ಕಾಂಗ್ರೆಸ್ ಪಕ್ಷ ಎಐಸಿಸಿ ಪದಾಧಿಕಾರಿಗಳ ಪಟ್ಟಿಯಲ್ಲಿ ತಾತ್ಕಾಲಿಕವಾಗಿ ಬದಲಾವಣೆ ಮಾಡಿದೆ. ಆಂಧ್ರಪ್ರದೇಶದ ಪಕ್ಷದ ಉಸ್ತುವಾರಿಯನ್ನಾಗಿ ವಯಲಾರ್ ರವಿ ಹಾಗೂ ಅಸ್ಸಾಂ ಉಸ್ತುವಾರಿಯನ್ನಾಗಿ ಕೆ.ಕೇಶವ ರಾವ್ ಅವರನ್ನು ನಿಯೋಜಿಸಿದ್ದು, ಈ ಹಿಂದೆ ಇಲ್ಲಿ ಉಸ್ತುವಾರಿಯಾಗಿದ್ದ ಕರ್ನಾಟಕದ ಎಂ. ವೀರಪ್ಪ ಮೊಯ್‌ಲಿ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಚುನಾವಣಾ ಅಖಾಡಕ್ಕಿಳಿಯಲಿರುವುದರಿಂದ ಬದಲಾವಣೆ ಮಾಡಲಾಗಿದೆ. |