ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಒಬ್ಬ ಸ್ವ-ಸೃಷ್ಟಿಯ ನಾಯಕ. ಬಿಜೆಪಿಗೆ ಮೋದಿಯ ಅಗತ್ಯವಿದೆ ಎನ್ನುವ ಮೂಲಕ ಶಿವಸೇನಾ ಮುಖ್ಯಸ್ಥ ಬಾಳಾ ಠಾಕ್ರೆ ನರೇಂದ್ರ ಮೋದಿಯ ಹಿಡಿತದಿಂದ ಹೊರಬಂದಿದ್ದಾರೆ.
ಬಿಜೆಪಿಗೆ ಮೋದಿ ಅಲೆ ಅಗತ್ಯವಿದೆ. ಆದರೆ ಈ ನನ್ನ ಹೇಳಿಕೆ ಬಹುಷಃ ನಮ್ಮ ಮಿತ್ರಪಕ್ಷವಾದ ಬಿಜೆಪಿಗೆ ಇಷ್ಟವಾಗಲಿಕ್ಕಿಲ್ಲ. ಆದರೆ, ನನಗೆ ಸುಳ್ಳು ಹೇಳಲು ಆಗುವುದಿಲ್ಲ. ಸತ್ಯ ನನಗೆ ರಕ್ತಗತ ಎಂದು ತಮ್ಮ ಶಿವಸೇನೆಯ ಮುಖವಾಣಿಯಾಗಿರುವ ಪತ್ರಿಕೆ 'ಸಾಮನಾ'ದ ಸಂಪಾದಕೀಯದಲ್ಲಿ ಠಾಕ್ರೆ ಹೇಳಿಕೊಂಡಿದ್ದಾರೆ.
ಮೋದಿ ಹೇಗೆಂದರೆ, ಆತ ಒಬ್ಬ ಸ್ವಯಂಭು ಇದ್ದಂತೆ. ಅದರೆ, ಸ್ವಘೋಷಿತ ಮುಖಂಡ. ತನಗೆ ಬೇಕಾದ್ದನ್ನು ಪಡೆಯುವ ಶಕ್ತಿ ಮೋದಿಗೆ ರಕ್ತಗತ. ಬೇಕಾದರೆ, ಮೋದಿ ಅವರು ದೆಹಲಿಯನ್ನೇ ಬುಡಮೇಲು ಮಾಡಬಹುದು ಎಂದಿದ್ದಾರೆ. ಉತ್ತರ ಪ್ರದೇಶ ಹಾಗೂ ಬಿಹಾರದ ಯಾದವರು ಈಗ ದೆಹಲಿಯಲ್ಲಿ ಪ್ರಭುತ್ವ ಸಾಧಿಸುತ್ತಿದ್ದಾರೆ. ಅಲ್ಲದೆ, ಮಹಾರಾಷ್ಟ್ರ, ಕರ್ನಾಟಕ ಹಾಗೂ ಗುಜರಾತ್‌ನ ನಾಯಕರೂ ತಮ್ಮ ಸ್ಥಾನಕ್ಕಾಗಿ ಈಗ ಮುಂದೆ ಬರಲು ಆರಂಭಿಸಿದ್ದಾರೆ ಎಂದಿದ್ದಾರೆ.
ಬಿಜೆಪಿಯಲ್ಲಿ ಪ್ರಮೋದ್ ಮಹಾಜನ್ ತುಂಬಾ ತಪ್ಪುಗಳನ್ನು ಮಾಡಿರಬಹುದು. ಆದರೆ ಅವರಿಗಿದ್ದ ಅದ್ಭುತ ಸಂಘಟನಾ ಚತುರತೆ, ನಾಯಕತ್ವ ಗುಣಗಳು ಅವರ ತಪ್ಪನ್ನೂ ಮರೆಸುತ್ತವೆ ಎಂದಿದ್ದಾರೆ. ತಮ್ಮ ಹಳೆಯ ಗೆಳೆಯ ಹಾಗೂ ಎನ್‌ಸಿಪಿ ಮುಖಂಡ ಶರದ್ ಪವಾರ್ ಅವರನ್ನು ಕುಟುಕಿರುವ ಬಾಳಾ ಠಾಕ್ರೆ, ಶರದ್ ಪವಾರ್ ಕೂಡಾ ದೆಹಲಿಯಲ್ಲಿದ್ದಾರೆ. ಆದರೆ, ಅವರು ಏನು ಮಾಡುತ್ತಿದ್ದಾರೆ ಅಂತ ಅವರ ಹೆಂಡತಿಗೂ ಗೊತ್ತಿಲ್ಲ ಅಂದಿದ್ದಾರೆ.
ಮನಮೋಹನ್ ಸಿಂಗ್ ಅವರು ಪ್ರಧಾನಿ ಅಭ್ಯರ್ಥಿಯಾದರೆ ಮಾತ್ರ ಬೆಂಬಲವನ್ನು ನೀಡುತ್ತೇವೆ ಎಂದು ಎನ್‌ಸಿಪಿ ಹಾಗೂ ಕಾಂಗ್ರೆಸ್ ನಡುವೆ ಒಪ್ಪಂದ ನಡೆದಿದೆ ಎಂದು ಹೇಳಲಾಗುತ್ತಿದೆಯೆಂದೂ ಠಾಕ್ರೆ ತಮ್ಮ ಸಂಪಾದಕೀಯದಲ್ಲಿ ಬರೆದಿದ್ದಾರೆ. ಆದರೆ, ಮಹಾರಾಷ್ಟ್ರ ರಾಜಕಾರಣವೊಂದೇ ದೆಹಲಿ ದೊರೆಗಳ ಪ್ರಭುತ್ವಕ್ಕೆ ನಾಂದಿಯಾಗುವುದಿಲ್ಲ. ಉತ್ತರದ ಯಾದವರು, ಹಾಗೂ ದಕ್ಷಿಣದ ಕೋಮುವಾದಿತನ ಹಾಗೂ ಮುಸ್ಲಿಂ ಮತಾಂಧತೆ ಹೀಗಾಗಲು ಸುಲಭವಾಗಿ ಬಿಡುವುದಿಲ್ಲ ಎಂದೂ ಬರೆದಿದ್ದಾರೆ. |