ಚುನಾವಣಾ ನೀತಿ ಸಂಹಿತೆಯು ಜಾರಿಯಲ್ಲಿರುವ ಕಾರಣ, ಸಂಪುಟ ಸಭೆಗಳ ಬಳಿಕ ಕೇಂದ್ರ ಸಂಪುಟ ಸಚಿವರು ಪತ್ರಿಕಾಗೋಷ್ಠಿಗಳನ್ನುದ್ದೇಶಿಸಿ ಮಾತನಾಡಲು ಅವಕಾಶ ನೀಡದಿರುವಂತೆ ಚುನಾವಣಾ ಆಯೋಗವು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ.
ಸಂಪುಟ ಕಾರ್ಯದರ್ಶಿಯವರಿಗೆ ಪತ್ರ ಬರೆದಿರುವ ಚುನಾವಣಾ ಆಯೋಗವು, ಪತ್ರಿಕಾಗೋಷ್ಠಿಯು ಅನಿವಾರ್ಯ ಎಂದಾದರೆ, ಸಂಬಂಧಪಟ್ಟ ಅಧಿಕಾರಿಗಳು ಪತ್ರಿಕಾಗೋಷ್ಠಿಯನ್ನುದ್ದೇಶಿ ಮಾತನಾಡಲಿ ಎಂಬುದಾಗಿ ಹೇಳಿದೆ.
ಆದರೆ ಕುತೂಹಲವೆಂಬಂತೆ, ಗೃಹ ಸಚಿವ ಪಿ.ಚಿದಂಬರಂ ಅವರು ಗುರುವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದಾರೆ. |