ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಪ್ರಧಾನಿ ಇಲ್ಲದಿದ್ದರೆ ಸೋನಿಯಾ ಚರ್ಚೆಗೆ ಸಿದ್ಧವಾಗಲಿ: ಆಡ್ವಾಣಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರಧಾನಿ ಇಲ್ಲದಿದ್ದರೆ ಸೋನಿಯಾ ಚರ್ಚೆಗೆ ಸಿದ್ಧವಾಗಲಿ: ಆಡ್ವಾಣಿ
ಪ್ರಧಾನಿಯಾಗುವವರು ಲೋಕಸಭೆಯ ಮೂಲಕವೇ ಸಂಸತ್ತಿಗೆ ಆಯ್ಕೆಯಾಗಬೇಕು ಎಂದು ಹೇಳುವ ಮೂಲಕ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಚುಚ್ಚಿದ್ದ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಲಾಲ್ ಕೃಷ್ಣ ಆಡ್ವಾಣಿ, ತಮ್ಮೊಂದಿಗೆ ಟಿವಿಯಲ್ಲಿ ಮುಖಾಮುಖಿ ಚರ್ಚೆಗೆ ಹಾಲಿ ಪ್ರಧಾನಿ ಬಾರದಿದ್ದರೆ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನಾದರೂ ಕಳುಹಿಸಲಿ ಎಂದು ಮತ್ತೆ ಸವಾಲೆಸೆದಿದ್ದಾರೆ.

ತಮ್ಮೊಂದಿಗೆ ಟಿವಿ ಚಾನೆಲ್‌ನಲ್ಲಿ ಮುಖಾಮುಖಿಗೆ ಚರ್ಚೆ ನಡೆಸುವಂತೆ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ನೀಡಿರುವ ಆಹ್ವಾನವನ್ನು ಕಾಂಗ್ರೆಸ್ ನಿರಾಕರಿಸಿರುವುದರ ಹಿನ್ನೆಲೆಯಲ್ಲಿ ಶನಿವಾರ ಆಡ್ವಾಣಿ ಈ ಒತ್ತಾಯ ಮಾಡಿದ್ದು, ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಾದಂತೆ ಬಹಿರಂಗ ಚರ್ಚೆ ನಡೆಯುವುದು ಒಳ್ಳೆಯದು ಎಂದು ನಾನು ಹಲವಾರು ಬಾರಿ ಪ್ರಧಾನಿಗೆ ಹೇಳಿದ್ದೆ. ಈ ಚರ್ಚೆಯನ್ನು ಬಿಜೆಪಿ ಆಯೋಜಿಸುವ ಬದಲು, ಚುನಾವಣಾ ಆಯೋಗವೇ ಏರ್ಪಡಿಸಬಹುದು ಎಂದು ಹೇಳಿದ್ದಾರೆ.

ಆಡ್ವಾಣಿ ಆಹ್ವಾನಕ್ಕೆ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್, 'ಬಿಜೆಪಿಯು ಅಮೆರಿಕ ವ್ಯವಸ್ಥೆಯಿಂದ ಭಾರೀ ಪ್ರಭಾವಕ್ಕೊಳಗಾಗಿದೆ' ಎಂದಿತ್ತು.

ಇದಕ್ಕೆ ಮೊದಲು ಅಹಮದಾಬಾದಿನಲ್ಲಿ ಮಾತನಾಡುತ್ತಿದ್ದ ಆಡ್ವಾಣಿ, ಅವಕಾಶವಾದ, ಕುಟುಂಬ ರಾಜಕಾರಣ ಮತ್ತು ರಾಷ್ಟ್ರೀಯತೆಯಲ್ಲಿ ಯಾವುದು ಬೇಕೋ ಅದನ್ನು ಆರಿಸಬೇಕು ಎಂದು ಮತದಾರರಿಗೆ ಕರೆ ನೀಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಿಖ್ ಗಲಭೆ: ಟೈಟ್ಲರ್‌ಗೆ ಸಿಬಿಐ ಕ್ಲೀನ್ ಚಿಟ್ ?
ಮೋದಿ ಸ್ವಯಂ-ಘೋಷಿತ ನಾಯಕ: ಬಾಳಾ ಠಾಕ್ರೆ
ಸವಾಲಿಗೆ ಓಗೊಡದಿದ್ದರೆ ಸಿಂಗ್ ಪ್ರಧಾನಿ ಹೇಗಾಗುತ್ತಾರೆ?- ಬಿಜೆಪಿ
ಅಪ್ಪನ ಪಕ್ಷದ ವಿರುದ್ಧ ತಿರುಗಿ ಬಿದ್ದ ಮಹಾಜನ್ ಮಕ್ಕಳು
'ಅಜೇಯ' ಮೈತ್ರಿ: ಪಿಎಂಕೆಗೆ 7 ಸೀಟು ಕೊಟ್ಟ ಜಯಾ
ಸಂಚಾರ ನಿಯಮ ಉಲ್ಲಂಘನೆ ದಂಡದಲ್ಲಿ ಭಾರೀ ಹೆಚ್ಚಳ