ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕಾಂಗ್ರೆಸ್ ಪರ ಸಲ್ಮಾನ್ ಖಾನ್ ಪ್ರಚಾರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಂಗ್ರೆಸ್ ಪರ ಸಲ್ಮಾನ್ ಖಾನ್ ಪ್ರಚಾರ
ಬಾಲಿವುಡ್ ಶಾರುಖ್ ಖಾನ್ ಮತ್ತು ನಟಿ ಪ್ರೀತಿ ಜಿಂಟಾ ಕಾಂಗ್ರೆಸ್ ಪರ ಪ್ರಚಾರ ನಡೆಸುವುದಾಗಿ ಹೇಳಿಕೆ ನೀಡಿದ ನಂತರ ಸಲ್ಮಾನ್ ಖಾನ್ ಕೂಡಾ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಪ್ರಚಾರ ನಡೆಸುವುದಾಗಿ ಹೇಳಿಕೊಂಡಿದ್ದಾರೆ.

ಉತ್ತರ ಪ್ರದೇಶದ ಉನ್ನಾವೊ ಲೋಕಸಭಾ ಕ್ಷೇತ್ರದಲ್ಲಿ ಸಲ್ಮಾನ್ ಖಾನ್ ಇಂದಿನಿಂದ ಪ್ರಚಾರ ಕಾರ್ಯವನ್ನು ಆರಂಭಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಬಾಲಿವುಡ್ ನಟ ಸಲ್ಮಾನ್ ಖಾನ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆಯುವ ಅನೇಕ ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಅನ್ನು ಟಂಡನ್ ತಿಳಿಸಿದ್ದಾರೆ.

ಈಗಾಗಲೇ ಕಾಂಗ್ರೆಸ್ ಪಕ್ಷ, ಬಾಲಿವುಡ್ ನಟ ಶಾರುಕ್ ಖಾನ್, ಪ್ರೀತಿ ಜಿಂಟಾ ,ಗೋವಿಂದಾ ಮತ್ತು ನಟಿ ನಗ್ಮಾ ಕಾಂಗ್ರೆಸ್ ಪರ ರೋಡ್ ಶೋ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ ಎಂದು ಘೋಷಿಸಿದೆ.

ನಟ ಗೋವಿಂದಾ ಮುಂಬೈ ಲೋಕಸಭಾ ಕ್ಷೇತ್ರದ ಹಾಲಿ ಸಂಸದರಾಗಿದ್ದು, ನಟಿ ನಗ್ಮಾ ಕಾಂಗ್ರೆಸ್ ಪರ ಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಉನ್ನಾವೊ ಲೋಕಸಭಾ ಕ್ಷೇತ್ರದ ಐದು ಗ್ರಾಮಗಳಲ್ಲಿ ನಡೆಯುವ ಹೋಲಿ ಮಿಲನ್ ಸಮಾರೋಹ್‌ನಲ್ಲಿ ಸಲ್ಮಾನ್ ಖಾನ್ ಸೇರಿದಂತೆ ಬಾಲಿವುಡ್‌ನ ಅನೇಕ ಕಲಾವಿದರು ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸರಣ್‌ ಕ್ಷೇತ್ರದಿಂದ ಲಾಲು ನಾಮಪತ್ರ ಸಲ್ಲಿಕೆ
'ಅರ್ಥ್ ಆವರ್'ನಲ್ಲಿ ಭಾರತ
ಮುಸ್ಲಿಮರನ್ನು ಕಣಕ್ಕಿಳಿಸಲು ಆಗ್ರಹ
ವರುಣ್ ಬಂಧನ: ಹಿಂಸಾಚಾರಕ್ಕೆ ತಿರುಗಿದ ಪಿಲಿಭಿಟ್
ಪ್ರಧಾನಿ ಇಲ್ಲದಿದ್ದರೆ ಸೋನಿಯಾ ಚರ್ಚೆಗೆ ಸಿದ್ಧವಾಗಲಿ: ಆಡ್ವಾಣಿ
ಸಿಖ್ ಗಲಭೆ: ಟೈಟ್ಲರ್‌ಗೆ ಸಿಬಿಐ ಕ್ಲೀನ್ ಚಿಟ್ ?