ಮುಂಬಯಿ: ಮುಂಬರುವ ಲೋಕಸಭಾ ಚುನಾವಣೆಗಾಗಿ ಮಹಾರಾಷ್ಟ್ರದಿಂದ ಕನಿಷ್ಠ ಐದು ಅಲ್ಪ ಸಂಖ್ಯಾಕರನ್ನು ಅಭ್ಯರ್ಥಿಗಳನ್ನಾಗಿ ಕಣಕ್ಕಿಳಿಸುವಂತೆ ಮಹಾರಾಷ್ಟ್ರದ 30ಕ್ಕೂ ಹೆಚ್ಚು ಮುಸ್ಲಿಮ್ ಸಂಘಟನೆಗಳು ಕಾಂಗ್ರೆಸ್ ಮತ್ತು ಎನ್‌ಸಿಪಿಗಳನ್ನು ಒತ್ತಾಯಿಸಿವೆ. ಮಹಾರಾಷ್ಟ್ರದ ಜನಸಂಖ್ಯೆಯಲ್ಲಿ ಶೇಕಡಾ 15ರಷ್ಟು ಮುಸ್ಲಿಮರಿರುವದರಿಂದ ನಮ್ಮ ಬೇಡಿಕೆ ಸಮರ್ಥನೀಯ ಎಂದು ಸಂಘಟನೆಗಳು ಹೇಳಿಕೊಂಡಿವೆ. |