ಕೋಮವಾದಿ ಹೇಳಿಕೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ಶನಿವಾರದಂದು ಜೈಲಿಗೆ ಕಳುಹಿಸಲಾಗಿದ್ದ ಬಿಜೆಪಿ ಅಭ್ಯರ್ಥಿ ವರುಣ್ ಗಾಂಧಿ ಅವರಿಗೆ ವಿಐಪಿ ಆತಿಥ್ಯ ನೀಡಲಾಗುವುದಿಲ್ಲ; ಬದಲಿಗೆ ಮನೆಯ ಅಹಾರವನ್ನು ಸೇವಿಸಲು ಅನುಮತಿ ನೀಡಲಾಗುವುದು ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಭದ್ರತಾ ಕಾರಣಗಳಿಂದಾಗಿ ವರುಣ್ ಅವರನ್ನು ಪ್ರತ್ಯೆಕ ಕೋಣೆಯಲ್ಲಿ ಇರಿಸಲಾಗಿದ್ದು, ಮನೆಯ ಅಹಾರ ಸೇವಿಸಲು ಅನುಮತಿ ನೀಡಿರುವುದನ್ನು ಹೊರತುಪಡಿಸಿ ಮತ್ತಿತರ ಸೌಲಭ್ಯಗಳನ್ನು ಒದಗಿಸುತ್ತಿಲ್ಲ ಎಂದು ಕಾರಾಗೃಹದ ಅಧಿಕಾರಿ ಮುಕೇಶ್ ಅರೋರಾ ತಿಳಿಸಿದ್ದಾರೆ.
ಮಾರ್ಚ್ 30ರವರೆಗೆ ಜೈಲಿನಲ್ಲಿರುವ ವರುಣ್‌ಗೆ ಮನೆಯ ಅಹಾರವನ್ನು ಸೇವಿಸಲು ನ್ಯಾಯಾಲಯ ಅನುಮತಿ ನೀಡಿದೆ ಎಂದು ಕಾರಾಗೃಹದ ಅಧಿಕಾರಿಗಳು ತಿಳಿಸಿದ್ದಾರೆ.
ವ್ಯೆಯಕ್ತಿಕವಾಗಿ ವರುಣ್ ಗಾಂಧಿ ನಡತೆ ಉತ್ತಮವಾಗಿದ್ದು, ಆದರೆ ಆತನ ಬೆಂಬಲಿಗರು ಶನಿವಾರದಂದು ಕಾರಾಗ್ರಹದ ಮುಂದೆ ಭಾರಿ ಉದ್ರಿಕ್ತತೆಯನ್ನು ಸೃಷ್ಟಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
|