ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಲಾಹೋರ್ ದಾಳಿ ಮುಂಬೈದಾಳಿಗೆ ಸಮವಲ್ಲ: ಭಾರತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲಾಹೋರ್ ದಾಳಿ ಮುಂಬೈದಾಳಿಗೆ ಸಮವಲ್ಲ: ಭಾರತ
ಲಾಹೋರ್ ಪೊಲೀಸ್ ತರಬೇತಿ ಕೇಂದ್ರದ ಮೇಲೆ ಸೋಮವಾರ ಮುಂಜಾನೆ ಉಗ್ರರು ನಡೆಸಿರುವ ಮಾರಣಾಂತಿಕ ದಾಳಿಯನ್ನು ಭಾರತ ಬಲವಾಗಿ ಖಂಡಿಸಿದೆ. ಆದರೆ ಇದು ಮುಂಬೈ ದಾಳಿಗೆ ಸಮನಾಗಿದೆ ಎಂಬುದನ್ನು ತಳ್ಳಿಹಾಕಿದೆ. ಪಾಕಿಸ್ತಾನದ ಜನತೆಗೆ ತನ್ನ ಆಳವಾದ ಸಹಾನೂಭೂತಿಯನ್ನು ವ್ಯಕ್ತಪಡಿಸಿರುವ ಗೃಹಸಚಿವ ಚಿದಂಬರಂ ಅವರು "ಮುಂಬೈ ದಾಳಿಗೂ ಇದಕ್ಕೂ ಯಾವುದೇ ಸಮಾನತೆ ಇಲ್ಲ. ಒಂದೇ ಸಹಜತೆ ಎಂದರೆ, ಎರಡೂ ಉಗ್ರವಾದಿ ದಾಳಿಗಳು ಅಷ್ಟೆ" ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.

"ಮುಂಬೈ ದಾಳಿಯ ಮೂಲ ಪಾಕಿಸ್ತಾನ ಎಂಬುದು ತಿಳಿದಿದೆ. ಆದರೆ, ಲಾಹೋರ್ ದಾಳಿಯ ಮೂಲ ಯಾವುದು ಎಂಬುದು ತಿಳಿದಿಲ್ಲ. ಹಾಗಾಗಿ ಇವೆರಡನ್ನು ಸಮೀಕರಿಸುವುದು ಸಂಪೂರ್ಣವಾಗಿ ತಪ್ಪು" ಎಂದು ಅವರು ಅಭಿಪ್ರಾಯಿಸಿದ್ದಾರೆ.

" ನಮಗೆ ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲ. ಇದು ತೀರಾ ಕಳವಳಕಾರಿ ವಿಚಾರವಾಗಿದ್ದು, ಈ ದಾಳಿಯನ್ನು ನಾವು ಖಂಡಿಸುತ್ತೇವೆ" ಎಂದು ಅವರು ನುಡಿದರು.

ಇದು ವಿಶ್ವಕ್ಕೇ ಬೆದರಿಕೆ
ಇದೇವೇಳೆ ಘಟನೆಯ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಆನಂದ್ ಶರ್ಮಾ ಅವರು ಈ ಪಿಡುಗನ್ನು ತೊಡೆದು ಹಾಕಲು ಬಲವಾದ ಜಾಗತಿಕ ಬೆಂಬಲಕ್ಕೆ ಕರೆ ನೀಡಿದ್ದಾರೆ.

ಈ ದಾಳಿಯು ಈ ಪ್ರಾಂತ್ಯಕ್ಕೆ ಮಾತ್ರವಲ್ಲದೆ ಇಡಿಯ ವಿಶ್ವಕ್ಕೇ ಬೆದರಿಕೆ ಎಂದು ನುಡಿದ ಅವರು ಪ್ರಸಕ್ತ ಭಯೋತ್ಪಾದನಾ ದಾಳಿಯು ಭಯೋತ್ಪಾದನೆಯನ್ನು ತಡೆಗಟ್ಟುವ ತುರ್ತು ಅವಶ್ಯಕತೆಯನ್ನು ಎತ್ತಿಹಿಡಿದಿದೆ ಎಂದು ಹೇಳಿದ್ದಾರೆ.

ಮುಂಬೈ ದಾಳಿ ಮಾದರಿಯದ್ದು
ಈ ಮಧ್ಯೆ ಪಾಕಿಸ್ತಾನದ ಲಾಹೋರಿನಲ್ಲಿ 20ಕ್ಕೂ ಅಧಿಕ ಮಂದಿಯನ್ನು ಬಲಿತೆಗೆದುಕೊಂಡಿರುವ ಭಯೋತ್ಪಾದಕರ ದಾಳಿಯು ಮುಂಬೈಯಲ್ಲಿ ಉಗ್ರರು ನಡೆಸಿರುವ ದಾಳಿಯಂತಹುದೇ ಆಗಿದೆ ಎಂದು ಪಾಕಿಸ್ತಾನದ ಆಂತರಿಕ ಸಚಿವ ರೆಹ್ಮಾನ್ ಮಲಿಕ್ ಹೇಳಿದ್ದಾರೆ.

ಜಿಯೋ ಟಿವಿಗೆ ನೀಡಿರುವ ಸಂದರ್ಶನದಲ್ಲಿ ಅವರು ಲಾಹೋರ್ ದಾಳಿಯು ಮುಂಬೈಯಲ್ಲಿ ನವೆಂಬರ್ 26-29ರ ತನಕ ನಡೆದ ನರಮೇಧಕ್ಕೆ ಸಮಾನವಾದುದಾಗಿದೆ ಎಂದು ಹೇಳಿದ್ದಾರೆ. ಮುಂಬೈ ದಾಳಿಯಲ್ಲಿ 170ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿದ್ದರು.

ಲಾಹೋರ್ ಪೊಲೀಸ್ ಶಿಬಿರದ ಮೇಲೆ ದಾಳಿ: 20 ಸಾವು
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಸಬ್‌ ವಕೀಲರಾಗಿ ಅಂಜಲಿ ಮಾಘಮಾರೆ
ಆಡ್ವಾಣಿ ಕುರಿತ ಲಾಲೂಹೇಳಿಕೆ ಹಾಸ್ಯಾಸ್ಪದ: ಶರದ್
ವರುಣ್ ವಿರುದ್ಧ ಎನ್ಎಸ್ಎ: ಯುವ ಮೋರ್ಚಾದಿಂದ ಕರಾಳ ದಿನ
ಲಕ್ನೋ: 6 ಸೇನಾ ವಿದ್ಯಾರ್ಥಿಗಳು ನೀರುಪಾಲು
ಒರಿಸ್ಸಾ: ನಕ್ಸರರಿಂದ ಬಿಜೆಪಿ ಮುಖಂಡನ ಹತ್ಯೆ
ವರುಣ್ ವಿರುದ್ಧ ಹತ್ಯಾಯತ್ನ ಪ್ರಕರಣ ದಾಖಲು