ನವದೆಹಲಿ: ಸಿಖ್ ನರಮೇಧ ಪ್ರಕರಣದ ಆರೋಪಿಯಾಗಿದ್ದ ಹಿರಿಯ ಕಾಂಗ್ರೆಸ್ ಮುಖಂಡ ಜಗದೀಶ್ ಟೈಟ್ಲರ್ ಅವರಿಗೆ ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ) ಕ್ಲೀನ್ ಚಿಟ್ ನೀಡಿದೆ.
"ಈ ಪ್ರಕರಣದ ರದ್ದತಿ ವರದಿಯನ್ನು ನಾವು ಸಲ್ಲಿಸಿದ್ದೇವೆ ಮತ್ತು ತನಿಖೆಯನ್ನು ಮುಗಿಸಲು ಇಚ್ಚಿಸುವುದಾಗಿ" ಅಡಿಷನಲ್ ಚೀಪ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ರಾಕೇಶ್ ಪಂಡಿತ್ ಅವರಿಗೆ ಸಿಬಿಐ ವಕೀಲರಾದ ಸಂಜಯ್ ಕುಮಾರ್ ಅವರು ತಿಳಿಸಿದರು.
65ರ ಹರೆಯದ ಟೈಟ್ಲರ್ ಅವರು ನೈರುತ್ಯ ದೆಹಲಿಯ ಲೋಕಸಭಾ ಅಭ್ಯರ್ಥಿಯಾಗಿದ್ದಾರೆ. ಇವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆಯ ಬಳಿಕ ಉದ್ಭವಿಸಿದ್ದ ಸಿಖ್ ವಿರೋಧಿ ಗಲಭೆ ಪ್ರಕರಣ ಆರೋಪಿಯಾಗಿದ್ದರು. ಗುರುದ್ವಾರ ಪುಲ್ಬನ್ಗಾಶ್‌ನಲ್ಲಿ ಗುಂಪೊಂದು ಬೆಂಕಿ ಹಚ್ಚಿ ದೊಂಬಿ ನಡೆಸಿದ್ದ ವೇಳೆ ಮೂರು ಮಂದಿ ಸಾವನ್ನಪ್ಪಿದ್ದ ಪ್ರಕಣದಲ್ಲಿ ಇವರನ್ನು ಆರೋಪಿಯಾಗಿ ಹೆಸರಿಸಲಾಗಿತ್ತು. |