ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕಾಂಗ್ರೆಸ್‌ನಿಂದಾಗೆ ನನ್ನಪ್ಪ ಸತ್ತೋದ್ರು: ಸಂಜಯ್ ದತ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಂಗ್ರೆಸ್‌ನಿಂದಾಗೆ ನನ್ನಪ್ಪ ಸತ್ತೋದ್ರು: ಸಂಜಯ್ ದತ್
PTI
ಕಾಂಗ್ರೆಸ್‌ನಿಂದಾಗಿ ತನ್ನಪ್ಪ ಸುನಿಲ್ ದತ್ ಸಾವನ್ನಪ್ಪಿದರು ಎಂದು ಬಾಲಿವುಡ್ ತಾರೆ, ಸಮಾಜವಾದಿ ಪಕ್ಷದ ನಾಯಕ, ಮುಂಬೈಸ್ಫೋಟ ಪ್ರಕರಣದ ಅಪರಾಧಿ ಸಂಜಯ್‌ ದತ್ ಆರೋಪಿಸಿದ್ದಾರೆ. "ತನ್ನ ಇಚ್ಚೆಗೆ ವಿರುದ್ಧವಾಗಿ ಶಿವಸೇನಾ ನಾಯಕ ಸಂಜಯ್ ನಿರುಪಮ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿರುವುದರಿಂದ ನನ್ನಪ್ಪ ನೊಂದುಕೊಂಡಿದ್ದರು" ಎಂದು ದತ್ ಹೇಳಿದ್ದಾರೆ.

"ನನ್ನಪ್ಪ ಕಾಂಗ್ರೆಸ್‌ನಿಂದಾಗೆ ಸತ್ತೋದ್ರು.... ಅವರು(ಕಾಂಗ್ರೆಸ್) ಹಿರಿಯ ನಾಯಕರಾಗಿದ್ದ ನನ್ನಪ್ಪನ ಮಾತು ಕೇಳದೆ, ನಿರುಪಮ್ ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡರು. ನಿರುಪಮ್ ಶಿವಸೇನೆಯಲ್ಲಿದ್ದಾಗ, ಅಪ್ಪನ ಮೇಲೆ ಅಪವಾದ ಹೊರಿಸಿದ್ದರು, ದೌರ್ಜನ್ಯ ಎಸಗಿದ್ದರು. ಇದರಿಂದಾಗೇ ನಮ್ಮಪ್ಪ ಸತ್ತೋದ್ರು" ಎಂದು ಖಾಸಗಿ ವಾಹಿನಿಯೊಂದರೊಂದಿಗೆ ಮಾತನಾಡುತ್ತಿದ್ದ ದತ್ ಹೇಳಿದ್ದಾರೆ.

"ತನ್ನಪ್ಪ ಕೊನೆಯುಸಿರೆಳೆಯುವ ನಾಲ್ಕುದಿನಗಳ ಮುಂಚಿತವಾಗಿ ಈ ವಿಚಾರವನ್ನು ತನಗೆ ತಿಳಿಸಿದ್ದರು. ಇದೊಂದೆ ನೋವು ಅವರಿಗಿದ್ದುದು. ಕಾಂಗ್ರೆಸ್ ತನ್ನನ್ನು ಕೊಂದಿತೆಂದು ತನಗೆ ತಿಳಿಸಿದರು" ಎಂಬುದಾಗಿ ದತ್ ನುಡಿದರು.

ತನಗೆ ಕಾಂಗ್ರೆಸ್ ನೀತಿಗಳ ಮೇಲೆ ನಂಬುಗೆ ಇಲ್ಲ ಎಂದೂ ರಾಜಕಾರಣಿಯಾಗಿರುವ ನಟ ಸಂಜಯ್ ದತ್ ಹೇಳಿದ್ದಾರೆ.

ತನ್ನ ತಂದೆಯನ್ನು ಕೊಂದ ಪಕ್ಷದೊಂದಿಗೆ ಇರುವುದು ತನ್ನ ಸಹೋದರಿ ಪ್ರಿಯಾಳಿಗೆ ಬಿಟ್ಟ ವಿಚಾರ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ನುಡಿದರು. ಅಲ್ಲದೆ, "ತನ್ನನ್ನು ಕಾಂಗ್ರೆಸ್ ಸುದೀರ್ಘ ಅವಧಿಗಳ ಕಾಲ ಬಂಧನದಲ್ಲಿರಿಸಿತ್ತು. ನನ್ನ ಬಂಧನವಾದಾಗ ಕಾಂಗ್ರೆಸ್ ಅಧಿಕಾರದಲ್ಲಿತ್ತು. ನನಗೆ ಜಾಮೀನು ಲಭಿಸಿದಾಗ ಕಾಂಗ್ರೆಸ್ ಅಧಿಕಾರದಲ್ಲಿರಲಿಲ್ಲ. ನಾನು ಮತ್ತೆ ಬಂಧನಕ್ಕೀಡಾದಾಗ ಕಾಂಗ್ರೆಸ್ ಅಧಿಕಾರದಲ್ಲಿತ್ತು" ಎಂದು ನುಡಿದ ದತ್ ಕಾಂಗ್ರೆಸ್ ಪಕ್ಷದ ಮೇಲೆ ಆರೋಪಗಳ ಸುರಿಮಳೆಗೈದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರಾಷ್ಟ್ರದೊಳಗೆ ಮಹಿಳಾ ಫಿದಾಯಿನ್, ಪೈಲಟ್‌ಗಳು?
ತೃತೀಯ ರಂಗ ರ‌್ಯಾಲಿಯಲ್ಲಿ ಪಾಲ್ಗೊಳ್ಳಲಿರುವ ಪವಾರ್
ತೃತೀಯ ರಂಗ ರ‌್ಯಾಲಿ
ಒರಿಸ್ಸಾ: ಬಿರುಗಾಳಿಗೆ 12 ಬಲಿ
ಎನ್‌ಡಿಎಗೆ ಬಹುಮತವಿಲ್ಲ: ಬಿಜೆಪಿಗೆ ಸುಶ್ಮಾ ಆಘಾತ
ಸುಪ್ರೀಂಕೋರ್ಟ್ ಮೊರೆ ಹೋದ ವರುಣ್