ದ್ವೇಷಭಾಷಣಕ್ಕಾಗಿ ಬಂಧನಕ್ಕೀಡಾಗಿರುವ ಬಿಜೆಪಿ ಅಭ್ಯರ್ಥಿ ವರುಣ್ ಗಾಂಧಿಯವರಿಗೆ ಜಾಮೀನು ಮಂಜೂರು ಮಾಡಲಾಗಿದೆ. ಅವರ ವಿರುದ್ಧದ ಎರಡು ಪ್ರಕರಣಗಳಲ್ಲಿ ಜಾಮೀನು ನೀಡಲಾಗಿದೆ.
ಆದರೆ ಅವರ ವಿರುದ್ಧ ದಾಖಲಿಸಲಾಗಿರವ ಎನ್ಎಸ್ಎ ಪ್ರಕರಣದ ವಿಚಾರಣೆಗೆ ಮುಂಚಿತವಾಗಿ ಅವರನ್ನು ಜೈಲಿನಿಂದ ಬಿಜುಗಡೆ ಮಾಡುವಂತಿಲ್ಲ. ಈ ಪ್ರಕರಣವು ಉತ್ತರ ಪ್ರದೇಶ ಹೈಕೋರ್ಟಿನಲ್ಲಿ ಇನ್ನಷ್ಟೆ ವಿಚಾರಣೆ ಬರಬೇಕಾಗಿದೆ.
ಕಾನೂನು ಮತ್ತು ಸುವ್ಯವಸ್ಥೆಯ ಹಿನ್ನೆಲೆಯಲ್ಲಿ ವರುಣ್ ಅವರ ಜಾಮೀನು ಅರ್ಜಿಯನ್ನು ಜಿಲ್ಲಾ ಜೈಲಿನೊಳಗೆ ವಿಚಾರಣೆ ನಡೆಸಲಾಯಿತು. ಜಿಲ್ಲಾ ನ್ಯಾಯಾಧೀಶರು, ವರುಣ್ ಜಾಮೀನು ಅರ್ಜಿಯನ್ನು ಜೈಲಿನಲ್ಲಿ ವಿಚಾರಣೆ ನಡೆಸುವಂತೆ ಚೀಫ್ ಜ್ಯುಡಿಶಿಯಲ್ ಮ್ಯಾಜೆಸ್ಟ್ರೇಟ್ ವಿಪಿನ್ ಕುಮಾರ್ ಅವರಿಗೆ ಆದೇಶ ನೀಡಿದ್ದರು.
ವರುಣ್ ಅವರಿಗೆ ತಲಾ 20 ಸಾವಿರ ರೂಪಾಯಿಯ ಎರಡು ಪ್ರತ್ಯೇಕ ಭದ್ರತೆಯಾಧಾರದಲ್ಲಿ ಜಾಮೀನು ನೀಡಲಾಗಿದೆ. |