಹುಲ್ ಮಹಾಜನ್ ಹಾಗೂ ಪೂನಂ ಈಗ ಬಿಜೆಪಿ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ತನ್ನ ಸಹೋದರಿ ಪೂನಂ ಮಹಾಜನ್‌ಗೆ ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಸೀಟು ನೀಡಿಲ್ಲದಿರುವುದೇ ಬಿಜೆಪಿಯ ವಿರುದ್ಧ ರಾಹುಲ್ ಮಹಾಜನ್ ಕಿಡಿಕಾರಲು ಕಾರಣ.

ಇತ್ತೀಚೆಗೆ ಮುಂಬೈ ಈಶಾನ್ಯ ಭಾಗದಿಂದ ತನಗೆ ಬಿಜೆಪಿ ಟಿಕೆಟ್ ನೀಡಬೇಕೆಂದು ಪೂನಂ ಮಹಾಜನ್ ಬಿಜೆಪಿ ಕದ ತಟ್ಟಿದ್ದರು. ಆದರೆ, ಬಿಜೆಪಿ ಟಿಕೆಟ್ ನೀಡಲು ಸಿದ್ಧವಿರಲಿಲ್ಲ. ಇದರಿಂದ ಕುಪಿತರಾಗಿರುವ ಪೂನಂ, ರಾಜ್ ಠಾಕ್ರೆ ಮನೆ ಬಾಗಿಲು ತಟ್ಟಿದ್ದಾರೆ.

ತನ್ನ ಸಹೋದರಿಗೆ ತನ್ನ ಅಪ್ಪನ ಪಕ್ಷದಿಂದಲೇ ಅನ್ಯಾಯವಾಗಿದೆಯೆಂದಿರುವ ರಾಹುಲ್ ಮಹಾಜನ್, ''ನನ್ನ ಅಪ್ಪ ಬಿಜೆಪಿಯ ಲಕ್ಷ್ಮಣನಂತಿದ್ದರು. ಆದರೆ, ಈ ಪಕ್ಷ ಅವರ ಮಕ್ಕಳನ್ನು ಮಾತ್ರ ದೇಶಭ್ರಷ್ಟರಂತೆ ಮಾಡಿದೆ. ನನಗೆ ನಿಜಕ್ಕೂ ಪಕ್ಷದ ಬಗ್ಗೆ ಬೇಸರವಾಗಿದೆ. ಆದರೆ ಬಿಜೆಪಿ ರಕ್ತ ಮಾತ್ರ ನನ್ನ ನರಗಳಲ್ಲಿ ಇನ್ನೂ ಹರಿಯುತ್ತಿದೆ. ಒಂದು ಸಣ್ಣ ಸಂಸ್ಥೆಯಲ್ಲಿ ಕೆಲಸ ಮಾಡುವ ಪಿಯೋನ್ ಸತ್ತರೂ ಆತನ ಮನೆಯವರ ಬಗ್ಗೆ ಸಂಸ್ಥೆ ಕಾಳಜಿ ತೆಗೆದುಕೊಳ್ಳುತ್ತದೆ. ಆದರೆ, ಇಂತಹ ದೊಡ್ಡ ಪಕ್ಷ ಬಿಜೆಪಿ ಮಾತ್ರ ನಮ್ಮನ್ನು ನಿರ್ಲಕ್ಷ್ಯ ಮಾಡುತ್ತಿದೆ'' ಎಂದು ಹತಾಶೆಯಿಂದ ನುಡಿದಿದ್ದಾರೆ.

ಸಹೋದರಿಗೆ ಟಿಕೆಟ್ ನಿರಾಕರಣೆಯ ನಂತರ ರಾಹುಲ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಮಾತು ಕೇಳಿಬಂದಿತ್ತು. ಆದರೆ, ಇದೇ ಸಂದರ್ಭ, ನಾನು ರಾಜಕೀಯಕ್ಕೆ ಬರುವುದಿಲ್ಲ ಎಂದ ರಾಹುಲ್, ನನಗೆ ನಿಜವಾಗಿಯೂ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ಮನಸ್ಸಾದರೆ, ನಾನೇ ಹೇಳುತ್ತೇನೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
'ಅಜೇಯ' ಮೈತ್ರಿ: ಪಿಎಂಕೆಗೆ 7 ಸೀಟು ಕೊಟ್ಟ ಜಯಾ
ಸಂಚಾರ ನಿಯಮ ಉಲ್ಲಂಘನೆ ದಂಡದಲ್ಲಿ ಭಾರೀ ಹೆಚ್ಚಳ
ನ್ಯಾನೋ ಬಿಡುಗಡೆ ನನ್ನ ವಿರುದ್ಧದ ಸಂಚು: ಮಮತಾ
ಪ್ರಧಾನಿ ಕುರಿತ ಮೋದಿ ಹೇಳಿಕೆ 'ಕಳಪೆ': ಕಾಂಗ್ರೆಸ್
ವರುಣ್ ಗಾಂಧಿಗೆ 2 ದಿನ ನ್ಯಾಯಾಂಗ ಬಂಧನ
ಉತ್ತರ ಪ್ರದೇಶ: ಪಾಂಡೆ ವಿರುದ್ಧ ವಾರಂಟ್‌