ನೈನಾದೇವಿ ದರ್ಶನ ಮಾಡಿ ಹಿಂತಿರುಗುತ್ತಿದ್ದ ಭಕ್ತರು ಪ್ರಯಾಣಿಸುತ್ತಿದ್ದ ಟ್ರಕ್ಕೊಂದು ಉರುಳಿಬಿದ್ದ ಪರಿಣಾಮ 20 ಮಂದಿ ಸಾವ್ನಪ್ಪಿದ್ದು, 65ಕ್ಕಿಂತಲೂ ಅಧಿಕ ಮಂದಿ ಗಾಯಗೊಂಡಿರುವ ದಾರುಣ ಘಟನೆ, ಪಂಜಾಬಿನ ಈ ಪಟ್ಟಣದಲ್ಲಿ ಮಂಗಳವಾರ ನಸುಕಿನಲ್ಲಿ ಸಂಭವಿಸಿದೆ.
ಗಾಯಗೊಂಡವರನ್ನು ತಕ್ಷಣವೇ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇವರಲ್ಲಿ ಆರುಮಂದಿಯ ಸ್ಥಿತಿ ಗಂಭೀರವಾಗಿದ್ದು ಇವರನ್ನು ಚಂಡೀಗಢದ ವೈದ್ಯಕೀಯ ಶಿಕ್ಷಣ ಹಾಗ ಸಂಶೋಧನಾ ಸಂಸ್ಥೆಗೆ ಕರೆದೊಯ್ಯಲಾಗಿದೆ ಎದು ಪೊಲೀಸಧಿಕಾರಿಗಳು ತಿಳಿಸಿದ್ದಾರೆ.
ಮಹಿಳೆಯರು ಮಕ್ಕಳು ಸೇರಿದಂತೆ ಟ್ರಕ್ಕಿನ ತುಂಬ ನೈನಾದೇವಿ ದರ್ಶನ ಪಡೆದು ಮರಳುತ್ತಿದ್ದ ಯಾತ್ರಿಕರು ತುಂಬಿದ್ದರು. ನೈನಾದೇವಿ ಮಂದಿರದಲ್ಲಿ ನಡೆದ ಉತ್ಸವಕ್ಕೆ ತೆರಳಿದ್ದ ಈ ಭಕ್ತಾದಿಗಳು ಪಂಜಾಬಿನ ಲೂಧಿಯಾನದ ಮಚ್ಚಿವಾರ ಪಟ್ಟಣದ ಸಮೀಪದ ಹಳ್ಳಿಯವರಾಗಿದ್ದಾರೆ.
|