ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ವರುಣ್ ವಿರುದ್ಧ ಎನ್ಎಸ್ಎ 'ಭಾರತಕ್ಕೆ ಅಪಾಯಕಾರಿ': ಮನೇಕಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವರುಣ್ ವಿರುದ್ಧ ಎನ್ಎಸ್ಎ 'ಭಾರತಕ್ಕೆ ಅಪಾಯಕಾರಿ': ಮನೇಕಾ
ತನ್ನ ಪುತ್ರ ವರುಣ್ ಗಾಂಧಿ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿರುವ ಉತ್ತರ ಪ್ರದೇಶ ಸರ್ಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ಮನೇಕಾ ಗಾಂಧಿ, ಇದು ಈ ಗಂಭೀರ ಕಾಯ್ದೆಯ ದುರ್ಬಳಕೆಯಾಗಿದೆ ಮತ್ತು ಇಂತಹ ಕ್ರಮವು ರಾಷ್ಟ್ರಕ್ಕೆ ಅಪಾಯಕಾರಿಯಾಗಿದೆ ಎಂದು ಹೇಳಿದ್ದಾರೆ.

"ವರುಣ್‌ಗೆ ಏನು ಸಂಭವಿಸಿದೆಯೋ ಅದು ಆತನಿಗೆಸಗಿರುವ ಅನ್ಯಾಯ ಮತ್ತು ರಾಷ್ಟ್ರಕ್ಕೆಸಗಿರುವ ಅನ್ಯಾಯ, ಏಕೆಂದರೆ ಇಂತಹ ಗಂಭೀರ ಕಾಯ್ದೆಯ ದುರ್ಬಳಕೆಯು ರಾಷ್ಟ್ರಕ್ಕೆ ಅಪಾಯಕಾರಿ. ಇದೀಗ ಏನಾಗುತ್ತದೋ ಕಾದುನೋಡೋಣ" ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ಹೇಳಿದ್ದಾರೆ.

ಈ ಯುದ್ಧವನ್ನು ತಾನು ನ್ಯಾಯಾಲಯದಲ್ಲಿ ಹೋರಾಡುವುದಾಗಿ ಮತ್ತು ಜನತಾ ನ್ಯಾಯಾಲಯಕ್ಕೆ ಕೊಂಡೊಯ್ಯುವುದಾಗಿ ಮನೇಕಾ ನುಡಿದರು. "ಬಿಜೆಪಿ ಮತ್ತು ಬಿಎಸ್ಪಿ ನಡುವೆ ವೋಟಿಗಾಗಿ ಗೊಂದಲವೆದ್ದಿದೆ" ಎಂದು ಅವರು ಕೇಂದ್ರದ ಕಾಂಗ್ರೆಸ್ ಹಾಗೂ ರಾಜ್ಯದ ಬಿಎಸ್ಪಿ ಆಡಳಿತವನ್ನು ಬೆಟ್ಟು ಮಾಡಿದರು.

ವರುಣ್ ನ್ಯಾಯಾಲಯದ ಎದುರು ಶಾಂತಿಯುತವಾಗಿ ಶರಣಾಗಿದ್ದಾರೆ. ಆದರೆ ಆಡಳಿತವು ಆತನ ವಿರುದ್ಧ ಗಂಭೀರ ಕಾಯ್ದೆಯಡಿ ಪ್ರಕರಣ ದಾಖಲಿಸಿದೆ. ಇದಕ್ಕೆ ಒತ್ತಡದ ರಾಜಕಾರಣ ಕಾರಣ ಎಂದುಹೇಳಿದ್ದಾರೆ. "ಆತ ಶನಿವಾರ ಮಧ್ಯಾಹ್ನ 1.25ಕ್ಕೆ ಶರಣಾಗಿದ್ದಾನೆ. ಆದರೆ ಅಪರಾಹ್ನ ಮೂರು ಗಂಟೆಗೆ ಆತನ ವಿರುದ್ಧ ಪ್ರಕರಣ ದಾಖಲಾಗಿದೆ. ಸ್ಥಳದಲ್ಲಿ ಇಲ್ಲದ ವ್ಯಕ್ತಿಗಳ ವಿರುದ್ಧವೂ ಪ್ರಕರಣ ದಾಖಲಾಗಿದೆ. ಇದಕ್ಕೆ ಆಡಳಿತದ ಮೇಲೆ ರಾಜಕೀಯ ಒತ್ತಡ ಕಾರಣ" ಎಂದು ತಾನು ಭಾವಿಸುವುದಾಗಿ ಮನೇಕಾ ನುಡಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪವಾರ್ 'ಪವರ್' ಕನಸಿಗೆ ಠಾಕ್ರೆ ವ್ಯಂಗ್ಯ
ಪಿಎಸ್‌ಯು ಅಧಿಕಾರಿಗಳ ವೇತನ ಹೆಚ್ಚಳಕ್ಕೆ ಸರ್ಕಾರದ ಅಸ್ತು
ಲಾಹೋರ್ ದಾಳಿ ಮುಂಬೈದಾಳಿಗೆ ಸಮವಲ್ಲ: ಭಾರತ
ಕಸಬ್‌ ವಕೀಲರಾಗಿ ಅಂಜಲಿ ಮಾಘಮಾರೆ
ಆಡ್ವಾಣಿ ಕುರಿತ ಲಾಲೂಹೇಳಿಕೆ ಹಾಸ್ಯಾಸ್ಪದ: ಶರದ್
ವರುಣ್ ವಿರುದ್ಧ ಎನ್ಎಸ್ಎ: ಯುವ ಮೋರ್ಚಾದಿಂದ ಕರಾಳ ದಿನ