ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ವಕೀಲೆ ಮನೆ ಮೇಲೆ ದಾಳಿ: 9 ಶಿವಸೈನಿಕರ ಬಂಧನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಕೀಲೆ ಮನೆ ಮೇಲೆ ದಾಳಿ: 9 ಶಿವಸೈನಿಕರ ಬಂಧನ
ವಕೀಲೆ ಅಂಜಲಿ ವಾಘಮಾರೆ ನಿವಾಸದ ಮೇಲೆ ದಾಳಿನಡೆಸಿರುವ ಹಿನ್ನೆಲೆಯಲ್ಲಿ, ಒರ್ವ ಕಾರ್ಪೋರೇಟರ್ ಸೇರಿದಂತೆ, ಶಿವಸೇನೆಯ ಒಂಬತ್ತು ಮಂದಿ ಕಾರ್ಯಕರ್ತರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

"ಅಕ್ರಮ ಜಮಾವಣೆ ಮತ್ತು ಅಕ್ರಮ ಪ್ರವೇಶ ಅರೋಪದ ಮೇಲೆ ಶಿವಸೇನೆಯ ಒಂಬತ್ತು ಕಾರ್ಯಕರ್ತರನ್ನು ಬಂಧಿಸಲಾಗಿದೆ. ಇವರು ವರ್ಲಿ ಪೊಲೀಸ್ ಠಾಣಾ ವ್ಯಾಪ್ತಿಯ ಅಂಜಲಿ ನಿವಾಸದ ಹೊರಗಡೆ ಪ್ರತಿಭಟನೆ ನಡೆಸುತ್ತಿದ್ದರು" ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಬಿ.ವಿ. ವೊರ್ಲಿಕರ್ ಹೇಳಿದ್ದಾರೆ. ಬಂಧಿತರನ್ನು ಮಂಗಳವಾರ ಅಪರಾಹ್ನ ನ್ಯಾಯಾಲಯದಲ್ಲಿ ಹಾಜರುಪಡಿಸುವುದಾಗಿ ಅವರು ನುಡಿದರು.

ವಕೀಲೆ ಅಂಜಲಿ ವಾಘಮಾರೆ ಅವರನ್ನು ಮುಂಬೈದಾಳಿಕೋರ ಅಜ್ಮಲ್ ಅಮೀರ್ ಕಸಬ್ ಪರ ವಕೀಲರನ್ನಾಗಿ, ವಿಶೇಷ ನ್ಯಾಯಾಲಯ ಸೋಮವಾರ ನೇಮಿಸಿತ್ತು. ಈ ಹಿನ್ನೆಲೆಯಲ್ಲಿ ಅಂಜಲಿ ನಿವಾಸದ ಎದುರು ಶಿವಸೇನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ತತ್ಪರಿಣಾಮ ಅಂಜಲಿ ಅವರು ತನ್ನ ಪ್ರಾತಿನಿಧ್ಯವನ್ನು ಹಿಂತೆಗೆದುಕೊಂಡಿದ್ದರು.

ಅಂಜಲಿ ಮನೆಮೇಲೆ ದಾಳಿ, ಕಸಬ್ ಪ್ರಕರಣದಿಂದ ಹಿಂತೆಗೆತ
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಗಡ್ಡಧಾರಣೆಗೆ ಮುಸ್ಲಿಂ ವಿದ್ಯಾರ್ಥಿಗೆ ಅವಕಾಶ ನಿರಾಕರಿಸಿದ ಸು.ಕೋ
ಪಂಜಾಬ್: ಅಪಘಾತದಲ್ಲಿ 20 ಯಾತ್ರಿಕರ ದುರ್ಮರಣ
ಅಂಜಲಿ ಮನೆಮೇಲೆ ದಾಳಿ, ಕಸಬ್ ಪ್ರಕರಣದಿಂದ ಹಿಂತೆಗೆತ
ಮಾಹಿತಿ ಹಕ್ಕು ನಿರಾಕರಿಸಿದರೆ ದಂಡ
ಕೇರಳದಲ್ಲಿ ಕಟ್ಟೆಚ್ಚರ
ವರುಣ್ ವ್ಯಕ್ತಿತ್ವಕ್ಕೆ ಕಳಂಕ ಹಚ್ಚುವ ಪ್ರಯತ್ನ: ವಿಹಿಂಪ