ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಸರಣ್‌ ಕ್ಷೇತ್ರದಿಂದ ಲಾಲು ನಾಮಪತ್ರ ಸಲ್ಲಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸರಣ್‌ ಕ್ಷೇತ್ರದಿಂದ ಲಾಲು ನಾಮಪತ್ರ ಸಲ್ಲಿಕೆ
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಕೇಂದ್ರ ರೈಲ್ವೆ ಖಾತೆ ಸಚಿವ ಲಾಲು ಪ್ರಸಾದ್ ಯಾದವ್ ನೂತನ ಕ್ಷೇತ್ರವಾದ ಸರಣ್‌ನಿಂದ ನಾಮಪತ್ರವನ್ನು ಸಲ್ಲಿಸಿದ್ದಾರೆ.

ಸಚಿವ ಲಾಲು ಪ್ರಸಾದ್ ಯಾದವ್, ಚಾಪ್ರಾ ಕ್ಷೇತ್ರದಿಂದ 1977,1989 ಮತ್ತು 2004ರಲ್ಲಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ.

ಮತ್ತೊಬ್ಬ ಕೇಂದ್ರ ಸಚಿವ ರಾಮವಿಲಾಸ್ ಪಾಸ್ವಾನ್ ಇವರ ಜೊತೆಯಲ್ಲಿ ಆಗಮಿಸಿದ ಲಾಲು ಪ್ರಸಾದ್ ಯಾದವ್ ಜಿಲ್ಲಾ ಚುನಾವಣಾಧಿಕಾರಿ ಮದನ್ ಪಾಂಡೆ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದರು.

2004ರ ಲೋಕಸಭಾ ಚುನಾವಣೆಯಲ್ಲಿ ಲಾಲು, ಎದುರಾಳಿ ಬಿಜೆಪಿಯ ಅಭ್ಯರ್ಥಿ ರಾಜೀವ್ ಪ್ರತಾಪ್ ರೂಢಿಯವರನ್ನು 60,423 ಮಂತಗಳ ಅಂತರದಿಂದ ಸೋಲಿಸಿ ಜಯಭೇರಿ ಬಾರಿಸಿದ್ದರು.

ಏಪ್ರಿಲ್ 16 ರಂದು ನಡೆಯಲಿರುವ ಮೊದಲ ಹಂತದ ಚುನಾವಣೆಯಲ್ಲಿ ಮತ್ತೊಮ್ಮೆ ಲಾಲು ಮತ್ತು ರೂಢಿ ಪರಸ್ಪರ ಎದುರಾಳಿಗಳಾಗಿ ಚುನಾವಣೆಯನ್ನು ಎದುರಿಸಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
'ಅರ್ಥ್ ಆವರ್'ನಲ್ಲಿ ಭಾರತ
ಮುಸ್ಲಿಮರನ್ನು ಕಣಕ್ಕಿಳಿಸಲು ಆಗ್ರಹ
ವರುಣ್ ಬಂಧನ: ಹಿಂಸಾಚಾರಕ್ಕೆ ತಿರುಗಿದ ಪಿಲಿಭಿಟ್
ಪ್ರಧಾನಿ ಇಲ್ಲದಿದ್ದರೆ ಸೋನಿಯಾ ಚರ್ಚೆಗೆ ಸಿದ್ಧವಾಗಲಿ: ಆಡ್ವಾಣಿ
ಸಿಖ್ ಗಲಭೆ: ಟೈಟ್ಲರ್‌ಗೆ ಸಿಬಿಐ ಕ್ಲೀನ್ ಚಿಟ್ ?
ಮೋದಿ ಸ್ವಯಂ-ಘೋಷಿತ ನಾಯಕ: ಬಾಳಾ ಠಾಕ್ರೆ