ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ವರುಣ್ ಬಂಧನ: ಹಿಂಸಾಚಾರಕ್ಕೆ ತಿರುಗಿದ ಪಿಲಿಭಿಟ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವರುಣ್ ಬಂಧನ: ಹಿಂಸಾಚಾರಕ್ಕೆ ತಿರುಗಿದ ಪಿಲಿಭಿಟ್
ಪ್ರಚೋದನಕಾರಿ ಭಾಷಣಕ್ಕೆ ಸಂಬಂಧಿಸಿದಂತೆ ದೆಹಲಿ ಉಚ್ಛ ನ್ಯಾಯಾಲಯದಿಂದ ಜಾಮೀನು ಅರ್ಜಿಯನ್ನು ವಾಪಸು ಪಡೆದು, ಶನಿವಾರ ಮಧ್ನಾಹ್ನ ವರುಣ್ ಗಾಂಧಿ ಪಿಲಿಭಿಟ್ ನ್ಯಾಯಾಲಯಕ್ಕೆ ಶರಣಾಗಿ, ನ್ಯಾಯಾಂಗ ಬಂಧನಕ್ಕೆ ಒಳಗಾದ ನಂತರ ಉದ್ರಿಕ್ತ ಸ್ಥಿತಿ ಏರ್ಪಟ್ಟ ಪರಿಣಾಮ ಲಾಠಿ ಚಾರ್ಜ್, ಕಲ್ಲೂತೂರಾಟದಿಂದಾಗಿ ಐದು ಮಂದಿ ಪೊಲೀಸರು ಸೇರಿದಂತೆ 20ಜನರು ಗಾಯಗೊಂಡಿದ್ದಾರೆ.

ನ್ಯಾಯಾಂಗ ಬಂಧನಕ್ಕೆ ಒಳಗಾದ ವರುಣ್ ಗಾಂಧಿಯನ್ನು ಪೊಲೀಸರು ಕರೆದೊಯ್ಯುತ್ತಿದ್ದ ವೇಳೆ ಆರಂಭಗೊಂಡ ಗಲಭೆ ನಂತರ ಇಲ್ಲಿನ ಸ್ಥಳೀಯ ಜೈಲಿನ ಮುಂದೆ ಉದ್ರಿಕ್ತ ಜನರ ಗುಂಪು ಹಿಂಸಾಚಾರಕ್ಕೆ ಇಳಿದಿತ್ತು.

ಈ ಸಂದರ್ಭದಲ್ಲಿ ಬಿಜೆಪಿ ಹಾಗೂ ವರುಣ್ ಬೆಂಬಲಿಗರು ಪೊಲೀಸ್ ವಾಹನಕ್ಕೆ ಅಡ್ಡಿಪಡಿಸಿ ಜಖಂಗೊಳಿಸಿದ್ದರು. ಅಲ್ಲದೇ ಕಲ್ಲು, ಚಪ್ಪಲಿಗಳನ್ನು ತೂರಿದರು. ಈ ಸಂದರ್ಭದಲ್ಲಿ ಪೊಲೀಸರು ಲಾಠಿ ಚಾರ್ಜ್ ನಡೆಸಿದಾಗಲೂ ಪರಿಸ್ಥಿತಿ ಹತೋಟಿಗೆ ಬಾರದಿದ್ದಾಗ ಜನರ ಗುಂಪಿನತ್ತ ಪೊಲೀಸರು ಗುಂಡು ಹಾರಿಸಿದ್ದು, ಈ ವೇಳೆ ಮೂವರು ಗಾಯಗೊಂಡಿದ್ದಾರೆ.

ಮನೇಕಾ ಗಾಂಧಿ ಪುತ್ರ ವರುಣ್ ಗಾಂಧಿಯನ್ನು ಜೈಲಿನಲ್ಲಿ ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತ, ಪರಿಸ್ಥಿತಿಯನ್ನು ಹತೋಟಿಗೆ ತರುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ದೂರಿದರು. ಘಟನೆಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರು 25 ಜನರ ಮೇಲೆ ಲಾಠಿ ಪ್ರಹಾರ ನಡೆಸಿರುವುದಾಗಿ ದೂರಿದ ಅವರು ಘಟನೆಯಲ್ಲಿ 45ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಿದರು.

ಶನಿವಾರ ನ್ಯಾಯಾಲಯಕ್ಕೆ ಶರಣಾದ ವರುಣ್ ಗಾಂಧಿಗೆ ಸೋಮವಾರದವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದು, ಜಾಮೀನು ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪ್ರಧಾನಿ ಇಲ್ಲದಿದ್ದರೆ ಸೋನಿಯಾ ಚರ್ಚೆಗೆ ಸಿದ್ಧವಾಗಲಿ: ಆಡ್ವಾಣಿ
ಸಿಖ್ ಗಲಭೆ: ಟೈಟ್ಲರ್‌ಗೆ ಸಿಬಿಐ ಕ್ಲೀನ್ ಚಿಟ್ ?
ಮೋದಿ ಸ್ವಯಂ-ಘೋಷಿತ ನಾಯಕ: ಬಾಳಾ ಠಾಕ್ರೆ
ಸವಾಲಿಗೆ ಓಗೊಡದಿದ್ದರೆ ಸಿಂಗ್ ಪ್ರಧಾನಿ ಹೇಗಾಗುತ್ತಾರೆ?- ಬಿಜೆಪಿ
ಅಪ್ಪನ ಪಕ್ಷದ ವಿರುದ್ಧ ತಿರುಗಿ ಬಿದ್ದ ಮಹಾಜನ್ ಮಕ್ಕಳು
'ಅಜೇಯ' ಮೈತ್ರಿ: ಪಿಎಂಕೆಗೆ 7 ಸೀಟು ಕೊಟ್ಟ ಜಯಾ