ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಪವಾರ್ 'ಪವರ್' ಕನಸಿಗೆ ಠಾಕ್ರೆ ವ್ಯಂಗ್ಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪವಾರ್ 'ಪವರ್' ಕನಸಿಗೆ ಠಾಕ್ರೆ ವ್ಯಂಗ್ಯ
ಚುನಾವಣಾ ಸಮಾವೇಶ ಒಂದರಲ್ಲಿ ಮಾತನಾಡುತ್ತಿದ್ದ ಎನ್‌ಸಿಪಿ ನಾಯಕ ಶರದ್ ಪವಾರ್ ಅವರು ತನ್ನ ಪ್ರಧಾನಿಯಾಗುವ ಇಂಗಿತವನ್ನು ಮತ್ತೆ ವ್ಯಕ್ತಪಡಿಸಿರುವ ಕ್ರಮವನ್ನು ಲೇವಡಿ ಮಾಡಿರುವ ಶಿವಸೇನಾ ಮುಖ್ಯಸ್ಥ ಬಾಳಾಠಾಕ್ರೆ, ಇದು ಅವರ ನಿಜಬಣ್ಣವನ್ನು ಬಯಲು ಮಾಡಿದೆ ಎಂದು ಹೇಳಿದ್ದಾರೆ.

ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ಬರೆದ ಸಂಪಾದಕೀಯದಲ್ಲಿ ಪವಾರ್ ಅವರನ್ನು ಟೀಕಿಸಿರುವ ಠಾಕ್ರೆ ಮಹಾರಾಷ್ಟ್ರದಲ್ಲಿ ಬರಿಯ 22 ಸ್ಥಾನಗಳಲ್ಲಿ ಸ್ಫರ್ಧಿಸುತ್ತಿರುವ ಪವಾರ್ ಇನ್ನೂ ಪ್ರಧಾನಿಯಾಗುವ ಕನಸು ಕಾಣುತ್ತಿರುವುದು ವಿಲಕ್ಷಣವಾಗಿದೆ ಎಂದು ಹೇಳಿದ್ದಾರೆ.

ಚುನಾವಣೆಯ ಬಳಿಕ ಯುಪಿಎ ಅಂಗಪಕ್ಷಗಳು ಒಂದಾಗಿ ನಾಯಕನೊಬ್ಬನನ್ನು ಆರಿಸಿ ಬಳಿಕ ಸರ್ಕಾರ ರಚನೆಯ ಹಕ್ಕು ಮಂಡಿಸುತ್ತೇವೆ ಎಂಬುದಾಗಿ ಪವಾರ್ ಚುನಾವಣಾ ರ‌್ಯಾಲಿಯೊಂದರಲ್ಲಿ ಹೇಳಿರುವುದನ್ನು ಪ್ರಸ್ತಾಪಿಸಿರುವ ಠಾಕ್ರೆ, ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ನೊಂದಿಗೆ ಸೀಟು ಹಂಚಿಕೆ ಪ್ರಕ್ರಿಯೆ ಅಂತ್ಯಗೊಳಿಸಿರುವ ಬಳಿಕ ಇಂತಹ ಹೇಳಿಕೆಗಳನ್ನು ನೀಡುವ ಪವಾರ್ ತಮ್ಮ ನೈಜಬಣ್ಣವನ್ನು ಬಯಲು ಮಾಡಿದ್ದಾರೆ ಎಂದು 'ದೆಹಲಿ ದೂರವಿದೆ'(ದೆಹಲಿ ದೂರ್ ಹೈ) ಎಂಬ ಸಂಪಾದಕೀಯದಲ್ಲಿ ಹೇಳಿದ್ದಾರೆ.

ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಲು ಅಭ್ಯಂತರವಿಲ್ಲ ಎಂಬ ಹೇಳಿಕೆ ನೀಡಿರುವ ಪವಾರ್ ಇದೀಗ ತನ್ನ ಬಣ್ಣಬದಲಾಯಿಸುತ್ತಿದ್ದಾರೆ ಎಂದು ದೂರಿರುವ ಠಾಕ್ರೆ "ಪವಾರ್ ತನಗೆ ಎಲ್ಲಾ ರಾಜ್ಯದಲ್ಲೂ ಸ್ನೇಹಿತರು ಇದ್ದಾರೆ ಎಂದು ಹೇಳಿದ್ದಾರೆ. ಆದರೆ ಆ ಎಲ್ಲಾ ಸ್ನೇಹಿತರೂ ರಾಷ್ಟ್ರದ ಉನ್ನತ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ ಮತ್ತು ಅವರೆಲ್ಲ ಪವಾರ್ ಅವರನ್ನು ಬೆಂಬಲಿಸುತ್ತಾರೆ(ಯುಪಿಎ ಅಧಿಕಾರಕ್ಕೆ ಬಂದರೆ) ಎಂಬ ಸ್ಪಷ್ಟತೆಯನ್ನು ನಿರೀಕ್ಷಿಸಲಾಗುವುದಿಲ್ಲ" ಎಂದು ಅಭಿಪ್ರಾಯಿಸಿದ್ದಾರೆ.

"ತನಗೆ ಜಾತ್ಯತೀತೆಯ ಮೇಲೆ ನಂಬುಗೆ ಇರುವ ಕಾರಣ ಪವಾರ್ ಕಾಂಗ್ರೆಸ್ ಜತೆ ಕೈಜೋಡಿಸಿದ್ದಾರೆ. ಲಾಲೂ ಪ್ರಸಾದ್ ಯಾದವ್ ಹಾಗೂ ರಾಮ್ ವಿಲಾಸ್ ಪಾಸ್ವಾನ್ ಅವರಿಂದ ವಂಚನೆಗೊಳಗಾಗಿರುವ ಮುಳುಗುತ್ತಿರುವ ಹಡಗು ಕಾಂಗ್ರೆಸನ್ನು ಅಪಹರಿಸಲು ಅವರು ಯತ್ನಿಸುತ್ತಿದ್ದಾರೆ" ಎಂದು ಠಾಕ್ರೆ ದೂರಿದ್ದಾರೆ. ಅಲ್ಲದೆ, ಅಸ್ಥಿರ ಸ್ಥಿತಿ ನಿರ್ಮಾಣ ಮಾಡಿ ತನ್ನ ವಿರೋಧಿಗಳ ಕಣ್ಣಿಗೆ ಮಣ್ಣೆರಚುವ ತನ್ನ ಹಳೆ ಆಟವನ್ನು ಪವಾರ್ ಮತ್ತೊಮ್ಮೆ ಆಡುತ್ತಿದ್ದಾರೆ ಎಂದು ಠಾಕ್ರೆ ವ್ಯಂಗ್ಯವಾಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಿಎಸ್‌ಯು ಅಧಿಕಾರಿಗಳ ವೇತನ ಹೆಚ್ಚಳಕ್ಕೆ ಸರ್ಕಾರದ ಅಸ್ತು
ಲಾಹೋರ್ ದಾಳಿ ಮುಂಬೈದಾಳಿಗೆ ಸಮವಲ್ಲ: ಭಾರತ
ಕಸಬ್‌ ವಕೀಲರಾಗಿ ಅಂಜಲಿ ಮಾಘಮಾರೆ
ಆಡ್ವಾಣಿ ಕುರಿತ ಲಾಲೂಹೇಳಿಕೆ ಹಾಸ್ಯಾಸ್ಪದ: ಶರದ್
ವರುಣ್ ವಿರುದ್ಧ ಎನ್ಎಸ್ಎ: ಯುವ ಮೋರ್ಚಾದಿಂದ ಕರಾಳ ದಿನ
ಲಕ್ನೋ: 6 ಸೇನಾ ವಿದ್ಯಾರ್ಥಿಗಳು ನೀರುಪಾಲು