ಫ್ಯಾಶನ್ ಶೋ ಒಂದರಲ್ಲಿ ಪ್ಯಾಂಟಿನ ಗುಂಡಿಯನ್ನು ಅಶ್ಲೀಲವಾಗಿ ಬಿಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಲ್ಯಾಕ್ಮೆ ಫ್ಯಾಶನ್ ಸಪ್ತಾಹದಂಗವಾಗಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಅಕ್ಷಯ್ ಅಶ್ಲೀಲವಾಗಿ ನಡೆದುಕೊಂಡಿದ್ದಾರೆಂದು ಸಾಮಾಜಿಕ ಕಾರ್ಯಕರ್ತ ಅನಿಲ್ ನಾಯರ್ ಎಂಬವರು ದೂರು ಸಲ್ಲಿಸಿದ್ದಾರೆ.ಲೆವಿಸ್ ಜೀನ್ಸ್‌ನ ಬ್ರಾಂಡ್ ಅಂಬಾಸಿಡರ್ ಆಗಿರುವ ಅಕ್ಷಯ್ ಗ್ರಾಂಡ್ ಹೈಟ್ ಸಾಂತಾ ಕ್ರೂಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರ‌್ಯಾಂಪ್ ಮೇಲೆ ಹೆಜ್ಜೆ ಹಾಕಿದ ಅಕ್ಷಯ್ ತನ್ನ ಪತ್ನಿ ಚ್ವಿಂಕಲ್ ಖನ್ನಾ ಅರಿಗೆ ಪ್ಯಾಂಟಿನ ಗುಂಡಿಬಿಚ್ಚುವಂತೆ ಕೋರಿದ್ದು ಸಾರ್ವಜನಿಕವಾಗಿ ಪ್ಯಾಂಟಿನ ಗುಂಡಿ ಬಿಚ್ಚಲಾಗಿತ್ತು.ಅಕ್ಷಯ್ ಖನ್ನಾ, ಅವರ ಪತ್ನಿ ಟ್ವಿಂಕಲ್ ಖನ್ನಾ, ಕಾರ್ಯಕ್ರಮ ಸಂಘಟಕರು ಹಾಗೂ ಹೋಟೇಲ್ ಆಡಳಿತೆಯ ವಿರುದ್ಧ ಅಶ್ಲೀಲ ವರ್ತನೆಗಾಗಿ ವಕೋಲ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಲಾಗಿದೆ.ನಾಯರ್ ಅವರು ವಿವಿಧ ಪತ್ರಿಕೆಗಳ ಕಟ್ಟಿಂಗ್ ಹಾಗೂ ಈ ದೃಶ್ಯದ ವೀಡಿಯೋ ಚಿತ್ರಣವನ್ನೂ ಪೊಲೀಸರಿಗೆ ಸಲ್ಲಿಸಿದ್ದಾರೆ. |