ಒರಿಸ್ಸಾದ ಕೇಂದ್ರಪಾರ ಜಿಲ್ಲೆ ಪ್ರದೇಶದಲ್ಲಿ ಬೀಸಿದ ಬಿರುಗಾಳಿಗೆ 12 ಮಂದಿ ಬಲಿಯಾಗಿದ್ದು, ಸುಮಾರು 300ರಷ್ಟು ಮನೆಗಳು ನಾಮಾವಶೇಷಗೊಂಡಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ. ಭದ್ರತಾ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದು, ಸಂತ್ರಸ್ತ ಜನರಿಗಾಗಿ ಶಿಬಿರಗಳನ್ನು ತೆರೆಯಲಾಗಿದೆ. ಮೃತರ ಸಂಖ್ಯೆ ಇನ್ನೂ ಏರಲು ಸಾಧ್ಯತೆಯಿರುವುದಾಗಿ ತಿಳಿದು ಬಂದಿದೆ. |