ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕಾಂಗ್ರೆಸ್ ಪಕ್ಷ ಬಡವರ ಪಕ್ಷ: ರಾಹುಲ್ ಗಾಂಧಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಂಗ್ರೆಸ್ ಪಕ್ಷ ಬಡವರ ಪಕ್ಷ: ರಾಹುಲ್ ಗಾಂಧಿ
ಯುಪಿಎ ಸರ್ಕಾರವು ಜನತೆಗೆ ನೀಡಿರುವ ಎಲ್ಲಾ ಭರವಸೆಗಳನ್ನು ಈಡೇರಿಸಿದೆ ಎಂಬುದಾಗಿ ಅಖಿಲ ಭಾರತೀಯ ಕಾಂಗ್ರೆಸ್‌ ಸಮಿತಿಯ ಪ್ರಧಾನ ಕಾರ್ಯದರ್ಶಿ, ಯುವನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಅವರು ಮಹಾರಾಷ್ಟ್ರದ ವಾರ್ಧ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರವ ಆರಂಭಿಸಿ ಮಾತನಾಡುತ್ತಿದ್ದರು. ಅವರು ಈ ಸಂದರ್ಭದಲ್ಲಿ ಐದು ವರ್ಷದ ಯುಪಿಎ ಆಡಳಿತದ ವರದಿಯನ್ನು ಮತದಾರರ ಮುಂದಿಟ್ಟರು.

ಾ| ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರವನ್ನು ಹೊಗಳಿದ ರಾಹುಲ್ "ಯುಪಿಎ ಜನತೆಗೆ ನೀಡಿರುವ ಹೆಚ್ಚಿನ ಭರವಸೆಯನ್ನು ಈಡೇರಿಸಿದೆ. ರಾಷ್ಟ್ರವು ಕಾಂಗ್ರೆಸ್ ಆಡಳಿತದಲ್ಲಿ ಅಗಾಧವಾದ ಪ್ರಗತಿಯನ್ನು ಸಾಧಿಸಿದೆ" ಎಂದು ನೆರೆದಿದ್ದ ಜನಸ್ತೋಮವನ್ನುದ್ದೇಶಿಸಿ ನುಡಿದರು.

"ಯುಪಿಎ ಸರ್ಕಾರವು ಬಡವರು ಮತ್ತು ಸಮಾಜದ ಕೆಳವರ್ಗಗಳವರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಸರ್ಕಾರವು ಅತ್ಯಂತ ಪ್ರಮುಖವಾದ ಅಣುಒಪ್ಪಂದಕ್ಕೆ ಸಹಿಹಾಕಿದೆ. ಇಂದು ಸುಭದ್ರ ಭವಿಷ್ಯದ ಅನುಕೂಲಕ್ಕಾಗಿ ಸರ್ಕಾರ ಕೈಗೊಂಡಿರುವ ಕ್ರಮವಾಗಿದೆ" ಎಂದು ನುಡಿದ ಅವರು ಪ್ರಧಾನಿ ಸಿಂಗ್ ಅವರಿಗೆ ತನ್ನ ಬೆಂಬಲ ವ್ಯಕ್ತಪಡಿಸಿದರು.

ಬಡವರ ಉದ್ದಾರಕ್ಕೆ ಕಾಂಗ್ರೆಸ್ ನೇತೃತ್ವದ ಯುಪಿಎಯೇ ಸೂಕ್ತ. ಯುಪಿಎಯು ಬಡವರ ಪರ ಕಾಳಜಿಹೊಂದಿದೆ. ಇದು ಇತರರಂತೆ (ಬಿಜೆಪಿ) ಅಲ್ಲದೆ ಬಡವರನ್ನು ತಲುಪುತ್ತದೆ ಎಂದು ನುಡಿದ ರಾಹುಲ್, ಬಿಜೆಪಿಯು ಶ್ರೀಮಂತರ ಭಾಷೆಯಲ್ಲಿ ಮಾತನಾಡುತ್ತದೆ ಎಂದು ಟೀಕಿಸಿದರು.

ಅಲ್ಲದೆ ಎನ್‌ಡಿಎ ನೇತೃತ್ವ ವಹಿಸಿರುವ ಬಿಜೆಪಿಯು ತನ್ನ ಕೋಮುವಾದ ನೀತಿಯಿಂದ ರಾಷ್ಟ್ರವನ್ನು ಒಡೆಯುತ್ತದೆ ಎಂದು ದೂರಿದರು. ಎನ್‌ಡಿಎಯು ಬಡವರಿಗಾಗಿ ಯಾವುದೇ ಯೋಜನೆಗಳನ್ನು ಜಾರಿಗೆ ತಂದಿಲ್ಲ. ಆದರೆ, ಯಪಿಎ ಸರ್ಕಾರ ಕನಿಷ್ಠ 100 ದಿನಗಳಿಗಾದರೂ ಉದ್ಯೋಗ ಖಾತರಿ ಒದಗಿಸಿದೆ ಎಂದು ಎರಡು ಪಕ್ಷಗಳ ತುಲನೆ ಮಾಡಿದರು.

ರಾಷ್ಟ್ರವನ್ನು ಜನಸಾಮಾನ್ಯರ ದೃಷ್ಟಿಯಿಂದ ನೋಡುವ ಏಕೈಕ ಪಕ್ಷ ಕಾಂಗ್ರೆಸ್ ಆಗಿರುವ ಕಾರಣ ದಯವಿಟ್ಟು ಕಾಂಗ್ರೆಸ್ ಪರ ಮತಚಲಾಯಿಸಿ ಎಂಬ ಭಾವನಾತ್ಮಕ ಮನವಿಯೊಂದಿಗೆ ಕಾಂಗ್ರೆಸ್ ಯುವ ನಾಯಕ ತನ್ನ ಭಾಷಣವನ್ನು ಮುಗಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವ್ಯಕ್ತಫಲಿತಾಂಶ ತೋರುವ ತನಕ ಪಾಕ್ ಜತೆ ಮಾತಿಲ್ಲ: ಸಿಂಗ್
ಸಂಜಯ್ ಚುನಾವಣಾ ಸ್ಫರ್ಧಾಕಾಂಕ್ಷೆ ಠುಸ್!
ವರುಣ್ ವಿರುದ್ಧ ಎನ್ಎಸ್ಎ ಸರಿಯಲ್ಲ: ಮುಲಾಯಂ
ವಕೀಲೆ ಮನೆ ಮೇಲೆ ದಾಳಿ: 9 ಶಿವಸೈನಿಕರ ಬಂಧನ
ಗಡ್ಡಧಾರಣೆಗೆ ಮುಸ್ಲಿಂ ವಿದ್ಯಾರ್ಥಿಗೆ ಅವಕಾಶ ನಿರಾಕರಿಸಿದ ಸು.ಕೋ
ಪಂಜಾಬ್: ಅಪಘಾತದಲ್ಲಿ 20 ಯಾತ್ರಿಕರ ದುರ್ಮರಣ