ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಆಡ್ವಾಣಿ ಕುರಿತ ಲಾಲೂಹೇಳಿಕೆ ಹಾಸ್ಯಾಸ್ಪದ: ಶರದ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆಡ್ವಾಣಿ ಕುರಿತ ಲಾಲೂಹೇಳಿಕೆ ಹಾಸ್ಯಾಸ್ಪದ: ಶರದ್
ಎಲ್.ಕೆ. ಆಡ್ವಾಣಿ ಪ್ರಧಾನಿಯಾದರೆ ತಾನು ರಾಜಕೀಯ ನಿವೃತ್ತಿ ಹೊಂದುವೆ ಎಂಬ ಲಾಲೂಪ್ರಸಾದ್ ಯಾದವ್ ಅವರ ಹೇಳಿಕೆಯನ್ನು ಜೆಡಿಯು ನಾಯಕ ಶರದ್ ಯಾದವ್ ಹಾಸ್ಯಾಸ್ಪದ ಎಂದು ಟೀಕಿಸಿದ್ದಾರೆ. ಅಲ್ಲದೆ ಲಾಲು ಅವರಿಗೆ 'ವಿಧಿಯು ಬೇರೆಯೆ ತೆರನಾಗಿ ಇಚ್ಚಿಸುವ' ವಿಚಾರಗಳ ಕುರಿತು ಶಪಥಗೈಯುವ ಅಭ್ಯಾಸವಿದೆ ಎಂದು ಲೇವಡಿ ಮಾಡಿದ್ದಾರೆ.

ಆಡ್ವಾಣಿ ಪ್ರಧಾನಿಯಾದಲ್ಲಿ ತಾನು ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆಂಬುದು ಹಾಸ್ಯಾಸ್ಪದವಲ್ಲದೆ ಮತ್ತೇನಲ್ಲ ಎಂದು ಅವರು ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನುಡಿದರು. "ಲಾಲೂ ಪ್ರಸಾದ್ ಈ ಹಿಂದೆ ನಿತೀಶ್ ಕುಮಾರ್ ಬಿಹಾರದ ಮುಖ್ಯಮಂತ್ರಿ ಆಗಲಾರರು ಎಂದು ಹೇಳಿದ್ದರು. ಆದರೆ ಅವರೀಗ ಬಿಹಾರದ ಮುಖ್ಯಮಂತ್ರಿಯಾಗಿದ್ದಾರೆ. ಲಾಲೂ ಒಂದು ಬಗೆದರೆ ವಿಧಿ ಇನ್ನೊಂದು ಬಗೆಯುತ್ತದೆ. ಇಂತಹ ವಿಚಾರಗಳ ಕುರಿತು ಶಪಥಗೈಯುವ ಹವ್ಯಾಸ ಲಾಲೂಗೆ ರೂಢಿಗತವಾಗಿದೆ" ಎಂದು ಹೇಳಿದ್ದಾರೆ.

ಚುನಾವಣಾ ಸ್ಫರ್ಧೆಗೆ ತಮ್ಮ ನಾಮಪತ್ರ ಸಲ್ಲಿಸಿದ ಬಳಿಕ ಚಾಪ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಲಾಲೂ ಪ್ರಸಾದ್ ಅವರು, "ಒಂದೊಮ್ಮೆ ಲಾಲ್‌ಕೃಷ್ಣ ಆಡ್ವಾಣಿಯವರು ಪ್ರಧಾನಿಯಾದರೆ ತಾನು ರಾಜಕೀಯದಿಂದ ನಿವೃತ್ತಿ ಹೊಂದಿ ರಾಜಕೀಯ ಸನ್ಯಾಸ ಸ್ವೀಕರಿಸುತ್ತೇನೆ ಮತ್ತು ಇನ್ನೆಂದಿಗೂ ಚುನಾವಣೆಯಲ್ಲಿ ಸ್ಫರ್ಧಿಸುವುದಿಲ್ಲ" ಎಂದು ಹೇಳಿದ್ದಾರೆನ್ನಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವರುಣ್ ವಿರುದ್ಧ ಎನ್ಎಸ್ಎ: ಯುವ ಮೋರ್ಚಾದಿಂದ ಕರಾಳ ದಿನ
ಲಕ್ನೋ: 6 ಸೇನಾ ವಿದ್ಯಾರ್ಥಿಗಳು ನೀರುಪಾಲು
ಒರಿಸ್ಸಾ: ನಕ್ಸರರಿಂದ ಬಿಜೆಪಿ ಮುಖಂಡನ ಹತ್ಯೆ
ವರುಣ್ ವಿರುದ್ಧ ಹತ್ಯಾಯತ್ನ ಪ್ರಕರಣ ದಾಖಲು
ವರುಣ್‌ಗೆ ಜೈಲಿನಲ್ಲಿ ವಿಐಪಿ ಆತಿಥ್ಯವಿಲ್ಲ
ಕಾಂಗ್ರೆಸ್ ಪರ ಸಲ್ಮಾನ್ ಖಾನ್ ಪ್ರಚಾರ