ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ವರುಣ್ ವ್ಯಕ್ತಿತ್ವಕ್ಕೆ ಕಳಂಕ ಹಚ್ಚುವ ಪ್ರಯತ್ನ: ವಿಹಿಂಪ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವರುಣ್ ವ್ಯಕ್ತಿತ್ವಕ್ಕೆ ಕಳಂಕ ಹಚ್ಚುವ ಪ್ರಯತ್ನ: ವಿಹಿಂಪ
ಬಿಜೆಪಿಯ ಯುವನಾಯಕ ವರುಣ್ ಗಾಂಧಿಯವರನ್ನು ಬಂಧಿಸಿರುವ ಕ್ರಮವನ್ನು ಖಂಡಿಸಿರುವ ವಿಶ್ವಹಿಂದೂ ಪರಿಷತ್ ಇದು ಅವರ ರಾಜಕೀಯ ವ್ಯಕ್ತಿತ್ವಕ್ಕೆ ಧಕ್ಕೆಯುಂಟು ಮಾಡಲು ಮಾಡಿರುವ ಸಂಚು ಎಂದು ಹೇಳಿದೆ.

"ಈ ಬಂಧನವು ಅವರ ರಾಜಕೀಯ ಇಮೇಜಿಗೆ ಕಳಂಕ ಹಚ್ಚಲು ನಡೆಸಿರುವ ಸಂಚು" ಎಂಬುದಾಗಿ ವಿಹಿಂಪದ ಅಂತಾರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಎಸ್. ವೇದಾಂತಂ ಹೇಳಿದ್ದಾರೆ. ಅವರು ಇಲ್ಲಿ ಸುದ್ದಿಗಾರೊಂದಿಗೆ ಮಾತನಾಡುತ್ತಿದ್ದರು.

ಪಿಲಿಭಿತ್‌ನಲ್ಲಿ ವರುಣ್ ಮಾಡಿದ್ದಾರೆನ್ನಲಾಗಿರುವ ಭಾಷಣದ ವಿಡಿಯೋ ಕ್ಲಿಪ್ಪಿಂಗ್‌ಗಳು ತಿರುಚಲಾದ ತುಣುಕುಗಳು ಎಂದು ಹೇಳಿರುವ ಅವರು, ವರುಣ್ ಅಂತಹ ಉದ್ರೇಕಕಾರಿ ಭಾಷಣ ಮಾಡಿರಲಾರರು ಎಂದು ಹೇಳಿದ್ದಾರೆ.

"ವರುಣ್ ಗಾಂಧಿ ಓರ್ವ ಸುಶಿಕ್ಷಿತ ವ್ಯಕ್ತಿ. ಅವರು ಇಂತಹ ಭಾಷಣಗಳನ್ನು ಮಾಡಿರಲಿಕ್ಕಿಲ್ಲ. ಅವರು ಅಂತಹ ಸ್ವೇಚ್ಛೆಯ ಮಾತುಗಳನ್ನು ಆಡಿರಲಾರರು. ವರುಣ್ ಅವರ ಮಟ್ಟದಲ್ಲಿ ಇಂತಹ ಉದ್ರೇಕಕಾರಿ ಭಾಷಣವನ್ನು ಮಾಡಿರಲಾರರು ಎಂಬುದನ್ನು ನಾನು ದೃಢವಾಗಿ ನಂಬುತ್ತೇನೆ" ಎಂದು ವೇದಾಂತಂ ಹೇಳಿದ್ದಾರೆ.

ಮುಂದಿನ ಚುನಾವಣೆಯಲ್ಲಿ ತಮ್ಮ ಸಂಘಟನೆಯು ಯಾವುದೇ ಪಕ್ಷಕ್ಕೂ ಬೆಂಬಲ ವ್ಯಕ್ತಪಡಿಸುವುದಿಲ್ಲ. ಬದಲಿಗೆ ಹಿಂದೂಗಳ ಹಕ್ಕನ್ನು ರಕ್ಷಿಸುವ ರಾಜಕೀಯ ಪಕ್ಷವನ್ನು ಬೆಂಬಲಿಸುವಂತೆ ಜನತೆಯನ್ನು ವಿನಂತಿಸುವುದಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ನುಡಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವರುಣ್‌ಗೆ ಜಾಮೀನು, ಆದರೆ ಬಿಡುಗಡೆ ಇಲ್ಲ
ವರುಣ್ ವಿರುದ್ಧ ಎನ್ಎಸ್ಎ 'ಭಾರತಕ್ಕೆ ಅಪಾಯಕಾರಿ': ಮನೇಕಾ
ಪವಾರ್ 'ಪವರ್' ಕನಸಿಗೆ ಠಾಕ್ರೆ ವ್ಯಂಗ್ಯ
ಪಿಎಸ್‌ಯು ಅಧಿಕಾರಿಗಳ ವೇತನ ಹೆಚ್ಚಳಕ್ಕೆ ಸರ್ಕಾರದ ಅಸ್ತು
ಲಾಹೋರ್ ದಾಳಿ ಮುಂಬೈದಾಳಿಗೆ ಸಮವಲ್ಲ: ಭಾರತ
ಕಸಬ್‌ ವಕೀಲರಾಗಿ ಅಂಜಲಿ ಮಾಘಮಾರೆ