ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕಸಬ್‌ ವಕೀಲರಾಗಿ ಅಂಜಲಿ ಮಾಘಮಾರೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಸಬ್‌ ವಕೀಲರಾಗಿ ಅಂಜಲಿ ಮಾಘಮಾರೆ
ND
ಮುಂಬೈ ನರಮೇಧ ನಡೆಸಿದ ದಾಳಿಕೋರರಲ್ಲಿ ಜೀವಂತ ಸೆರೆ ಸಿಕ್ಕಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್‌ನನ್ನು ಪ್ರತಿನಿಧಿಸಲು ವಕೀಲೆ ಅಂಜಲಿ ವಾಘಮಾರೆ ಅವರನ್ನು ವಿಶೇಷ ನ್ಯಾಯಾಲಯ ನೇಮಿಸಿದೆ.

ಅರ್ಥರ್ ರಸ್ತೆ ಜೈಲಿನಲ್ಲಿ ನಿರ್ಮಿಸಲಾಗಿರುವ ಅತಿಭದ್ರತೆಯ ವಿಶೇಷ ನ್ಯಾಯಾಲಯದಲ್ಲಿ ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್ ವಿಚಾರಣೆಯು ಏಪ್ರಿಲ್ ಆರರಂದು ಆರಂಭವಾಗಲಿದೆ.

ಮಹಾರಾಷ್ಟ್ರ ಕಾನೂನು ಸೇವೆ ಪ್ರಾಧಿಕಾರದವರಾಗಿರುವ ಅಂಜಲಿಯವರಿಗೆ ಇನ್ನೋರ್ವ ಸಹಾಯಕರನ್ನು ನೇಮಿಸುವುದಾಗಿ ನ್ಯಾಯಾಧೀಶ ಎಂ.ಎಲ್. ತಹಿಲಿಯಾನಿ ಹೇಳಿದ್ದಾರೆ.

ಭದ್ರತಾ ಕಾರಣಗಳ ಹಿನ್ನೆಲೆಯಲ್ಲಿ ಕಸಬ್‌ನನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿಲ್ಲ. ಬದಲಿಗೆ ಆತನನ್ನು ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿಚಾರಣೆ ನಡೆಸಲಾಯಿತು.

ವಿಚಾರಣೆ ಆರಂಭದ ದಿನದಂದು ಆತನಿಗೆ, ಆತನ ವಕೀಲರು ಮಾಹಿತಿ ನೀಡಲಿದ್ದಾರೆ ಮತ್ತು ಪೊಲೀಸರು ಸಲ್ಲಿಸಿರುವ ಆರೋಪಪಟ್ಟಿಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಲಿದ್ದಾರೆ ಎಂದು ನ್ಯಾಯಾಲಯವು ಕಸಬ್‌ಗೆ ತಿಳಿಸಿದೆ. ಅಂಜಲಿ ಅವರು ಇಂಗ್ಲೀಷ್ ಮತ್ತು ಮರಾಠಿ ಭಾಷೆಯನ್ನು ಚೆನ್ನಾಗಿ ಬಲ್ಲವರಾಗಿದ್ದಾರೆ ಎಂದು ಆತನಿಗೆ ತಿಳಿಸಲಾಗಿದೆ.

ವೀಡಿಯೋ ಕಾನ್ಫರೆನ್ಸಿಂಗ್ ವೇಳೆ ಅಂಜಲಿ ಅವರೂ ಹಾಜರಿದ್ದು, ಕಸಬ್‌ಗೆ ಇವರನ್ನು ಪರಿಚಯಿಸಲಾಯಿತು. ಇವರನ್ನು ತನ್ನ ವಕೀಲರನ್ನಾಗಿ ನೇಮಿಸುವುದರಲ್ಲಿ ತನ್ನ ಆಕ್ಷೇಪವಿಲ್ಲ ಎಂದು ಕಸಬ್ ಈ ವೇಳೆ ಹೇಳಿದ್ದಾನೆ.

ಇನ್ನೇನಾದರೂ ಬೇಕೆ ಎಂದು ಕಸಬ್‌ನನ್ನು ಕೇಳಿದ ವೇಳೆಗೆ ಆತ, ತನಗೆ ಪತ್ರಿಕೆಗಳು ಬೇಕು ಎಂದು ಕೇಳಿದ್ದಾನೆ. ಮುಂದಿನ ವಿಚಾರಣೆ ಸಂದರ್ಭದಲ್ಲಿ ಈ ಬೇಡಿಕೆಯನ್ನು ಪರಿಶೀಲಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆಡ್ವಾಣಿ ಕುರಿತ ಲಾಲೂಹೇಳಿಕೆ ಹಾಸ್ಯಾಸ್ಪದ: ಶರದ್
ವರುಣ್ ವಿರುದ್ಧ ಎನ್ಎಸ್ಎ: ಯುವ ಮೋರ್ಚಾದಿಂದ ಕರಾಳ ದಿನ
ಲಕ್ನೋ: 6 ಸೇನಾ ವಿದ್ಯಾರ್ಥಿಗಳು ನೀರುಪಾಲು
ಒರಿಸ್ಸಾ: ನಕ್ಸರರಿಂದ ಬಿಜೆಪಿ ಮುಖಂಡನ ಹತ್ಯೆ
ವರುಣ್ ವಿರುದ್ಧ ಹತ್ಯಾಯತ್ನ ಪ್ರಕರಣ ದಾಖಲು
ವರುಣ್‌ಗೆ ಜೈಲಿನಲ್ಲಿ ವಿಐಪಿ ಆತಿಥ್ಯವಿಲ್ಲ