ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕಸಬ್‌ನನ್ನು ಪ್ರತಿನಿಧಿಸುವೆ: ವಕೀಲೆ ಅಂಜಲಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಸಬ್‌ನನ್ನು ಪ್ರತಿನಿಧಿಸುವೆ: ವಕೀಲೆ ಅಂಜಲಿ
PTI
ಮುಂಬೈದಾಳಿಯ ವೇಳೆ ಸೆರೆಸಿಕ್ಕಿರುವ ಏಕೈಕ ಉಗ್ರ ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್ ಪರ ತಾನು ವಾದಿಸುವುದಾಗಿ ಮುಂಬೈ ವಕೀಲೆ ಅಂಜಲಿ ವಾಘಮೊರೆ ಹೇಳಿದ್ದಾರೆ. ಅವರು ಕಸಬ್ ಪ್ರಾತಿನಿಧ್ಯದ ಕುರಿತು ಪರಿಗಣಿಸಲು ಮಂಗಳವಾರ 24 ಗಂಟೆಯ ಕಾಲವಕಾಶ ಕೋರಿದ್ದರು.

ಅಂಜಲಿ ಅವರನ್ನು ಕಸಬ್ ಪರ ಪ್ರಾತಿನಿಧ್ಯಕ್ಕಾಗಿ ವಿಶೇಷ ನ್ಯಾಯಾಲಯ ನೇಮಿಸಿರುವ ಹಿನ್ನೆಲೆಯಲ್ಲಿ, ಶಿವಸೇನಾ ಕಾರ್ಯಕರ್ತರು ಅವರ ವರ್ಲಿ ನಿವಾಸದ ಮೇಲೆ ದಾಳಿ ನಡೆಸಿದ್ದರು. ಅಲ್ಲದೆ ಕಸಬ್ ಪರ ವಾದಿಸಲು ಒಪ್ಪಿಸುವುದಕ್ಕೆ ಕ್ಷಮೆಯಾಚಿಸುವ ಪತ್ರವನ್ನು ಶಿವಸೇನೆ ಕಾರ್ಯಕರ್ತರಿಗೆ ನೀಡಿದ್ದರು ಮಾತ್ರವಲ್ಲದೆ, ತಾನು ಈ ಪ್ರಕರಣದಿಂದ ಹಿಂತೆಗೆಯುವುದಾಗಿ ಹೇಳಿದ್ದರು.

ಈ ಘಟನೆಯ ಬಳಿಕ ಶಿವಸೇನೆಯ ಒಂಬತ್ತು ಮಂದಿ ಕಾರ್ಯಕರ್ತರನ್ನು ಬಂಧಿಸಲಾಗಿತ್ತು, ಅಲ್ಲದೆ, ಅಂಜಲಿ ಅವರಿಗೆ ಸಂಪೂರ್ಣ ಭದ್ರತೆ ನೀಡುವುದಾಗಿ ಮಹಾರಾಷ್ಟ್ರ ಸರ್ಕಾರ ಹೇಳಿದ್ದು, ಅವರಿಗೆ ಝಡ್ ಪ್ಲಸ್ ಭದ್ರತೆ ಒದಗಿಸಲಾಗಿದೆ.

ಇದಾದ ಬಳಿಕ, ಅಂಜಲಿ ಅವರು ತಾನು ಕಸಬ್‌ನನ್ನು ಪ್ರತಿನಿಧಿಸುವುದಾಗಿ ಬುಧವಾರ ಘೋಷಿಸಿದ್ದು, ತಾನಿದನ್ನು ರಾಷ್ಟ್ರದ ಹಿತಾಸಕ್ತಿಯ ದೃಷ್ಟಿಯಿಂದಲೇ ಮಾಡುವುದಾಗಿ ಹೇಳಿದ್ದಾರೆ. ಕಸಬ್ ಪರ ವಾದಿಸಲು ವಕೀಲರು ಇಲ್ಲದಿದ್ದರೆ ಪ್ರಕರಣದ ವಿಚಾರಣೆಗೆ ಅಡ್ಡಿಯುಂಟಾಗುವ ಹಿನ್ನೆಲೆಯಲ್ಲಿ ಅವರು ಈ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದ್ದಾರೆ. ಇನ್ನೋರ್ವ ವಕೀಲ ಕೆ.ಪಿ. ಪವಾರ್ ಅವರನ್ನು ಅಂಜಲಿಯವರಿಗೆ ಸಹಾಯಕ್ಕಾಗಿ ನೇಮಿಸಲಾಗಿದೆ.

ಎಪ್ರಿಲ್ ಆರರಂದು ಕಸಬ್ ವಿಚಾರಣೆ ಆರಂಭವಾಗಲಿದ್ದು, ವಾಘಮಾರೆ ಅವರು ಪವಾರ್ ಅವರೊಂದಿಗೆ ಕಸಬ್ ಪರ ಪ್ರತಿನಿಧಿಸಲು ನ್ಯಾಯಾಲಯದಲ್ಲಿ ಹಾಜರಾಗಲಿದ್ದಾರೆ ಎಂದು ತಿಳಿಸಿರುವ ನ್ಯಾಯಾಧೀಶ ತಹಿಲಿಯ, ಉಭಯ ವಕೀಲರಿಗೆ ವ್ಯಾಪಕ ಭದ್ರತೆಯನ್ನು ಒದಗಿಸುವುದಾಗಿ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಇಂದಿರಾ ಮೊಮ್ಮಗ ರಾಷ್ಟ್ರಕ್ಕೆ ಹೇಗೆ ಅಪಾಯಕಾರಿ?
ಓಟಿಗಾಗಿ ನೋಟಿನಲ್ಲೀಗ ಬಿಜೆಪಿಯ ಜಸ್ವಂತ್
ವಿಶ್ವಭಯೋತ್ಪಾದನೆಯ ಕೇಂದ್ರ ಪಾಕ್: ಪ್ರಧಾನಿ ಸಿಂಗ್
ವರುಣ್ ಕೊಲೆ ಸಂಚು: ಬಂಧಿತ ಮಲಬಾರಿಯಿಂದ ಬಯಲು
ಕಸಬ್‌ಗೆ ಅಂಜಲಿಯೇ ವಕೀಲರು: ಮಹಾ ಸರ್ಕಾರ
ಕೇರಳದಲ್ಲಿ ರಾಜನಾಥ್ ಸಿಂಗ್